![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 14, 2021, 7:26 PM IST
ನೆಲಮಂಗಲ: ಆಟೋ ಚಾಲಕರು ಹಾಗೂ ಕೊರೊನಾ ವಾರಿಯರ್ಸ್ಗೆ ದಿನಸಿ ಕಿಟ್ ನೀಡುವ ಸಮಯದಲ್ಲಿ ನಗರದ ತಾಲೂಕು ಕಚೇರಿ ಸಮೀಪ ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಮುಗಿಬಿದ್ದ ಪರಿಣಾಮ, ಸಾರ್ವಜನಿಕತನ್ನು ನಿಯಂತ್ರಣ ಮಾಡಲು ಪೊಲೀಸರು ಪರದಾಡಿದರು.
ನಗರದ ತಾಲೂಕು ಕಚೇರಿಯ ಮುಂಭಾಗ ದಲ್ಲಿ ತಾಲೂಕಿನ ಬಡ ಜನರು ಹಾಗೂ ಕೊರೊನಾ ವಾರಿಯರ್ಸ್ಗಳಿಗೆ ಮಣ್ಣೆ ಗ್ರಾಪಂ ಸದಸ್ಯ ಮಂಜುನಾಥ್ 4 ಸಾವಿರ ಕಿಟ್ ವಿತರಣೆ ಮಾಡಿ, ತಾಲೂಕಿಗೆ ಮಾದರಿಯಾಗಿದ್ದಾರೆ.
ಲಾಕ್ಡೌನ್ ಪ್ರಭಾವ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿದ್ದ ಲಾಕ್ಡೌನ್ ಜನಸಾಮಾನ್ಯರಿಗೆ ಬಹಳಷ್ಟು ಕಷ್ಟ ನೀಡಿದೆ. ದಿನಸಿ ಕಿಟ್ ನೀಡುವ ವಿಷಯ ತಿಳಿದ ನಗರದ ಒಂದೂವರೆ ಸಾವಿರ ಜನರು, ಏಕಕಾಲದಲ್ಲಿ ತರಕಾರಿ, ದಿನಸಿ ಕಿಟ್ಗಳಿಗಾಗಿ ಸಾಲಿನಲ್ಲಿ ಬರದೇ ಒಟ್ಟಾಗಿ ಮುಗಿಬಿದ್ದ ಕಾರಣ ಕೆಲಗಂಟೆಗಳ ಕಾಲ ಬಿಗುವಿನವಾತಾವರಣ ಸೃಷ್ಟಿ ಯಾಗಿತ್ತು. ಪೊಲೀಸರು ನಿಯಂತ್ರಣ ಮಾಡಲು ಪರದಾಡಿದರು. ಕಿತ್ತುಕೊಳ್ಳುವ ಪ್ರಯತ್ನವಾಗಿ ಗಲಾಟೆ ಆರಂಭವಾಗುವ ಸಮಯಕ್ಕೆ ಜನರನ್ನು ನಿಯಂತ್ರಣ ಮಾಡುವ ಸಲುವಾಗಿ ತಹಶೀಲ್ದಾರ್ ಸೂಚನೆಯಂತೆ ವಿತರಣೆ ಸ್ಥಗಿತ ಗೊಳಿಸಿದರು.
ಅನಿವಾರ್ಯವಿರುವವರಿಗೆ ಎರಡು ದಿನದಲ್ಲಿ ದಿನಸಿ ಕಿಟ್ ನೀಡುವ ಭರವಸೆಯನ್ನು ಆಯೋಜಕರು ನೀಡಿದರು. ಶಾಸಕರ ಚಾಲನೆ: ತಾಲೂಕಿನ 4 ಸಾವಿರಕ್ಕೂ ಹೆಚ್ಚು ದಿನಸಿ ಕಿಟ್ ಹಾಗೂ ತರಕಾರಿ ಕಿಟ್ಗಳನ್ನು ನೀಡಲು ತಾಲೂಕು ಕಚೇರಿ ಸಮೀಪ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಚಾಲನೆ ನೀಡಿದರು.
ಆಹಾರ ಕಿಟ್ನಲ್ಲಿ ಅಕ್ಕಿ, ಬೇಳೆ, ಕಡಲೆ ಕಾಳು, ಸೋಪು, ಉಪ್ಪು, ಸಾಂಬರ್ಪುಡಿ ಸೇರಿದಂತೆ ಅನೇಕ ದಿನಸಿ ಪದಾರ್ಥಗಳು ಹಾಗೂ ಈರುಳ್ಳಿ, ಕೋಸು ಸೇರಿದಂತೆ 10 ಕೆ.ಜಿಯಷ್ಟು ತರಕಾರಿಯನ್ನು ವಿತರಣೆ ಮಾಡಲಾಯಿತು. ತಹಶೀಲ್ದಾರ್ ಮಂಜುನಾಥ್.ಕೆ, ತಾಲೂಕು ಆರೋಗ್ಯಾಧಿಕಾರಿ ಹರೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಶಾಂತಕುಮಾರ್, ಗ್ರಾಪಂ ಮಾಜಿ ಸದಸ್ಯ ಕೆಂಪರಾಜು, ಎಪಿಎಂಸಿ ನಿರ್ದೇಶಕ ಗೋವಿಂದರಾಜು, ಮುಖಂಡರಾದ ಬೈರೇಶ್, ಕೋಡಪ್ಪ ನಹಳ್ಳಿ ವೆಂಕಟೇಶ್ ಹಾಜರಿದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.