Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ
Team Udayavani, Apr 28, 2024, 2:51 PM IST
ದೇವನಹಳ್ಳಿ: ಮಳೆ ಕೈ ಕೊಟ್ಟಿರುವುದರಿಂದ ಯಾವುದೇ ಬೆಳೆಗಳನ್ನು ಬೆಳೆಯಬೇಕಾದರೆ ರೈತರಿಗೆ ಕಷ್ಟವಾಗುತ್ತಿದೆ. ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಹುರುಳಿಕಾಯಿ ಬೆಳೆ ಸಮರ್ಪಕವಾಗಿ ಬಾರದೆ ಹುರುಳಿ ಕಾಯಿ 200ರ ಗಡಿ ದಾಟಿರುವುದು ಗ್ರಾಹಕರಿಗೆ ಹೊರೆಯಾಗಿದೆ. ಹೇಳಿಕೇಳಿ ಬಯಲು ಸೀಮೆ ಪ್ರದೇಶವಾಗಿರುವುದರಿಂದ ಇಲ್ಲಿ ಯಾವುದೇ ನದಿ ಮೂಲಗಳು ಇಲ್ಲ.
ಶಾಶ್ವತ ನೀರಾವರಿ ಯೋಜನೆಗಳು ಇಲ್ಲ. ಕೇವಲ ಕೆರೆಗಳು ಮತ್ತು ಕುಂಟೆಗಳು ಇದ್ದರೂ ಸಹ ಇರುವ ಅಲ್ಪಸಲ್ಪದ ನೀರಿನಲ್ಲಿ ರೈತ ಬೆಳೆ ಬೆಳೆಯಬೇಕು. ಮಳೆ ಇಲ್ಲದಿರುವುದರಿಂದ ಕೆರೆಗಳನ್ನು ಸಹ ನೀರು ಇಲ್ಲದೆ ಬತ್ತಿ ಹೋಗುತ್ತಿದೆ.
ದೇವನಹಳ್ಳಿ ಮತ್ತು ಹೊಸಕೋಟೆ ಕೆಲವು ಕೆರೆಗಳಿಗೆ ಬೆಂಗಳೂರಿನ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಬಿಡುತ್ತಿರುವುದರಿಂದ ಕೆಲವು ಕೆರೆಗಳಲ್ಲಿ ನೀರನ್ನು ನೋಡಬಹುದು. ಅದರ ಆಸುಪಾಸಿನಲ್ಲಿ ಇರುವ ಕೊಳವೆ ಬಾವಿಗಳು ಒಂದಿಷ್ಟು ನೀರು ಬರುವಂತಾಗಿದೆ.
ಈ ಭಾಗದ ಜನ ಮಳೆ ನೀರನ್ನು ನಂಬಿ ಜೀವನ ಸಾಗಿಸುತ್ತಾರೆ. ಉತ್ತಮ ಮಳೆಗಳಾದರೆ ಕೆರೆ ಕುಂಟೆಗಳಿಗೆ ನೀರು ಬರುತ್ತದೆ. ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರು ಹೆಚ್ಚಾಗುವಂತೆ ಮಾಡುತ್ತದೆ. ಬೇಸಿಗೆ ಇರು ವುದರಿಂದ ಹಲವಾರು ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಅತಿ ಹೆಚ್ಚು ರೈತರು ಮತ್ತು ಜನಸಾಮಾನ್ಯರು ಕೊಳವೆಬಾವಿಗಳ ಮೇಲೆ ಅವಲಂಬಿತರಾಗಿದ್ದಾರೆ. ಕೊಳವೆಬಾವಿ ಕೊರೆಸಿದರು ಸಹ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ.
ಹುರುಳಿಕಾಯಿ ಬೆಳೆಯಲು ಕೆಲ ರೈತರ ಹಿಂದೇಟು: ಬೆಳೆಗಳಿಗೆ ನೀರಿಲ್ಲದೆ ದಿನದಿಂದ ದಿನಕ್ಕೆ ತರಕಾರಿಗಳ ಬೆಲೆ ಏರುತ್ತಲೇ ಇದ್ದು ಹುರುಳಿಕಾಯಿ ಬೆಳೆ ಸಹ ಬೆಲೆ ಹೆಚ್ಚಾಗಿದೆ. ಸಾಮಾನ್ಯವಾಗಿ ತರಕಾರಿ ಬೆಳೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಮೊದಲೇ ಬಿಸಿಲಿನ ತಾಪ ಹೆಚ್ಚಾಗಿದೆ ಬೆಳೆಗೆ ಇಷ್ಟೇ ನೀರು ಹಾಯಿಸಿದರು. ಕೆಲ ಗಂಟೆಗಳಲ್ಲೇ ಒಣಗಿ ಹೋಗುತ್ತದೆ. ಬಿಸಿಲಿಗೆ ತರಕಾರಿಗಳು ಬಾಡುತ್ತವೆ. ಹೂವು ಪೀಚುಗಳು ಉದುರಿ ಇಳುವರಿ ಕಡಿಮೆ ಆಗುತ್ತದೆ. ಈ ನಿಟ್ಟಿನಲ್ಲಿ ರೈತರು ತರಕಾರಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಹುರುಳಿಕಾಯಿಗೆ ಬೆಳೆಗೆ ನೀರು ಹೆಚ್ಚಾಗಿ ಬೇಕಾಗುತ್ತದೆ. ಅದಕ್ಕಾಗಿ ಹುರುಳಿಕಾಯಿ ಬೆಳೆಯಲು ಕೆಲ ರೈತರು ಹಿಂದೇಟು ಹಾಕುತ್ತಾರೆ.
ಹುರುಳಿಕಾಯಿ ಬೆಳೆಗೆ ಹೆಚ್ಚು ನೀರು ಅವಶ್ಯಕತೆ: ಈಗ ಬೇಸಿಗೆ ಹೆಚ್ಚಾಗಿರುವುದರಿಂದ ಹುರುಳಿಕಾಯಿಗೆ ನೀರು ಒದಗಿಸಲು ರೈತರಿಗೆ ಕಷ್ಟವಾಗುತ್ತಿದೆ. ಬಿತ್ತನೆ ಮಾಡಿ ಒಂದುವರೆ ಅಥವಾ ಎರಡು ತಿಂಗಳಲ್ಲಿ ಹುರುಳಿಕಾಯಿ ಬೆಳೆ ಬರುತ್ತದೆ. ಇದಕ್ಕೆ ಹೆಚ್ಚಾಗಿ ನೀರಿನ ಅವಶ್ಯಕತೆ ಇರುತ್ತದೆ. ಒಂದು ವೇಳೆ ನೀರು ಕಡಿಮೆಯಾದರೆ ಹುರುಳಿ ಕಾಯಿ ಕಟ್ಟು ವುದಿಲ್ಲ. ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡಬೇಕು. ಒಂದು ದಿನ ತಡವಾದರೂ ಗಿಡದಲ್ಲೇ ಕಾಯಿ, ಬಲಿಯುತ್ತವೆ. ಇದಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಇರೋದಿಲ್ಲ.
ಬಿಸಿಲಿಗೆ ಬಾಡುತ್ತಿರುವ ತರಕಾರಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಹುರುಳಿಕಾಯಿ ಬೆಳೆಯಲಾಗುತ್ತದೆ. ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತದೆ ಬೆಂಗಳೂರಿಗೆ ಈ ಭಾಗದಿಂದ ಹೆಚ್ಚಿನ ಮಾಲು ಬರುತ್ತೆ. ಮಾರುಕಟ್ಟೆಗಳಲ್ಲಿ ಮಾಲು ಕಡಿಮೆ ಬರುತ್ತಿದ್ದು ಬೆಲೆ ಏರಿಕೆಯಾಗಿದೆ. ಉತ್ತಮ ಮಳೆಯಾದರೆ ರೈತರು ಬೆಳೆ ಬೆಳೆಯಲು ಮುಂದಾಗುತ್ತಾರೆ. ಅಲ್ಲಿಯವರೆಗೂ ಬೆಲೆ ಇಳಿಕೆಯಾಗುವುದಿಲ್ಲ. ಮಾರು ಕಟ್ಟೆಯಲ್ಲಿ ಎಷ್ಟೇ ತಾಜಾ ತರಕಾರಿ ತಂದರು ಬಿಸಿಲಿಗೆ ಬಾಡಿ ಹೋಗುತ್ತವೆ. ಒಂದು ವೇಳೆ ವ್ಯಾಪಾರ ವಾದರೆ ಪರವಾಗಿಲ್ಲ. ಹಾಗೆ ಉಳಿದರೆ ಬೆಂಡಾಗಿ ಹೋಗುತ್ತದೆ. ಗ್ರಾಹಕರು ಕೇಳುವುದಿಲ್ಲ ಏನು ಮಾಡುವುದು ಎಂದು ಚಿಲ್ಲರೆ ತರಕಾರಿ ವ್ಯಾಪಾರಿಗಳು ಹೇಳುತ್ತಾರೆ. ಕಳೆದ ಕೆಲ ತಿಂಗಳುಗಳ ಹಿಂದೆ ಟೊಮೋಟೋಗೆ ಬೆಲೆ ಏರಿಗೆಯಾಗಿದೆ.
ಬಾರಿ ಸದ್ದು ಮಾಡಿದ್ದು. ಇದೀಗ ಹುರುಳಿಕಾಯಿ ಸರದಿ ಪ್ರಾರಂಭವಾಗಿದೆ. ಬಾರಿ ಬಿಸಿಲು ಹಾಗೂ ವಿದ್ಯುತ್ ಸಮಸ್ಯೆಯಿಂದ ರೈತರು ಇರುವ ತೋಟ ಉಳಿಸಿಕೊಂಡರೆ ಸಾಕು ಎಂದು ಯಾರೂ ತರಕಾರಿ ಬೆಳೆಯಲು ಮುಂದಾಗದ ಕಾರಣ ಉತ್ಪಾದನೆ ಕುಂಠಿತವಾಗಿದ್ದು. ತರಕಾರಿ ಬೆಲೆ ಏರುತ್ತಲೇ ಇದೆ.
ಬೇಸಿಗೆಯಲ್ಲಿ ಹುರುಳಿಕಾಯಿ ಬೆಳೆಯಲು ಕಷ್ಟವಾಗುತ್ತದೆ. ಈ ಬೆಳೆಗೆ ಹೆಚ್ಚಿನ ನೀರನ್ನು ಹಾಯಿ ಸಬೇಕು. ಇಲ್ಲದಿದ್ದರೆ ಉತ್ತಮ ಇಳುವರಿ ಬರುವುದಿಲ್ಲ. ಮಳೆ ಇಲ್ಲದೆ ರೈತರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹುರುಳಿಕಾಯಿ ಬೆಲೆ ಏರಿಕೆಯ ಕಂಡಿದೆ. ●ವಿಜಯಕುಮಾರ್, ರೈತ
ಪ್ರತಿಯೊಂದು ತರಕಾರಿ ಬೆಲೆ ಏರಿಕೆ ಕಂಡಿದೆ. ಮಳೆ ಇಲ್ಲದಿರುವುದು. ಹಾಗೂ ಬಿಸಿಲಿನ ತಾಪಮಾನಕ್ಕೆ ಮಾರುಕಟ್ಟೆಗಳಲ್ಲಿ ಹುರುಳಿಕಾಯಿ ಸಮರ್ಪಕವಾಗಿ ಬರುತ್ತಿಲ್ಲ. ವಿವಿಧ ಮಾರುಕಟ್ಟೆಗಳಿಗೆ ತೆರಳಿ ಹುರುಳಿಕಾಯಿ ತಂದು ಮಾರಾಟ ಮಾಡಲಾಗುತ್ತಿದೆ. ●ಆನಂದ್, ತರಕಾರಿ ವ್ಯಾಪಾರಿ
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.