ಪಾರ್ಕಿಂಗ್ ನಿರ್ಮಾಣಕ್ಕೆ ರೈತರ ವಿರೋಧ
Team Udayavani, Feb 27, 2022, 1:42 PM IST
ದೊಡ್ಡಬಳ್ಳಾಪುರ: ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಹಂತದಲ್ಲಿ ಹೆಗ್ಗಡಿಹಳ್ಳಿ ಸಮೀಪ ನಂದಿ ಬೆಟ್ಟದ ಬುಡದಲ್ಲಿ ಪಾರ್ಕಿಂಗ್ ನಿರ್ಮಾಣಕ್ಕೆದೊಡ್ಡಬಳ್ಳಾಪುರ ತಾಲೂಕಿನ ರೈತರ ಭೂಮಿಯನ್ನುಸ್ವಾಧೀನ ಮಾಡುತ್ತಿರುವುದಕ್ಕೆ ರೈತರಿಂದ ವಿರೋಧವ್ಯಕ್ತವಾಗಿದೆ. ಪಾರ್ಕಿಂಗ್ ಕಾಮಗಾರಿ ಕಾರ್ಯವನ್ನುನಿಲ್ಲಿಸುವಂತೆ ರೈತ ಸಂಘ ಮತ್ತು ಸಂತ್ರಸ್ತ ರೈತರುಪ್ರತಿಭಟನೆ ಮುಂದಾಗಿದೆ.
ತಡೆಯಾಜ್ಞೆ ತಂದ ರೈತರು: ಹೆಗ್ಗಡಿಹಳ್ಳಿ ರೈತ ಮುನಿ ನಾರಾಯಣಪ್ಪ ತನ್ನ ಭೂ ಸ್ವಾಧೀನ ತಡೆಯುವಲ್ಲಿ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಆದೇಶ ತಂದಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಅವರು, ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ಈ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆ. ಬಗರ್ ಹುಕುಂ ಸಾಗುವಳಿ ಅಡಿ 53ಅರ್ಜಿಯನ್ನು 1998ರಲ್ಲಿ ಸಲ್ಲಿಸಿದೆ. ಈ ಕುರಿತು ಕಂದಾಯ ಇಲಾಖೆ 2017-18ನೇ ಸಾಲಿನಲ್ಲಿ 94 ಸರ್ವೆ ನಂಬರ್‌ನಲ್ಲಿ 1.5 ಎಕರೆ ಭೂಮಿಯನ್ನು ಸ್ಕೆಚ್ ಕೂಡ ಮಾಡಿದ್ದಾರೆ. ಹಕ್ಕು ಪತ್ರ ನೀಡುವಂತೆ ಅಂದಿನಶಾಸಕ ಪಿಳ್ಳಮುನಿಶಾಮಪ್ಪ ಕೂಡ ಹಕ್ಕು ಪತ್ರ ನೀಡುವಂತೆ ಶಿಫಾರಸು ಮಾಡಿದ್ದರು.
ಇದೇ ಭೂಮಿಯಲ್ಲಿ ರಾಗಿ ಕೃಷಿ ಮಾಡಿಕೊಂಡು ಬಂದಿದ್ದೇವೆ. ಭೂ ಸ್ವಾಧೀನ ಕುರಿತು ಹೈ ಕೋರ್ಟ್‌ಕೂಡ ನಮ್ಮ ಪರವಾಗಿ ತಡೆಯಾಜ್ಞೆ ನೀಡಿದೆ. ಆದರೆ ಈಕುರಿತು ತಡೆಯಾಜ್ಞೆ ಆದೇಶವನ್ನೂ ನೋಡಲು ಅಧಿ ಕಾರಿಗಳು ನಿರಾಕರಿಸಿದ್ದಾರೆ. ಜಿಲ್ಲಾಧಿಕಾರಿ, ತಹ ಶೀಲ್ದಾರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಕೋರ್ಟ್‌ಅದೇಶ ಪ್ರತಿಯೊಂದಿಗೆ ಮನವಿ ಪತ್ರ ನೀಡಿ ದ್ದೇವೆ. ಆದರೂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ರೈತ ಸಂಘದ ತಾಲೂಕು ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ ಮಾತನಾಡಿ, ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ರೈತರು ಎಂದು ಅಡ್ಡಿ ಬಂದಿಲ್ಲ. ರೈತರ ಸಮಾಧಿಮೇಲೆ ಅಭಿವೃದ್ಧಿ ಯೋಜನೆ ಮಾಡಬೇಡಿ. ಈ ಕುರಿತು ರೈತರಿಗೆ ನ್ಯಾಯ ದೊರುಕುವ ಹಂತದಲ್ಲಿ ನಿಮ್ಮಅಭಿವೃದ್ಧಿ ಯೋಜನೆ ಇರಲಿ. ರೈತರಿಗೆ ಬದಲಿ ಭೂಮಿನೀಡಿ, ಇಲ್ಲವಾದಲ್ಲಿ ಈ ಭೂಮಿಯನ್ನು ರೈತ ರಿಗೆಬಿಟ್ಟುಕೊಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ರೈತ ಸಂಘದ ತಾ.ಅಧ್ಯಕ್ಷ ಹನುಮೇಗೌಡ, ಪ್ರಧಾನ ಕಾರ್ಯದರ್ಶಿ ಆರ್.ಸತೀಶ್, ರೈತ ಮುಖಂಡರಾದ ವಸಂತ್, ಮುನಿನಾರಾಯಣಪ್ಪ, ಚೋಗೊಂಡನಹಳ್ಳಿನಾಗರಾಜು, ಹನುಮಂತೇಗೌಡ, ನಾರಾಯಣಸ್ವಾಮಿ,ವಾಸುದೇವನಹಳ್ಳಿ ಕೃಷ್ಣಪ್ಪ, ಸಂತ್ರಸ್ತ ರೈತ ಚೆಲುವಮೂರ್ತಿ ಇದ್ದರು.
ಈ ಹಿಂದೆಯೂ ವಿರೋಧ ವ್ಯಕ್ತವಾಗಿತ್ತು: ಕಾಂಗ್ರೆಸ್ ಆಡಳಿತದ ಸರ್ಕಾರ ಚಿಕ್ಕಬಳ್ಳಾಪುರ ತಾಲೂಕಿನ ಕುಡವತಿ 9.20 ಎಕರೆ ಭೂಮಿಯನ್ನು ಪಾರ್ಕಿಂಗ್‌ಗಾಗಿ ಮೀಸಲಿಟ್ಟಿತ್ತು. ಆದರೆ ಬಿಜೆಪಿ ಸರ್ಕಾರ ಪೂರ್ವದಿಂದಪಶ್ಚಿಮಕ್ಕೆ ಬಂದಿದ್ದು, ನಂದಿಬೆಟ್ಟದ ತಪ್ಪಲಿನ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಗಡಿಯ ಭೂಮಿಯನ್ನುಒತ್ತುವರಿ ಮಾಡಿಕೊಳ್ಳುತ್ತಿವೆ. ಈ ಪೈಕಿ ದೊಡ್ಡಬಳ್ಳಾಪುರತಾಲೂಕಿನ ಬಗರ್ ಹುಕುಂ 53 ಫಾರಂ ಸಲ್ಲಿಸಿ ಸಾಗುವಳಿ ಮಾಡುತ್ತಿದ್ದ ಹೆಗ್ಗಡಿಹಳ್ಳಿ ಮುನಿನಾರಾಯಣಪ್ಪ1.20 ಎಕರೆ ಹಾಗೂ ಚೆಲುವ ಮೂರ್ತಿಯ 2 ಎಕರೆಸೇರಿದಂತೆ ಒಟ್ಟು 3.20 ಎಕರೆ ಭೂಮಿಯನ್ನು ಪಾರ್ಕಿಂಗ್ ಗ ಾಗಿ ಒತ್ತುವರಿ ಮಾಡಲಾಗಿದೆ.
ಈ ಕುರಿತು ಈ ಹಿಂದೆ ಪ್ರವಾಸೋದ್ಯಮ ಮಂತ್ರಿಯಾಗಿದ್ದ ಸಿ.ಪಿ. ಯೋಗೇಶ್ವರ್ ಅವರು ಸ್ಥಳಕ್ಕೆ ಬಂದುರೈತರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ದ್ದರು. ಆದರೆ ಮಾರನೇ ದಿನವೇ ಅವರು ಪ್ರವಾಸೋದ್ಯಮ ಸಚಿವ ಸ್ಥಾನದಿಂದ ಕೆಳಗಿಳಿದಿದ್ದರು. ಮತ್ತೆ ಇಲ್ಲಿನ ಕಾಮಗಾರಿ ಆರಂಭವಾದ ಮೇಲೆ ಹೈ ಕೋರ್ಟಿನಿಂದ ಕೆಲಸ ನಿಲ್ಲಿಸುವಂತೆ ರೈತ ಮುನಿನಾರಾಯಣಪ್ಪ ತಡೆಯಾಜ್ಞೆ ತಂದಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್‌ಸ್ಪೆಕ್ಟರ್ ಎಂ. ಬಿ.ನವೀನ್ ಕುಮಾರ್ ಜಿಲ್ಲಾಧಿಕಾರಿಗಳಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.