ಇ-ಖಾತೆ ಹಗರಣ ತನಿಖೆಗೆ ಗ್ರಾಪಂ ಸದಸ್ಯರ ಆಗ್ರಹ
ಡಿಮ್ಯಾಂಡ್ ರಿಜಿಸ್ಟಾರ್ ಏನಾಗಿದೆ? ಅದರ ಬಗ್ಗೆಯೂ ತನಿಖೆಯಾಗಬೇಕು.
Team Udayavani, Jan 20, 2022, 5:48 PM IST
ಕನಕಪುರ: ಗ್ರಾಪಂನಲ್ಲಿ ನಡೆದಿರುವ ನಕಲಿ ಇ-ಖಾತೆ ಹಗರಣದ ಸೂಕ್ತ ತನಿಖೆಯಾಗಬೇಕು. ಮುಂದೆ ಇಂತಹ ತಪ್ಪು ಮಾಡುವವರಿಗೆ ಇದು ಪಾಠವಾಗಬೇಕು ಎಂದು ಕೊಟ್ಟಗಾಳು ಗ್ರಾಪಂ ಸದಸ್ಯರು ಒಕ್ಕೋರಲಿನಿಂದ ಧ್ವನಿಗೂಡಿಸಿ ಒತ್ತಾಯಿಸಿದರು.
ತಾಲೂಕಿನ ಹಾರೋಹಳ್ಳಿ ಹೋಬಳಿಯ ಕೊಟ್ಟ ಗಾಳು ಗ್ರಾಪಂ ಅಧ್ಯಕ್ಷೆ ಪುಟ್ಟಮಣಿ ಪುಟ್ಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಸದಸ್ಯರು ಇ-ಖಾತೆ ಅವ್ಯವಹಾರದ ಬಗ್ಗೆ ಕಟುವಾಗಿ ಖಂಡಿಸಿದರು. ನಕಲಿ ಇ-ಖಾತೆ ಹಿಂದೆ ಯಾರ ಕೈವಾಡವಿದೆ ಯಾರು ಖಾತೆಗಳನ್ನು ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗ ಬೇಕು ಎಂದು ದೇವುರಾವ್ ಜಾದವ್ ಜಗದೀಶ್ ಸೇರಿದಂತೆ ಹಲವು ಸದಸ್ಯರು ಆಗ್ರಹಿಸಿದರು.
95 ನಿವೇಶನಗಳಿಗೆ ನಕಲಿ ಖಾತೆ: ಕೊಟ್ಟಗಾಳು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 95 ನಿವೇಶನ ಗಳಿಗೆ ನಕಲಿ ಇ-ಖಾತೆ ಮಾಡಿಕೊಡಲಾಗಿದೆ. ನಕಲಿ ಇ-ಖಾತೆಗಳು ಎಲ್ಲಿ ತಯಾರಾದವು? ಯಾರು ತಯಾರು ಮಾಡಿದರು. ಒಟ್ಟು 95 ಇ-ಖಾತೆಗಳಲ್ಲೂ ಅಭಿವೃದ್ಧಿ ಅಧಿಕಾರಿಗಳ ಸಹಿಯೇ ಇಲ್ಲ. ಯಾರ ಪ್ರಭಾವದಿಂದ ಈ ಅವ್ಯವಹಾರ ನಡೆದಿದೆ. ಗ್ರಾಪಂನಲ್ಲಿ ಹರಾಜಕತೆ ಸೃಷ್ಟಿಯಾಗುತ್ತಿದೆ. ಗ್ರಾಪಂನಲ್ಲೇ ಹೀಗಾದರೆ ಇದಕ್ಕೆ ಯಾರು ಹೊಣೆ? ಇಂತಹ ಹಗರಣಗಳು ಇನ್ನೊಮ್ಮೆ ಮರುಕಳಿಸಬಾರದು. ಇಂತಹ ತಪ್ಪುಗಳನ್ನು ಮಾಡು ವವರಿಗೆ ತಕ್ಕ ಶಿಕ್ಷೆಯಾಗಬೇಕು. ಈ ಪ್ರಕರಣ ಮತ್ತೂಬ್ಬರಿಗೆ ಪಾಠವಾಗಬೇಕು ಎಂದರು.
ದಾಖಲೆಗಳು ಕಾಣೆಯಾಗಿವೆ: ಗ್ರಾಪಂನಲ್ಲಿ ಕೆಲವು ದಾಖಲೆಗಳು ಕಾಣೆಯಾಗಿವೆ. ಸುಮಾರು ಒಂದು ದಶಕದ ಡಿಮ್ಯಾಂಡ್ ರಿಜಿಸ್ಟಾರ್ ದಾಖಲೆಗಳು ಕಾಣೆಯಾಗಿವೆ. ಇದು ಹೇಗೆ ಸಾಧ್ಯ? ಕಾಣೆಯಾಗಿ ರುವ ಡಿಮ್ಯಾಂಡ್ ರಿಜಿಸ್ಟಾರ್‌ನಲ್ಲಿ ಹಲವಾರು ಗ್ರಾಮಗಳಿಗೆ ಸಂಬಂಧಪಟ್ಟ ದಾಖಲೆಗಳಿವೆ ಕೊಟ್ಟ ಗಾಳು ಗ್ರಾಪಂನಲ್ಲಿ ಇಷ್ಟೆಲ್ಲ ನಡೆದಿದ್ದರು ಅಧಿಕಾರಿ ಗಳು ಯಾಕೆ ಮೌನವಾಗಿದ್ದರು. ಪಂಚಾಯಿತಿ ಯಲ್ಲಿನ ಆಗು ಹೋಗುಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು. ಡಿಮ್ಯಾಂಡ್ ರಿಜಿಸ್ಟಾರ್ ಏನಾಗಿದೆ? ಅದರ ಬಗ್ಗೆಯೂ ತನಿಖೆಯಾಗಬೇಕು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಮೊದಲು ಸ್ಪಂದಿಸಬೇಕು. ಪಂಚಾಯಿತಿಯಲ್ಲಿ
ಕೆಲಸ ಆಗದಿದ್ದರೇ ಜನಗ ಪ್ರಶ್ನೆಗಳಿಗೆ ನಾವು ಉತ್ತರ ಕೊಡಬೇಕು ಎಂದು ಅಧಿಕಾರಿಗಳ ವಿರುದ್ಧ
ಅಸಮದಾನ ವ್ಯಕ್ತಪಡಿಸಿದರು.
ಶಿಸ್ತು ಕ್ರಮ ಕೈಗೊಳ್ಳಿ: ದಾಸೇಗೌಡನದೊಡ್ಡಿ ಗ್ರಾಮ ದಲ್ಲೂ ಹಲವಾರು ಇ-ಖಾತೆಗಳಾಗಿವೆ. ಕಾರ್ಯ ದರ್ಶಿಗಳು ನಾನು ಖಾತೆಗಳನ್ನು ಕೊಟ್ಟಿಲ್ಲ ಎನ್ನು ತ್ತಾರೆ. ಇದಕ್ಕೆ ಹೊಣೆ ಯಾರು? ಗೊಲ್ಲಹಳ್ಳಿ ನಿವೇಶನದ ಮೂಲ ಖಾತೆದಾರರಿಗೆ ಮೂರು ಬಾರಿ ನೋಟಿಸ್ ನೀಡಿದರೂ ಸಹ ಇದುವರೆಗೂ ಯಾರು ಸ್ಪಂದಿಸಿಲ್ಲ. ಕೂಡಲೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಗ್ರಾಪಂನಲ್ಲಿ ನಡೆದಿರುವ ಎಲ್ಲ ಹಗರಣದ ಹಿಂದೆ ಯಾವುದೇ ಅಧಿಕಾರಿಗಳಿದ್ದರು ಅವರ ವಿರುದ್ಧ ತನಿಖೆಯಾಗಬೇಕು ಎಂದು ಪಟ್ಟು ಹಿಡಿದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಪುಟ್ಟಮಣಿ ಪುಟ್ಟಸ್ವಾಮಿ, ಉಪಾಧ್ಯಕ್ಷ ನವೀನ್ ಕುಮಾರ್, ಪಿಡಿಒ ರಾಜೇಶ್ವರಿ, ಸದಸ್ಯರಾದ ದೇವರಾಜ್ ಜಾಧವ್, ಪಿಚ್ಚನಕೆರೆ ಜಗದೀಶ್ ಹಾಗೂ ಸರ್ವಸದ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
RSS ಮುಖ್ಯಸ್ಥರಿಗೆ ಹಿಂದೂಗಳ ನೋವು ಗೊತ್ತಾಗುತ್ತಿಲ್ಲ: ಶ್ರೀ
Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್ ಆಸ್ಪತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.