ಶುಭ ಶುಕ್ರವಾರ: ವಿಶೇಷ ಪ್ರಾರ್ಥನೆ
Team Udayavani, Apr 20, 2019, 3:00 AM IST
ದೇವನಹಳ್ಳಿ: ನಗರದ ಪರ್ವತಪುರ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ಶುಭ ಶುಕ್ರವಾರ(ಗುಡ್‌ಫ್ರೈಡೆ)ದ ಅಂಗವಾಗಿ ಕೈಸ್ತ ಸಮುದಾಯದವರು ಏಸುಕ್ರಿಸ್ತನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಚರ್ಚ್ ಪಾದ್ರಿ ಫಾದರ್ ಜೆ.ಡಿ.ಎನುಷ್, ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವನ್ನು ನೆನಪಿಸುವ ಸಂದರ್ಭ ಇದಾಗಿದೆ.
ಈಸ್ಟರ್ ಭಾನುವಾರದ ಹಿಂದಿನ ಶುಕ್ರವಾರದಂದು ಪಸ್ಟಾಲ್ ಟ್ರೈದುಮ್ನ ಭಾಗವಾಗಿ ಪವಿತ್ರ ವಾರದ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ ಮತ್ತು ಪಾಸೋವರ್ನ ಯಹೂದಿ ಆಚರಣೆಯೊಂದಿಗೆ ಇದು ಸಹಜವಾಗಿರಬಹುದು.
ಇದು ಪವಿತ್ರ ಶುಕ್ರವಾರ, ದೊಡ್ಡ ಶುಕ್ರವಾರ ಮತ್ತು ಕಪ್ಪು ಶುಕ್ರವಾರ ಎಂದು ಕೂಡ ಕರೆಯಲ್ಪಡುತ್ತದೆ ಎಂದು ಹೇಳಿದರು.
ಯೇಸು ದೇವ ಮಾನವ: ಪ್ರತಿಯೊಬ್ಬರೂ ಶಾಂತಿ, ಸಮಾಧಾನ ಹಾಗೂ ಲೋಕಕಲ್ಯಾಣಕ್ಕಾಗಿ ಲೋಕಕ್ಕೆ ಬೆಳಕಾದ ಯೇಸುಕ್ರಿಸ್ತನಲ್ಲಿ ಪ್ರಾರ್ಥನೆ ಸಲ್ಲಿಸಬೇಕು. ಏಸುಕ್ರಿಸ್ತ ಮಾನವನಾಗಿ ಭೂಮಿಗೆ ಬಂದು ಜನರ ಕಷ್ಟ, ಕಾರ್ಪಣ್ಯಗಳನ್ನು ನೋಡಿದ್ದಾರೆ.
ಜನರ ಕಷ್ಟ, ಕಾರ್ಪಣ್ಯಗಳನ್ನು ಅರಿತು ಅವುಗಳ ಪರಿಹಾರಕ್ಕಾಗಿಯೇ ಸ್ಮರಿಸುತ್ತಿದ್ದೇವೆ. ಕ್ರಿಸ್ತ ಒಂದು ಜಾತಿಯವರಲ್ಲ. ಏಸುಕ್ರಿಸ್ತ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಜನರ ನೋವು, ನಲಿವುಗಳ ಪರಿಹಾರಕ್ಕೆ ಅವತರಿಸಿದ ದೇವ ಮಾನವರಾಗಿದ್ದಾರೆ ಎಂದರು.
ಉತ್ತಮ ಮಳೆ ಕರುಣಿಸಲಿ: ಏಸು ಪ್ರಭು ಇಲ್ಲಿನ ಬರಗಾಲವನ್ನು ಹೋಗಲಾಡಿಸಿ, ಉತ್ತಮ ಮಳೆ ಕರುಣಿಸಿ ರೈತರು ಸಮೃದ್ಧ ಜೀವನ ನಡೆಸುವಂತಾಗಲಿ. ನೆನ್ನೆ ಅಷ್ಟೇ ಶಾಂತಿಯುತ ಮತದಾನ ಆಗಿರುವುದರಿಂದ ಮುಂದೆ ಸುಭದ್ರ ಸರ್ಕಾರ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚರ್ಚ್‌ನ ಅಮೇರಿಕಾದ ಜಾಜ್ ದುಬಿಕ್ಷಾ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.