ಆಧುನಿಕ ಜ್ಞಾನದೊಂದಿಗೆ ಶಿಕ್ಷಣ ಅಭಿವೃದ್ಧಿಗೊಳಿಸಿ

Team Udayavani, Jun 6, 2022, 3:53 PM IST

ಆಧುನಿಕ ಜ್ಞಾನದೊಂದಿಗೆ ಶಿಕ್ಷಣ ಅಭಿವೃದ್ಧಿಗೊಳಿಸಿ

ದೇವನಹಳ್ಳಿ: ಭಾರತೀಯ ಶಿಕ್ಷಣ ವ್ಯವಸ್ಥೆಯು ಪ್ರಾಚೀನ ಕಾಲದಿಂದಲೂ ವಸುದೈವ ಕುಟುಂಬ ತತ್ವಶಾಸ್ತ್ರದ ಮೇಲೆ ಕೇಂದ್ರೀಕೃತವಾಗಿದೆ ಎಂದು ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ತಿಳಿಸಿದರು.

ಪಟ್ಟಣದ ಪಾರಿವಾಟಗುಟ್ಟದಲ್ಲಿನ ದಕ್ಷಿಣ ಭಾರತದ ಅತೀ ದೊಡ್ಡ ಶ್ರೀ ಸ್ಥೂಲ ಭದ್ರ ಜೈನ ತೀರ್ಥಧಾಮದಲ್ಲಿ ಹಮ್ಮಿ ಕೊಂಡಿದ್ದ ಸ್ಥೂಲಭದ್ರ ಸುರೀಶ್ವರ್‌ ಜಿ ಮಹಾರಾಜ್‌ ಅವರ 19ನೇ ಪುಣ್ಯಸ್ಮರಣೆ ಹಾಗೂ ಚಂದ್ರ ಹಿಲ್ಸ್‌ ಅಂತಾರಾಷ್ಟ್ರೀಯ ಶಾಲೆ ಯೋಜನೆಯನ್ನು ಉದ್ಘಾಟಿಸಿ ಮಾತ ನಾಡಿ, ಆಧುನಿಕ ಜ್ಞಾನವನ್ನು ಮೌಲ್ಯಗ ಳೊಂದಿಗೆ ಸಂಯೋಜಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಅದು ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ ಇಡೀ ಮಾನವಕುಲಕ್ಕೆ ಪ್ರಯೋಜನವನ್ನು ನೀಡುತ್ತದೆ. ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರಗಳ ಜ್ಞಾನವು ಮಾನವೀಯ, ಸದ್ಗುಣ, ಉತ್ತಮ ಚಿಂತನೆಗಳು ಮತ್ತು ಪರೋಪಕಾರಿ ಶಿಕ್ಷಣದೊಂದಿಗೆ ಬರುತ್ತದೆ ಎಂದರು. ದೇವನಹಳ್ಳಿಯ ಪುಣ್ಯ ಕ್ಷೇತ್ರದಲ್ಲಿ ಶ್ರೀ ಸಿದ್ಧಾಚಲ ಸ್ಥೂಲಭದ್ರ ಧಾಮ ಗಿರಿಮಾಲವು ಅದ್ಭುತವಾದ ಕರಕುಶಲ ಕಲೆಯಾಗಿದೆ. ದಕ್ಷಿಣ ಕೇಶರಿ ಆಚಾರ್ಯ ಶ್ರೀ ಸ್ಥೂಲಭದ್ರ ಸೂರೀಶ್ವರ್‌ಜಿ ಮಹಾರಾಜ್‌ ಸಾಹೇಬರ ಆಶೀರ್ವಾದ ಮತ್ತು ನಿಮ್ಮ ಶಿಷ್ಯರಾದ ಆಚಾರ್ಯ ಶ್ರೀ ಚಂದ್ರಾಯಶ ಸೂರೀಶ್ವರ್‌ಜಿ ಮಹಾರಾಜ್‌ ಸಾಹೇಬರ ಮಹಾನ್‌ ದೃಷ್ಟಿ ಮತ್ತು ದಿವ್ಯ ಚಿಂತನೆಯ ಪ್ರಭಾವದಿಂದ ಜಿನಾಲಯಗಳ ದರ್ಶನ ಮತ್ತು ತೀರ್ಥಯಾತ್ರೆ ನಡೆಯುತ್ತಿವೆ ಎಂದರು.

ಶ್ರೀ ಸ್ಥೂಲಭದ್ರ ಸೂರೀಶ್ವರ್‌ ಮಹಾರಾಜ್‌ ಮಾತನಾಡಿ, ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರಗಳ ಜ್ಞಾನವು ಮಾನವೀಯ, ಸದ್ಗುಣ, ಉತ್ತಮ ಚಿಂತನೆಗಳು ಮತ್ತು ಪರೋಪಕಾರಿ ಶಿಕ್ಷಣದೊಂದಿಗೆ ಬರುತ್ತದೆ ಎಂದರು.

ರಾಜ್ಯಪಾಲರಿಗೆ ಅಭಿನಂದನೆ: ಸ್ಥೂಲಭದ್ರ ಹಿರಿಯ ಗುರುವಿನ 19ನೇ ವರ್ಷದ ಪುಣ್ಯತಿಥಿಯನ್ನು ನೆರವೇರಿಸಿ, ಇದೇ ಕ್ಷೇತ್ರದಲ್ಲಿ ಶಾಲಾ ವಿನ್ಯಾಸದ ಬಗ್ಗೆ ರಾಜ್ಯಪಾಲರಿಗೆ ಮತ್ತು ನೆರೆದಿದ್ದ ಜನರಿಗೆ ಮಾಹಿತಿ ನೀಡಿದರು.

ಶಾಲಾ ವಿನ್ಯಾಸದ ಬಗ್ಗೆ ವಿಶೇಷವಾಗಿ ತಿಳಿಸಿಕೊಡುವುದರ ಮೂಲಕ ರಾಜ್ಯಪಾಲರಿಗೆ ಸಾಂಪ್ರದಾಯಿಕವಾಗಿ ಅಭಿನಂದಿಸಿದರು. ಭಗವಾನ್‌ ಮಹಾವೀರ ಗೌತಮ ಬುದ್ಧನ ಸ್ತೋತ್ರ ಮತ್ತು ಹಾಡಿನ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಆಚಾರ್ಯ ಶ್ರೀ ಸ್ಥೂಲಭದ್ರ ಸುರೀಶ್ವರ್‌ ಸ್ವಾಮಿಜೀ 19ನೇ ಪುಣ್ಯತಿಥಿ ಕಾರ್ಯಕ್ರಮ ಮತ್ತು ಚಂದ್ರ ಹಿಲ್ಸ್‌ ಅಂತಾರಾಷ್ಟ್ರೀಯ ಶಾಲೆಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಪರಮ ಪೂಜ್ಯ ಜೈನ ಆಚಾರ್ಯ ಶ್ರೀ ಚಂದ್ರಯೇಶ ಸೂರೀಶ್ವರ್‌ ಜಿ ಮಹಾರಾಜ್‌, ಪ್ರಧಾನ ಟ್ರಸ್ಟಿ ಶ್ರೀ ಪ್ರಕಾಶ್‌ ಜಿ ಕೊಠಾರಿ, ಶ್ರೀ ಇಂದರಚಂದ್‌ ಜಿ ಬೋಹ್ರಾ, ಶ್ರೀ ಧರ್ಮಿಚಂದ್‌ ಜಿ ಧೋಕಾ, ಚಿಕ್ಕಪೇಟೆ ಒಕ್ಕೂಟದ ಅಧ್ಯಕ್ಷ ಗೌತಮ್‌ ಸೋಲಂಕಿ ಹಾಗೂ ಮತ್ತಿತರರು ಇದ್ದರು.

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.