ರೈತರ ಅಹೋರಾತ್ರಿ ಧರಣಿಗೆ ಬಿಎಸ್ಪಿ ಬೆಂಬಲ
Team Udayavani, Jun 13, 2022, 3:08 PM IST
ವಿಜಯಪುರ: ರೈತರು ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಬಿಎಸ್‌ಪಿ ಪಕ್ಷದಿಂದ ಬೆಂಬಲ ವ್ಯಕ್ತಪಡಿಸಿ, ಹೋರಾಟ ನಡೆಸಿದರು.
ಬಿಎಸ್ಪಿ ಪಕ್ಷದ ರಾಜ್ಯ ಮುಖಂಡ ಆರ್. ಮುನಿ ಯಪ್ಪ ಮಾತನಾಡಿ, ಬೆಂಗಳೂರು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಿದೆ ಎನ್ನುವ ಕಾರಣದಿಂದ ಸರ್ಕಾರ, ನೀರಾವರಿಯಿಂದ ಸಂಪದ್ಭರಿತವಾಗಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಿಕ್ಕೆ ಮುಂದಾಗಿದ್ದಾರೆ. ಇದರಲ್ಲಿ ಬಹು ತೇಕ ರಾಜಕಾರಣಿಗಳೇ ಕೆಐಎಡಿಬಿಯ ಮೂಲಕ ಬಂಡವಾಳ ಹೂಡಿಕೆ ಮಾಡಿಕೊಂಡಿದ್ದಾರೆ. ಇದ ರಿಂದ ಅವರಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಲಾಭದಾಯಕ ಆಗಲಿರುವ ಕಾರಣಕ್ಕಾಗಿ ರೈತರು ಹೋರಾಟ ನಡೆಸುತ್ತಿದ್ದರೂ, ಅವರು ಈ ಕಡೆಗೆ ಸುಳಿದಿಲ್ಲ ಎಂದು ಆರೋಪಿಸಿದರು.
ರೈತರು ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಒಂದಿಂಚು ಭೂಮಿಯನ್ನು ಬಿಟ್ಟುಕೊಡಲಿಕ್ಕೆ ಮುಂದಾಗಬಾರದು. ಹಿಂದೆ ಭೂಮಿಯನ್ನು ಕೊಟ್ಟಿರುವವರ ಸ್ಥಿತಿಗತಿ ಏನಾಗಿವೆ ಎನ್ನುವುದನ್ನು ಗಮನಿಸಿಕೊಳ್ಳಬೇಕು ಎಂದರು.
ರಾಜ್ಯ ಮುಖಂಡ ನರಸಿಂಹಯ್ಯ ಮಾತನಾಡಿ, ರಾಜ್ಯ ಸರ್ಕಾರ, ಕೆಐಎಡಿಬಿ ಮುಂದಿಟ್ಟುಕೊಂಡು ರೈತರನ್ನು ಒಕ್ಕಲೆಬ್ಬಿಸುತ್ತಿದೆ. ತಾಲೂಕಿನಲ್ಲಿ ರೈತರ ಭೂಮಿಯನ್ನು ಕೈಗಾರಿಕಾ ವಲಯವನ್ನಾಗಿ ಮಾಡುವ ಮುನ್ನಾ ಶಾಸನ ಸಭೆಯಲ್ಲಿ ಚರ್ಚೆ ನಡೆ ಯುತ್ತದೆ. ಈ ಸಮಯದಲ್ಲಿ ಸ್ಥಳೀಯ ಶಾಸಕರಿಗೆ ಮಾಹಿತಿ ಇದ್ದರೂ ಕೂಡಾ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿ ಕೊಂಡಿರುವ ಅವರೂ ಕೂಡಾ ಇದಕ್ಕೆ ಒಪ್ಪಿಗೆ ಸೂಚಿಸಿರುವ ಕಾರಣದಿಂದ ರಾಜ್ಯಪತ್ರದಲ್ಲಿ ಕೈಗಾರಿಕೆ ಪ್ರದೇಶವೆಂದು ಗುರುತಿಸ ಲಾಗಿದೆ ಎಂದರು.
ಭೂಮಿ ಬಿಟ್ಟು ಕೊಡುವುದಿಲ್ಲ: ಈಗ ರೈತರ ಬಳಿ ಯಲ್ಲಿ ಬಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರೂ ಕೂಡಾ ಸಾಕಷ್ಟು ಬಂಡ ವಾಳ ಹೂಡಿಕೆ ಮಾಡಲಿಕ್ಕೆ ಮುಂದಾಗಿದ್ದು, ಶೇ.80 ರಷ್ಟು ರೈತರು ಭೂಮಿ ಕೊಡಲಿಕ್ಕೆ ಮುಂದಾಗಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ರೈತರಲ್ಲಿ ಆತ್ಮಸ್ಥೈರ್ಯ ಕುಗ್ಗಿ ಸುವಂತಹ ಮಾತುಗಳನ್ನಾಡಿದ್ದಾರೆ. ನಾವು ಯಾವುದೇ ಕಾರಣಕ್ಕೂ ರೈತರ ಒಂದಿಂಚು ಭೂಮಿ ಯನ್ನು ಬಿಟ್ಟು ಕೊಡುವುದಿಲ್ಲ. ನಮ್ಮ ಹೋರಾಟ ರೈತರಿಗೆ ನ್ಯಾಯ ಸಿಗುವ ತನಕ ನಡೆಯಲಿದೆ ಎಂದು ಹೇಳಿದರು.
ದೃತಿಗೆಡುವುದು ಬೇಡ: ಜಿಲ್ಲಾ ಮುಖಂಡ ತಿಮ್ಮ ರಾಯಪ್ಪ ಮಾತನಾಡಿ, ರೈತರು ಒಗ್ಗಟ್ಟು ಕಾಪಾಡಿ ಕೊಂಡರೆ ಸರ್ಕಾರವನ್ನು ನಡುಗಿಸುವಂತಹ ಶಕ್ತಿ ರೈತರಿಗಿದೆ. ರೈತರ ಪರವಾದ ನಮ್ಮ ಹೋರಾಟ ತೀವ್ರವಾಗಲಿದೆ. ಮುಖ್ಯಮಂತ್ರಿಯ ಮನೆಗೆ ಮುತ್ತಿಗೆ ಹಾಕಲಿಕ್ಕೂ ಕೂಡಾ ನಾವು ಸಿದ್ಧರಾಗಿದ್ದೇವೆ. ರೈತರು ದೃತಿಗೆಡುವುದು ಬೇಡ. ಸರ್ಕಾರಕ್ಕೆ ಪಾಠ ಕಲಿಸಬೇಕಾ ಗಿದೆ ಎಂದರು.
ರಾಜ್ಯ ಮುಖಂಡ ನಂದಿಗುಂದ ವೆಂಕ ಟೇಶ್, ತಾಲೂಕು ಅಧ್ಯಕ್ಷ ಬಂಗಾರಪ್ಪ, ಮುಖಂಡ ನಾರಾ ಯಣಸ್ವಾಮಿ, ನರಸಿಂಹರಾಜು, ಲಕ್ಷ್ಮೀಶ್ ರೈತ ಮುಖಂಡ ಸಿ.ಕೆ.ರಾಮಚಂದ್ರಪ್ಪ, ನಲ್ಲಪ್ಪನಹಳ್ಳಿ ನಂಜಪ್ಪ, ಕಾರಹಳ್ಳಿ ಶ್ರೀನಿವಾಸ್, ಮಾರೇಗೌಡ, ವೆಂಕ ಟರಮಣಪ್ಪ, ನಂಜೇಗೌಡ, ಅಶ್ವಥಪ್ಪ, ಮುಕುಂದ್, ಲಕ್ಷ್ಮಮ್ಮ, ಮಾರುತೇಶ್, ಮೋಹನ್ ಕುಮಾರ್ ಹಾಗೂ ರೈತ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.