![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 11, 2020, 6:43 AM IST
ವಿಜಯಪುರ: ಪ್ರತಿ ವರ್ಷ ಹೊಸ ಧ್ಯೇಯದೊಂದಿಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಇನ್ನರ್ ವ್ಹೀಲ್ ಸಂಸ್ಥೆ, ಈ ವರ್ಷ ಆರೋಗ್ಯ ಮತ್ತು ಸ್ವತ್ಛತೆಗೆ ಆದ್ಯತೆ ನೀಡುವತ್ತ ಜನರಲ್ಲಿ ಅರಿವು ಮೂಡಿಸಿ ಸೇವೆ ಸಲ್ಲಿಸುವ ಗುರಿ ಹೊಂದಿದೆ ಎಂದು ವಿಜಯಪುರ ಇನ್ನರ್‌ವ್ಹೀಲ್ ಅಧ್ಯಕ್ಷೆ ಗಾಯತ್ರಿ ಮಂಜುನಾಥ್ ತಿಳಿಸಿದರು.
ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ಸರಳವಾಗಿ ಏರ್ಪ ಡಿಸಿದ್ದ ಪದವಿ ಸ್ವೀಕಾರ ಸಮಾರಂಭದಲ್ಲಿ ವಿಜಯಪುರ ಇನ್ನರ್‌ವ್ಹೀಲ್ ಸಂಘದ 2020-21ನೇ ಸಾಲಿನ ನೂತನ ಅಧ್ಯಕ್ಷೆ ಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಜನರು ಕೊರೊನಾ ಸಂಕಷ್ಟದಿಂದ ಹೆಚ್ಚು ಬಳಲಿದ್ದು, ನಮ್ಮ ಸೇವಾ ಕಾರ್ಯಗಳಲ್ಲಿ ವೃದರು, ಅನಾಥಾಶ್ರಮ, ಆರೋಗ್ಯ, ಸ್ವತ್ಛತೆ ಹಾಗೂ ಪರಿಸರ ಕಾಳಜಿ ಯೋಜನೆ ಅಳವಡಿಸಿಕೊಳ್ಳುತ್ತೇವೆ.
ಈ ಬಾರಿ ಇನ್ನು ಹೆಚ್ಚಿನ ಜವಾಬ್ದಾರಿಯೊಂದಿಗೆ ಅಧ್ಯಕ್ಷ ಸ್ಥಾನದ ಅವಕಾಶ ಸದುಪಯೋಗ ಪಡಿಸಿಕೊಳ್ಳುತ್ತೇನೆ ಎಂದರು. ಸಂಘದ ನಿಕಟಪೂರ್ವ ಅಧ್ಯಕ್ಷೆ ನಳಿನಿ ಶಾಂತಕುಮಾರ್, ಸಂಘದ ನಿಯಮಗಳ ಅನುಸಾರ ನೂತನ ಅಧ್ಯಕ್ಷೆ ಗಾಯತ್ರಿ ಮಂಜುನಾಥ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ವಿಜಯಪುರ ರೋಟರಿಗೆ ಪೂರ್ವ ಭಾವಿ ಅಧ್ಯಕ್ಷ ಚ.ವಿಜಯ ಬಾಬು “ವಿಜಯ ಸಂಚಿಕೆ’ ಪತ್ರಿಕೆ ಬಿಡುಗಡೆ ಮಾಡಿದರು. ಇನ್ನರ್ ವ್ಹೀಲ್ ಸಂಘದ ಮಾಜಿ ಜಿಲ್ಲಾಧ್ಯಕ್ಷೆ ಆಶಾ ಶೈಲೇಂದ್ರ, ಮಾಜಿ ಕಾರ್ಯದರ್ಶಿ ಶೀಲಾರಾಣಿ ಸುರೇಶ್, ಹಾಲಿ ಕಾರ್ಯದರ್ಶಿ ಚಂದ್ರಕಲಾ ರುದ್ರ ಮೂರ್ತಿ ಇದ್ದರು.
You seem to have an Ad Blocker on.
To continue reading, please turn it off or whitelist Udayavani.