ಶತಮಾನದ ಸರ್ಕಾರಿ ಶಾಲೆ ಶೌಚಾಲಯ ಶಿಥಿಲ: ಪರದಾಟ
Team Udayavani, Jan 26, 2019, 7:22 AM IST
ನೆಲಮಂಗಲ: ಪಟ್ಟಣದ ಹೃದಯ ಭಾಗದಲ್ಲಿರುವ ಶತಮಾನದ ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯಗಳು ಶಿಥಿಲ ಗೊಂಡಿದ್ದರಿಂದ ಮಕ್ಕಳು ಪರದಾಡುವಂತಾಗಿದೆ.
ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿ ವರೆಗೆ ಪ್ರಸ್ತುತ 125 ಮಕ್ಕಳು ಶಿಕ್ಷಣ ಪಡೆಯು ತ್ತಿದ್ದಾರೆ. ಸರ್ಕಾರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ಮನೆಗೊಂದು ಶೌಚಾಲಯವೆಂದು ಕೋಟ್ಯಂತರ ರೂ. ಪ್ರಚಾರಕ್ಕಾಗಿ ಖರ್ಚು ಮಾಡುತ್ತಿದೆ. ಆದರೆ, ಭವಿಷ್ಯದ ಪ್ರಜೆಗಳನ್ನು ನಿರ್ಮಾಣ ಮಾಡುವ ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಉತ್ತಮ ಶೌಚಾಲ ಯ ನಿರ್ಮಾಣ ಮಾಡುವಲ್ಲಿ ವಿಫಲವಾಗಿರುವುದು ದುರಂತ ಎಂಬ ಆರೋಪಗಳು ಕೇಳಿಬರುತ್ತಿವೆ.
ಕರ್ತವ್ಯ ಪ್ರಜ್ಞೆಗೆ ಹಿಡಿದ ಕೈಗನ್ನಡಿ: ಪಟ್ಟಣದ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಾಲೂಕಿಗೆ ಮಾದರಿ ಶಾಲೆಯಾಗಿ, ಮೂಲಭೂತ ಸೌಕರ್ಯಗಳ ಲಭ್ಯತೆಯ ಬಗ್ಗೆ ಸರ್ಕಾರಿ ಶಾಲಾ ಮಕ್ಕಳಿಗೆ ಮನವ ರಿಕೆ ಮಾಡಿಕೊಡುವಂತೆ ಇರಬೇಕಿತ್ತು. ಆದರೆ, ಮಾದರಿ ಶಾಲೆಯಲ್ಲಿ ಕನಿಷ್ಠ ಶೌಚಾಲಯವೇ ಸರಿ ಯಾಗಿಲ್ಲದಿರುವುದು ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯ ಪ್ರಜ್ಞೆಗೆ ಹಿಡಿದ ಕೈಗನ್ನಡಿ ಎನ್ನಬಹುದಾಗಿದೆ.
ಶೌಚವಿಲ್ಲದ ಶಾಲೆ: ಹಳ್ಳಿಗಳ ಶಾಲೆಗಳಲ್ಲಿ ಶೌಚಾಲಯವಿಲ್ಲ ಎಂದರೆ ಬಯಲನ್ನಾದರೂ ಉಪಯೋಗಿ ಸುತ್ತಾರೆ. ಪಟ್ಟಣದ ಶಾಲೆಗಳಲ್ಲಿ ಶೌಚಾಲಯದ ಸೌಲಭ್ಯ ಸರಿಯಿಲ್ಲದಿದ್ದರೆ ಮಕ್ಕಳ ಸ್ಥಿತಿ ಏನಾಗಬೇಕು. ಶೌಚಾಲಯದ ಬಾಗಿಲು ಮುರಿದು, ಪೈಪುಗಳು ಕಿತ್ತು ಹೋಗಿರುವ ಶೌಚಾಲಯದ ಒಳಗೆ ಮಕ್ಕಳು ಹೋಗುವುದಾದರೂ ಹೇಗೆ? ಅದನ್ನು ಬಳಕೆ ಮಾಡುವುದಾದರೂ ಹೇಗೆ? ಇಂತಹ ಪರಿಸ್ಥಿತಿ ಪಟ್ಟಣದ ಸರ್ಕಾರಿ ಶಾಲೆಯಲ್ಲಿದೆ ಎಂದರೆ ಸರ್ಕಾರ ಕ್ಕೆ ಇದಕ್ಕಿಂತ ಅವಮಾನದ ಸಂಗತಿ ಬೇರೊಂದಿಲ್ಲ.
ಶಾಲೆಗೆ ಅನುದಾನವಿಲ್ಲವೇ?: ಪಟ್ಟಣದ ಶಾಲೆ ಯಲ್ಲಿ ಉತ್ತಮ ಶೌಚಾಲಯ ನಿರ್ಮಿಸಲು ಸರ್ಕಾ ರದ ಅನುದಾನವಿಲ್ಲವೇ ಅಥವಾ ಸರ್ಕಾರಿ ಶಾಲೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಯೇ. ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿರು ವುದೇ ತಪ್ಪಾ ? ಬಡಮಕ್ಕಳು ಉತ್ತಮ ಶೌಚ ಬಳಸಬಾರದೇ?ಎಂಬ ಪ್ರಶ್ನೆ ಪೋಷಕರದ್ದಾಗಿದೆ.
ಶತಮಾನದ ಶಾಲೆ: ಪಟ್ಟಣದ ಬಡಮಕ್ಕಳಿಗೆ ಶಿಕ್ಷಣ ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳನ್ನು ಸಾಧಕ ರನ್ನಾಗಿ ಮಾಡಿದ ಈ ಶಾಲೆ 1904ರಲ್ಲಿ ಪ್ರಾರಂಭ ವಾಗಿ 2004ರಲ್ಲಿ ಶತಮಾನೋತ್ಸವವನ್ನು ಆಚರಿಸಿ ಕೊಂಡಿದೆ. ಈ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿ ಗಳು ತಾಲೂಕಿನಲ್ಲಿ ಗ್ರಾಪಂ ಸದಸ್ಯರು, ಪುರಸಭೆ ಸದಸ್ಯರು, ತಾಪಂ, ಜಿಪಂ ಸದಸ್ಯರು ಹಾಗೂ ಶಾಸಕರು, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಈ ಶಾಲೆಯಲ್ಲಿ ಇಂದು ಉತ್ತಮ ಶೌಚವಿಲ್ಲ.
ಶಾಸಕರೇ ಸ್ಪಂದಿಸಿ: ಪಟ್ಟಣದ ಈ ಶಾಲೆ ಬಗ್ಗೆ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಗಮನ ಹರಿಸಿ, ಶಾಸಕರ ಅನುದಾನ ಅಥವಾ ಯಾವುದಾದರೂ ರೂಪದಲ್ಲಿ ನೆರವು ನೀಡಿ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಬೇಕೆಂಬುದು ಪೋಷಕರ ಆಗ್ರಹ.
ಕ್ರಮದ ಭರವಸೆ: ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ಪ್ರತಿಕ್ರಿಯಿಸಿ ಶೌಚಾಲಯ ತೀರಾ ಶಿಥಿಲಾವಸ್ಥೆ ಯಲ್ಲಿದ್ದು, ದುರಸ್ತಿ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಶಿವಪ್ರಕಾಶ್ ಪ್ರತಿಕ್ರಿಯಿಸಿ, ತಕ್ಷಣ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿ ಸುತ್ತೇವೆ ಎಂದು ಭರವಸೆ ನೀಡಿದರು.
ಆರ್.ಕೊಟ್ರೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.