ರೈತರು ಹೈನುಗಾರಿಕೆ ಮಾಡಿ ಬದುಕು ಕಟ್ಟಿಕೊಳ್ಳಲಿ
ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಶ್ರೀನಿವಾಸ್ ಸಲಹೆ| ಸೋಲೂರಿನಲ್ಲಿ ಎಂಪಿಸಿಎಸ್ ವಾರ್ಷಿಕ ಸಾಮಾನ್ಯ ಸಭೆ
Team Udayavani, Oct 9, 2021, 11:47 AM IST
ದೇವನಹಳ್ಳಿ: ರೈತರಿಗೆ ಹೈನುಗಾರಿಕೆ ವರದಾನ ವಾಗಿದ್ದು, ರೈತರು ಹಸುಗಳನ್ನು ಮಕ್ಕಳಂತೆ ಜೋಪಾನ ಮಾಡಿ ಗುಣಮಟ್ಟದ ಹಾಲು ಸರಬರಾಜು ಮಾಡಿ ಆರ್ಥಿಕವಾಗಿ ಸದೃಢ ರಾಗಬೇಕು ಎಂದು ಬೆಂಗ ಳೂರು ಹಾಲು ಒಕ್ಕೂಟದ ನಿರ್ದೇಶಕ ಬಿ. ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಸೋಲೂರು ಗ್ರಾಮದ ಹಾಲುಉತ್ಪಾದಕರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ 2020-21ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಮಾತ ನಾಡಿದ ಅವರು, ತಾಲೂಕಿನಲ್ಲಿ ಹಾಲು ಉತ್ಪಾದಕ ರೈತರಿಗೆ ಹದಿನೈದು ದಿನಕ್ಕೊಮ್ಮೆ ಹಾಲು ಸರಬರಾಜು ಮಾಡಿದ ಹಣವನ್ನು ರೈತರ ಖಾತೆಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಗುಣಮಟ್ಟದ ಹಾಲು ಪೂರೈಸುವುದರಿಂದ ಸರಾಸರಿ ಆರ್ಥಿಕ ಅಭಿವೃದ್ಧಿಯೊಂದಿಗೆ ಸಂಘದ ಬೆಳೆವಣಿಗೆಗೂ ಸಹಕಾರಿಯಾಗಲಿದೆ. ಗ್ರಾಮೀಣ ಜನರ ಬದುಕು ಹಸನು ಮಾಡುವುದರಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸಿದೆ ಎಂದರು. ರಾಸುಗಳಿಗೆ ವಿಮೆ ಮಾಡಿಸಿ: ಸಂಘವು ಪ್ರಸ್ತತ ವರ್ಷದಲ್ಲಿ 236 ಸದಸ್ಯರನ್ನು ಹೊಂದಿದೆ. ಅದರಲ್ಲಿ ಮಹಿಳಾ ಸದಸ್ಯರು 90, ಪ.ಜಾತಿ ಸದಸ್ಯರು 2, ಪ. ಪಂಗಡದ ಸದಸ್ಯರು 5 ಒಟ್ಟು 90 ಜನ ಸದಸ್ಯರು ಹಾಲು ಸರಬರಾಜು ಮಾಡುತ್ತಿದ್ದು, ದಿನಕ್ಕೆ 1,300 ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಪ್ರತಿ ಸರತಿಯಲ್ಲಿ ಹಾಲಿನ ಜಿಡ್ಡಿನ ಪರೀಕ್ಷೆ ನಡೆಸಿ ಸದಸ್ಯರಿಗೆ ಜಿಡ್ಡಿನಾಂಶದ ಆಧಾರದ ಮೇಲೆ ಹಾಲಿನ ದರವನ್ನು ನೀಡಲಾಗುತ್ತದೆ.
ಇದನ್ನೂ ಓದಿ;- ಬಿಎಸ್ ವೈ ಆಪ್ತರ ಮೇಲಿನ ಐಟಿ ದಾಳಿಯಲ್ಲಿ ರಾಜಕೀಯ ವಾಸನೆ ಬರುತ್ತಿದೆ: ಸಿದ್ದರಾಮಯ್ಯ
ಉತ್ಪಾದಕರು ರಾಸುಗಳಿಗೆ ಗುಣಮಟ್ಟದ ಆಹಾರ ನೀಡಿ ಪೋಷಿಸಿದರೆ ಗುಣಮಟ್ಟದ ಹಾಲು ಸಿಗುತ್ತದೆ. ಪ್ರತಿಯೊಬ್ಬರೂ ತಪ್ಪದೇ ರಾಸುಗಳಿಗೆ ವಿಮೆ ಮಾಡಿಸಬೇಕು. ಸಂಘದ 72 ಹಾಲು ಉತ್ಪಾದಕರಿಗೆ ಬಮೂಲ್ ವಿಮೆ ಮಾಡಿಸಲಾಗಿದೆ. ಸಂಘವು ಮತ್ತಷ್ಟು ಸದೃಢಗೊಳ್ಳಲು ಸದಸ್ಯತ್ವ ಹೆಚ್ಚಳ ಮಾಡಬೇಕು ಎಂದರು. ಗುಣಮಟ್ಟಕ್ಕೆ ಆದ್ಯತೆ ನೀಡಿ: ಸಂಘದ ಅಧ್ಯಕ್ಷ ಎಂ.ಚಿಕ್ಕಮುನಿಯಪ್ಪ ಮಾತನಾಡಿ, ಸಂಘದಲ್ಲಿ ಪ್ರಸ್ತುತ 2020-21ನೇ ಸಾಲಿನ ವಾರ್ಷಿಕ ವರದಿಯನ್ನು ಪರಿಶೀಲಿಸಲಾಗಿದೆ.
23 ಪೈಸೆ ಬಟವಾಡೆ ಮಾಡಲಾಗಿದೆ. ಹಾಲಿನ ಒಟ್ಟು ವ್ಯಾಪಾರ ಲಾಭ 12.44 ಲಕ್ಷ ರೂ. 72 ಪೈಸೆಗಳಿಸಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಲಾಭದಲ್ಲಿದೆ. ಪ್ರತಿಯೊಬ್ಬರೂ ಹಾಲು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಘದ ಹೆಚ್ಚು ಸದಸ್ಯತ್ವ ಹೊಂದಿದರೆ ಸಂಘವು ಮಾದರಿಯಾಗುತ್ತದೆ ಎಂದರು.
ದೇವನಹಳ್ಳಿ ಶಿಬಿರ ಕಚೇರಿಯ ಸಹಾಯಕ ವ್ಯವಸ್ಥಾಪಕ ಡಿ.ಕೆ.ಮಂಜುನಾಥ್, ಸಂಘದ ಉಪಾ ಧ್ಯಕ್ಷ ಬಂಡಿ.ಕೆ.ಕೃಷ್ಣಪ್ಪ, ನಿರ್ದೇಶಕ ನರಸಿಂಹ ರಾಜು, ಎನ್. ಅಣ್ಣಯ್ಯಪ್ಪ, ಆರ್.ನಾರಾಯಣ…, ಸುಬ್ರ ಮಣಿ, ಪಿ.ರಾಘವೇಂದ್ರ, ಎನ್.ಮುನಿಯಪ್ಪ, ನವೀನ್ ಕುಮಾರ್, ಲಕ್ಷ್ಮಯ್ಯ, ಕಲ್ಪನಾ, ಪಿಳ್ಳ ಮುನಿಯಮ್ಮ, ಮುಖ್ಯ ಕಾರ್ಯನಿರ್ವಾಹಕ ಬಿ. ರಾಜಣ್ಣ, ಹಾಲು ಪರೀಕ್ಷಕ ಎನ್. ನಾರಾಯಣ ಮೂರ್ತಿ, ಸಿಬ್ಬಂದಿ ಗಗನ್.ಎನ್, ಟಿ.ಮೋಹನ್, ಮೈಲಾ ರಪ್ಪ, ರಾಮಣ್ಣ, ಮಾಜಿ ಸದಸ್ಯ ಕೆಂಪಣ್ಣ, ಮಾಜಿ ಸದಸ್ಯೆ ಚೌಡಮ್ಮ ಹಾಗೂ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.