ಕೋವಿಡ್ 19 ನಿಯಂತ್ರಣದಲ್ಲಿ ಸರ್ಕಾರ ವಿಫಲ
Team Udayavani, Jun 6, 2020, 6:54 AM IST
ವಿಜಯಪುರ: ಕೇಂದ್ರ ಸರ್ಕಾರ ಹೇಳಿದ ಎಲ್ಲ ನಿಯಮಗಳನ್ನು ರಾಜ್ಯದ ಜನರು ಪಾಲಿಸಿದ್ದಾರೆ. ದೀಪ ಹಚ್ಚಿದ್ದಾಯ್ತು, ಚಪ್ಪಾಳೆ ತಟ್ಟಿದ್ದಾಯ್ತು. ಆದರೆ ಕೋವಿಡ್ 19 ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಕೃಷ್ಣಭೈರೇಗೌಡ ಆರೋಪಿಸಿದರು.
ಚನ್ನರಾಯಪಟ್ಟಣ ಹೋಬಳಿ ದಿನ್ನೂರು ಗ್ರಾಮದ ತಾಪಂ ಸದಸ್ಯ ವೆಂಕಟೇಶ್ ನಿವಾಸದ ಎದುರು ಚನ್ನರಾಯಪಟ್ಟಣ ಹಾಗೂ ನಲ್ಲೂರು ತಾಪಂ ವ್ಯಾಪ್ತಿಯ ಕೋವಿಡ್ 19 ವಾರಿಯರ್ಗಳಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು. ಸಂಕಷ್ಟದಲ್ಲಿ ರೈತರಿಗೆ ಸಹಾಯ ಮಾಡಲಿಲ್ಲ ಎಂದರೆ ಸರ್ಕಾರ ಇನ್ಯಾರಿಗೆ ಸಹಾಯ ಮಾಡಲಿದೆ?
ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ನಷ್ಟ ಅನುಭವಿದ್ದಾರೆ. ಸರಿಯಾದ ಮಾರುಕಟ್ಟೆ ದೊರೆತಿಲ್ಲ. ಸರ್ಕಾರ ರೈತರ ಬಗ್ಗೆ ನಿರ್ಲಕ್ಷ ಧೋರಣೆ ಹೊಂದಿದೆ ಎಂದು ದೂರಿದರು. ಆಟೋ ಚಾಲಕರು, ಸವಿತಾ ಸಮಾಜ ಸೇರಿದಂತೆ ಇನ್ನಿತರ ವರ್ಗಗಳಿಗೆ 5 ಸಾವಿರ ರೂ. ಪರಿಹಾರ ಕೊಡುವುದಾಗಿ ಘೋಷಿಸಿ ದ ಸರ್ಕಾರ ಇನ್ನೂ ನೀಡಿಲ್ಲ ಎಂದು ಆರೋಪಿಸಿದರು.
ಮಾಜಿ ಶಾಸಕರಾದ ಮುನಿನರಸಿಂಹ ಯ್ಯ, ವೆಂಕಟಸ್ವಾಮಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಸದಸ್ಯೆ ಅನಂತಕುಮಾರಿ, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಚೇತನ್ ಗೌಡ, ತಾಪಂ ಸದಸ್ಯ ವೆಂಕಟೇಶ್, ಮಂಜುನಾಥ್, ಚೈತ್ರಾ, ನಂದಿನಿ, ಶಶಿಕಲಾ, ಮುಖಂಡ ಸಿ.ಜಗನ್ನಾಥ್, ಶ್ರೀನಿವಾಸಗೌಡ, ಲಕ್ಷ್ಮಣಗೌಡ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುರ್ಮಾ, ಕಾಂಗ್ರೆಸ್ ತಾಲೂಕು ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಪಿ. ಮುನಿರಾಜು, ಕೃಷಿಕ ಸಮಾಜದ ನಿರ್ದೇಶಕ ಯಲುವಳ್ಳಿ ನಟರಾಜ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.