ಗ್ರಾಮೀಣ ಭಾಗದ ಯುವ ಪ್ರತಿಭೆಗೆ ಚಿನ್ನದ ಪದಕ
Team Udayavani, Mar 25, 2022, 1:32 PM IST
ನೆಲಮಂಗಲ: ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ನಮ್ಮ ತಂದೆ ಮಾಜಿ ಸಚಿವ ಚನ್ನಿಗಪ್ಪನವರು ಪ್ರಾರಂಭಿಸಿದ ಕಾಲೇಜಿನಲ್ಲಿ ಮೊದಲ ಬಾರಿಗೆ ವಿಟಿಯುವಿನಲ್ಲಿ ಚಿನ್ನದ ಪದಕ ಪಡೆದು ಅವರ ಕನಸ್ಸನ್ನು ವಿದ್ಯಾರ್ಥಿ ಸುಹೆಲ್ ಪಾಷ ನನಸು ಮಾಡಿದ್ದಾರೆ ಎಂದು ಶ್ರೀ ಶಿವಕುಮಾರ ಮಹಾಸ್ವಾಮಿ ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಡಿ.ಸಿ ವೇಣುಗೋಪಾಲ್ ಸಂತಸ ವ್ಯಕ್ತಪಡಿಸಿದರು.
ತಾಲೂಕಿನ ತ್ಯಾಮಗೊಂಡ್ಲು ಹೋಬಳಿ ಬೈರನಾಯಕನಹಳ್ಳಿ ಗ್ರಾಮದಲ್ಲಿನ ಶ್ರೀ ಶಿವಕುಮಾರ ಮಹಾಸ್ವಾಮಿ ಎಂಜಿನಿಯರಿಂಗ್ ಕಾಲೇಜಿನ ವಿಟಿಯುವಿನ ಘಟಿಕೋತ್ಸವದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಮೊಹಮ್ಮದ್ ಸುಹೆಲ್ ಪಾಷಗೆ ಅಭಿನಂದಿಸಿ ಮಾತನಾಡಿ, ಸಮಾಜದಲ್ಲಿ ಸರ್ವಧರ್ಮ ಸಮನ್ವಯತೆಯನ್ನು ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಜಾತಿ ಮತ್ತು ಧರ್ಮದವರ ಸಹಬಾಳ್ವೆ ತುಂಬಾ ಮುಖ್ಯ,. ನಮ್ಮ ಕಾಲೇಜಿನಲ್ಲಿ ಉತ್ತಮ ವಾತಾವರಣ ಮತ್ತು ನುರಿತ ಬೋಧಕರ ಶ್ರಮದಿಂದ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗುವ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿಕೊಟ್ಟಿದ್ದರಿಂದ ನಮ್ಮ ಕಾಲೇಜಿಗೆ ಇಂದು ಸುಹೆಲ್ ಪಾಷ ಕೀರ್ತಿಯನ್ನು ತಂದಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳು ಸಾಧನೆಯನ್ನು ಮಾಡಬಹುದು ಎಂಬುದಕ್ಕೆ ಚನ್ನಿಗಪ್ಪನವರು ಹಾಗೂ ಇಂದು ನಮ್ಮ ಕಾಲೇಜಿನಲ್ಲಿ ಓದುತ್ತಿರುವ ಎಲ್ಲ ವಿದ್ಯಾಥಿಗಳು ಸಾಕ್ಷಿಯಾಗಿದ್ದಾರೆ ಎಂದರು.
ಒಂದು ಲಕ್ಷ ವಿದ್ಯಾರ್ಥಿ ವೇತನ
ಸುಹೇಲ್ ಪಾಷ ಬಡಕುಟುಂಬದಿಂದ ಬಂದವರು. ಅವರ ವಿದ್ಯಾಭ್ಯಾಸಕ್ಕೆ ಸಹಕಾರವಾಗಲಿ ಎಂದು ಹಾಗೂ ಅವರ ಸಾಧನೆಯನ್ನು ಮೆಚ್ಚಿ ನಮ್ಮ ತಂದೆ ಮಾಜಿ ಸಚಿವ ಚನ್ನಿಗಪ್ಪನವರ ಸ್ಮರಣಾರ್ಥವಾಗಿ ಒಂದು ಲಕ್ಷ ರೂ. ವಿದ್ಯಾರ್ಥಿ ವೇತನವಾಗಿ ವಿತರಣೆ ಮಾಡುತ್ತಿದ್ದೇನೆ. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಚಿನ್ನದ ಪದಕ ಪಡೆಯುವ ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಕಾಲೇಜಿನ ಅಧ್ಯಕ್ಷ ವೇಣುಗೋಪಾಲ್ ಭರವಸೆ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಗ್ರಾಮೀಣ ಭಾಗದಲ್ಲಿ ಎಂಜಿನಿಯರಿಂಗ್ ಕನಸು ಕಂಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಪದವಿ ನೀಡಲು ಶ್ರಮಿಸಿದ ಮಾಜಿ ಸಚಿವ ಸಿ.ಚನ್ನಿಗಪ್ಪನವರ ಶ್ರಮಕ್ಕೆ ಇಂದು ತಕ್ಕ ಫಲ ಸಿಕ್ಕಿದೆ ಎಂದು ಚಿನ್ನದ ಪದಕ ಪಡೆದ ವಿದ್ಯಾರ್ಥಿಯ ತಂದೆ ಅಬ್ದುಲ್ ನಭಿ ಅವರು ಶ್ಲಾಘಿಸಿ ಕಾರ್ಯಕ್ರಮದಲ್ಲಿ ಒಂದು ನಿಮಿಷ ಮೌನಾಚರಣೆಯನ್ನು ಆಚರಿಸುವ ಮೂಲಕ ಕೃತಜ್ಞತೆ ತಿಳಿಸಿದರು.
ಚಿನ್ನದ ಪದಕ ಪಡೆದ ವಿದ್ಯಾರ್ಥಿ ಮೊಹಮ್ಮದ್ ಸುಹೆಲ್ ಪಾಷ ಮಾತನಾಡಿ, ಕಲಿಗೆ ಅಗತ್ಯವಾಗಿ ಬೇಕಾಗುವ ಎಲ್ಲ ರೀತಿಯ ಸೌಲಭ್ಯ ಕಡಿಮೆ ಶುಲ್ಕದಲ್ಲಿ ನೀಡುತ್ತಿರುವ ಕಾಲೇಜಿಗೆ ಕೀರ್ತಿಯನ್ನು ತರಬೇಕು ಎಂಬ ಹಂಬಲದಿಂದ ಉಪನ್ಯಾಸಕರ ಸಹಕಾರ ಮತ್ತು ಕಾಲೇಜು ಆಡಳಿತ ಮಂಡಳಿಯ ಬೆಂಬಲದಿಂದ ಇಂದು ಚಿನ್ನದ ಪದಕವನ್ನು ಪಡೆದಿದ್ದೇನೆ ಕಾಲೇಜಿನ ಸಿಇಒ ರಾಹುಲ್, ಪ್ರಾಂಶು ಪಾಲ ಡಾ.ಎಚ್.ಡಿ ರಮೇಶ್ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.