ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ
Team Udayavani, Jan 22, 2021, 12:16 PM IST
ನೆಲಮಂಗಲ: ನಗರಸಭೆ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಮೈಲನಹಳ್ಳಿ ಸಮೀಪದ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಅಪಾಯ ತಪ್ಪಿದೆ. ನಗರಸಭೆ ಅಧಿಕಾರಿಗಳು ಹಸಿ- ಒಣ ಕಸವನ್ನು ವಿಂಗಡಣೆ ಮಾಡದೇ ಪ್ಲಾಸ್ಟಿಕ್ ಸೇರಿದಂತೆ ಅಪಾಯದ ವಸ್ತುಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುರಿಯು ತ್ತಿದ್ದು, ಇದರಿಂದ ವಿಂಗಡಣೆ ಮಾಡಲಾಗದೇ ತ್ಯಾಜ್ಯ ಸಂಗ್ರಹವಾಗಿದೆ. ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಪಾಯದಿಂದ ಪಾರು: ವಿಶಾಲ ಪ್ರದೇಶದಲ್ಲಿ ಹೆಚ್ಚು ಪ್ಲಾಸ್ಟಿಕ್ ವಸ್ತುಗಳು ಇರುವುದರಿಂದ ಬೆಂಕಿ ಆವರಿಸುವ ಆತಂಕ ಎದುರಾಗಿತ್ತು. ಆದರೆ, ಸರಿ ಸಮಯಕ್ಕೆ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣ ಮಾಡಿ ಅಪಾಯದಿಂದ ಪಾರು ಮಾಡಿದ್ದು, ಘಟಕದಲ್ಲಿನ ಯಂತ್ರಗಳು ಹಾಗೂ ನೌಕರರ ಮನೆಗಳಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:ಅಬಕಾರಿ ಇಲಾಖೆಯಲ್ಲಿ ಮಾಡುವುದೇನಿದೆ?
ನಗರಸಭೆ ಯಡವಟ್ಟು: ಪುರಸಭೆಯಾಗಿದ್ದಾಗ ನಗರದ ತ್ಯಾಜ್ಯವನ್ನು ಸುರಿಯುತ್ತಿದ್ದ ಅಧಿಕಾರಿಗಳು, ಈಗ ನಗರಸಭೆ ವ್ಯಾಪ್ತಿಗೆ ವಿಸ್ತರಣೆ ಮಾಡಿದ್ದಾರೆ. ವಿಶಾಲ ಪ್ರದೇಶವಿದ್ದರು ಸರಿ ನಿರ್ವಹಣೆ ಮಾಡಿಲ್ಲ. ವಾಹನಗಳನ್ನು ತಂದು ಸುರಿಯುವ ಕೆಲಸ ಮಾಡುತ್ತಿದ್ದು, ಅವುಗಳನ್ನು ವಿಂಗಡಣೆ ಮಾಡಿ ಪುನರ್ ಬಳಕೆ ಹಾಗೂ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಕೆಲಸ ಮಾಡುತ್ತಿಲ್ಲ. ಇದರಿಂದ ವಿಲೇವಾರಿ ಘಟಕ ಅವ್ಯವಸ್ಥೆ ಗೂಡಾಗಿದ್ದು, ಅಧಿಕಾರಿಗಳ ಯಡವಟ್ಟಿಗೆ ಸಾಕ್ಷಿಯಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.