ಉದ್ಯಮಶೀಲತೆ ಕಾನೂನು ನ್ಯೂನತೆ ಸರಿಪಡಿಸಿ
Team Udayavani, Feb 8, 2018, 2:44 PM IST
ದೇವನಹಳ್ಳಿ: ಉದ್ಯಮಶೀಲತೆ ಯೋಜನೆಯಲ್ಲಿ ಕೆಲವು ನ್ಯೂನತೆಗಳಿದ್ದು ಸರ್ಕಾರ ಎಚ್ಚೆತ್ತು ಕಾನೂನು ತಿದ್ದುಪಡಿ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ವತಿಯಿಂದ 2017-18ರ ಸಾಲಿನ ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉದ್ಯಮಶೀಲರಿಗೆ ಉದ್ಯಮಶೀಲತಾ ಅಭಿವೃದ್ಧಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯೋಗ ಸೃಷ್ಟಿ: ಗ್ರಾಮೀಣ ಪ್ರದೇಶದವರು ಉದ್ಯಮ ಸ್ಥಾಪಿಸಲು ಮಾಡಲು ಅರ್ಜಿ ಸಲ್ಲಿಸಿದಾಗ ನಗರ ಪ್ರದೇಶದಲ್ಲಿ ಜಾಗಕ್ಕೆ ಸಂಬಂಧಿಸಿದಂತೆ ಕೇಳುತ್ತಾರೆ. ಆಗ, ಬ್ಯಾಂಕ್‌ನಿಂದ ಲೋನ್ ಸಿಗುವುದಿಲ್ಲ. ಗ್ರಾಮೀಣ ಪ್ರದೇಶದವರಿಗೂ ಈ ರೀತಿ
ಮಾಡಿದರೆ ಯುವಕರಿಗೆ ಉದ್ಯೋಗ ಸೃಷ್ಟಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಹಾಗೆಯೇ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಹಬ್ ಯೋಜನೆ ತಂದಿರುವುದರಿಂದ 1ಕೋಟಿವರೆಗೆ ಸಾಲಸಿಗಲಿದ್ದು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಅರ್ಜಿ ಸಲ್ಲಿಸಿ: ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ರಾಜಾನಾಯಕ್, ಎಸ್ಸಿ, ಎಸ್ಟಿ ಯುವ ಸಮುದಾಯವನ್ನು ಉದ್ಯಮದಲ್ಲಿ ತೊಡಗಿಸುವ ಸಲುವಾಗಿ ಶೇ.4ರ ಬಡ್ಡಿ ದರದಲ್ಲಿ 2ಕೋಟಿಯವರೆಗೆ ಸಾಲ ನೀಡುತ್ತಿದ್ದೇವೆ. ಪ್ರಧಾನ ಮಂತ್ರಿಗಳ ಆಕಾಂಕ್ಷೆಯಂತೆ ಹಬ್ ಯೋಜನೆ ಜಾರಿಗೆ ತಂದಿದ್ದು, ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಎಲ್ಲಾ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬಹುದು. 4-5 ಬ್ಯಾಂಕುಗಳ ಹೆಸರನ್ನು ನಮೂದಿಸಿರಬೇಕು. ಲೋನ್ ಬಂದಾಗ ಬ್ಯಾಂಕಿನವರು ಕರೆಯುತ್ತಾರೆ. ಮಹಿಳೆಯರು ಉದ್ಯಮದಲ್ಲಿ ತೊಡಗಲು 2ಕೋಟಿವರೆಗೆ ಸಾಲ ನೀಡುತ್ತಿದ್ದೇವೆಂದು ಹೇಳಿದರು.
ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ, ಯುವತಿಯರು ಅತಿ ಸಣ್ಣ ಉದ್ಯಮ ಸ್ಥಾಪಿಸಿ, ಸ್ವಯಂ ಉದ್ಯೋಗ ಕೈಗೊಳ್ಳುವುದನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆ ಜಾರಿಗೆ ತಂದಿದೆ ಎಂದರು.
ಜಿಪಂ ಉಪಾಧ್ಯಕ್ಷೆ ಅನಂತಕುಮಾರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಎಸ್ಸಿ, ಎಸ್ಟಿ ಜನರಿಗೆ ಉದ್ಯಮ ಮಾಡುವುದರಿಂದ ಸರ್ಕಾರ ಮತ್ತು ಬ್ಯಾಂಕ್‌ನಿಂದ ಎಷ್ಟು ಸಾಲಸೌಲಭ್ಯ ಸಿಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಇಂತಹ ಕಾರ್ಯಾಗಾರಗಳು ಹೆಚ್ಚಾಗಬೇಕೆಂದರು.
ತಾಪಂ ಅಧ್ಯಕ್ಷೆ ಭಾರತಿ, ಜಿಪಂ ಸದಸ್ಯೆ ರಾಧಮ್ಮ, ತಾಪಂ ಉಪಾಧ್ಯಕ್ಷೆ ನಂದಿನಿ, ಸದಸ್ಯರಾದ ಕಾರಹಳ್ಳಿ ಶ್ರೀನಿವಾಸ್, ಆರ್.ಎ.ಮುನೇಗೌಡ, ಎಸ್. ಮಹೇಶ್, ಸಂಪನ್ಮೂಲ ವ್ಯಕ್ತಿ ಕೋಕಿಲಾ, ತಾಲೂಕು ಸೊಸೈಟಿ ನಿರ್ದೇಶಕ ನಾಗೇಶ್‌ಬಾಬು, ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ನಾರಾಯಣಪ್ಪ ಮತ್ತಿತರರಿದ್ದರು.
ಸಾಲ ಸಾಕಾಗಲ
5ರಿಂದ 10ಕೋಟಿಯವರೆಗೆ ಸಾಲ ಸೌಲಭ್ಯ ನೀಡಿದರೆ ಸಾಕಾಗುವುದಿಲ್ಲ. ಅವರು ಯಾವ ಉದ್ಯಮ ಮಾಡಿದರೆ ಯಶಸ್ಸು ಗಳಿಸುತ್ತಾರೆ ಎಂಬುದರ ಬಗ್ಗೆ ತರಬೇತಿಗಳಾಗಬೇಕು. ಕನಿಷ್ಠ 2ಕೋಟಿ ನೀಡಿದರೂ ಹೆಚ್ಚು ಅಭಿವೃದ್ಧಿಪಡಿಸಬಹುದು. ಕಳೆದ ಬಜೆಟ್‌ನಲ್ಲಿ ಕೌಶಲ್ಯ ಅಭಿವೃದ್ಧಿಗೆ 5ಕೋಟಿ ಅನುದಾನ ನೀಡಲಾಗಿತ್ತು. ಸರ್ಕಾರ ಶೇ.4ರ ಬಡ್ಡಿದರದಲ್ಲಿ ಉದ್ಯಮ ಮಾಡಲು ಸಾಲ ಸೌಲಭ್ಯ ನೀಡುತ್ತಿದೆ. ಅದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.