ಮಾವು ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

Team Udayavani, Apr 23, 2022, 2:00 PM IST

Untitled-1

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಹವಾಮಾನ ವೈಪ ರೀತ್ಯ ಮೊದಲಾದ ಕಾರಣಗಳಿಂದ ಮಾವು ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ಮಾವು ಬೆಳೆಗಾರರ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಈ ಕೂಡಲೇ ಮಾವು ನಷ್ಟದ ಕುರಿತು ವ್ಯಾಪಕ ಸರ್ವೆ ನಡೆಸಿ, ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವ ದಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ವಿಜಯ ಕುಮಾರ್‌, ಕಾರ್ಯದರ್ಶಿ ಸಿ.ಎಚ್‌.ರಾಮಕೃಷ್ಣ ಮಾತನಾಡಿ, ಈ ವರ್ಷ ಉತ್ತಮ ಮಾವು ಬೆಳೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತವಾಗಿದೆ. ಹವಾಮಾನ ವೈಪರೀತ್ಯ ಮೊದಲಾದ ಕಾರಣಗಳಿಂದ ಹೂವು ಬಂದಿದ್ದ ಗಿಡಗಳಲ್ಲಿ ಕಾಯಿ ಕಚ್ಚದೇ ಬೆಳೆ ಸಂಪೂರ್ಣ ಕೈಗೆ ಸಿಗದಂತಾಗಿದೆ. ಈ ನಡುವೆ ಗೊಬ್ಬರ, ಕೀಟನಾಶಕ, ಡೀಸೆಲ್‌ ಮೊದಲಾಗಿ ಕೃಷಿ ಚಟುವಟಿಕೆಗಳಿಗೆ ಬೇಕಾದ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಇಂತಹುದರ ನಡುವೆಯೂ ಉತ್ತಮ ಮಾವಿನ ಬೆಳೆ ನಿರೀಕ್ಷೆ ಮಾಡಿದ್ದ ರೈತರಿಗೆ ಬೆಳೆ ಬರದೇ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

ಅಗತ್ಯ ಪರಿಹಾರ ನೀಡಿ: ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶೇ.60ರಷ್ಟು ಬೆಳೆ ಬಂದಿದೆ ಎಂದು ವರದಿ ನೀಡಿ, ಇಲಾಖೆ ಇತ್ತ ಗಮನ ಹರಿಸದೇ ಇರುವುದು ಖಂಡನೀಯ. ಈ ಕೂಡಲೇ ಮಾವು ಬೆಳೆಗಾರರ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಹಾಗೂ ಸರ್ಕಾರ ಮಧ್ಯ ಪ್ರವೇಶಿಸಿ ಮಾವು ನಷ್ಟದ ಕುರಿತು ವ್ಯಾಪಕ ಸರ್ವೆ ನಡೆಸಿ ಬೆಳೆಗಾರರಿಗೆ ಅಗತ್ಯ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಉತ್ತಮ ಬೆಲೆ ದೊರೆಯಲಿದೆ: ರೈತರಿಂದ ಮನವಿ ಸ್ವೀಕರಿಸಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇ ಶಕ ಗುಣವಂತ ಮಾತನಾಡಿ, ಜಿಲ್ಲೆಯಲ್ಲಿ 7,587 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ದೊಡ್ಡ ಬಳ್ಳಾಪುರ ತಾಲೂಕಿನಲ್ಲಿ 1,261 ಎಕರೆ ಪ್ರದೇಶದಲ್ಲಿ ಮಾವು ಬೆಳೆ ಇದೆ. ಮಾವು ಅಭಿವೃದ್ಧಿ ನಿಗಮದ ಪ್ರಕಾರ ರಾಜ್ಯದಲ್ಲಿ ಅಂದಾಜು ಶೇ.30ರಿಂದ 50ರಷ್ಟು ಬೆಳೆ ಬಂದಿದೆ. ಇಳುವರಿ ಕಡಿಮೆ ಇರುವುದಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ. ರೈತರ ಮನವಿ ಯನ್ನು ಸರ್ಕಾರದ ಗಮ ನಕ್ಕೆ ತರಲಾಗುವುದು ಎಂದರು.

ತೋಟಗಾರಿಕೆ ಇಲಾಖೆ ತಾಲೂಕು ಸಹಾ ಯಕ ನಿರ್ದೇಶಕಿ ಎಂ.ಎಸ್‌.ದೀಪಾ, ಮಾರುತಿ ಇದ್ದರು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್‌.ಚಂದ್ರತೇಜಸ್ವಿ, ಎಲ್‌.ರಮೇಶ್‌, ಮುಖಂಡ ಸದಾಶಿವ ಮೂರ್ತಿ, ನಾರಾಯಣಸ್ವಾಮಿ, ಎಸ್‌.ಆರ್‌.ಕೃಷ್ಣಪ್ಪ, ಸಿ.ಆರ್‌. ಮುನಿರಾಜು, ರಾಜಣ್ಣ, ಗೋವಿಂದ ರಾಜು, ಹನುಮಂತರಾಜು, ಮಹೇಂದ್ರ, ಆನಂದ್‌ ಮತ್ತಿತರರು ಇದ್ದರು.

ಟಾಪ್ ನ್ಯೂಸ್

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.