![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 3, 2022, 8:45 AM IST
ದೇವನಹಳ್ಳಿ: ಬೇಡಿಕೆ ತಕ್ಕಂತೆ ಹಸಿ ಮೆಣಸಿನಕಾಯಿ ಮಾರುಕಟ್ಟೆಗೆ ಬಾರದ ಕಾರಣ ಬರೋಬ್ಬರಿ ಕೆ.ಜಿಗೆ 120 ರೂ. ಆಗಿದೆ. ಕಳೆದ ಎರಡು- ಮೂರು ವಾರಗಳಿಂದ ಹಸಿ ಮೆಣಸಿನ ಕಾಯಿ ಬೆಲೆ ಮೂರು ಪಟ್ಟು ಏರಿಕೆಯಾಗಿದೆ. ಕೆ.ಜಿ 30ರಿಂದ 40 ರೂ.ಗೆ ಮಾರಾಟ ಆಗುತ್ತಿದ್ದ ಮೆಣಸಿನಕಾಯಿ, ಸದ್ಯ ಮಾರುಕಟ್ಟೆಯಲ್ಲಿ 100ರಿಂದ 120 ರೂ. ತಲುಪಿದೆ.
ನಂಜುರೋಗದ ಪರಿಣಾಮ: ಅಕ್ಟೋಬರ್, ನವೆಂಬರ್ ನಲ್ಲಿ ಬಿದ್ದ ಮಳೆಯಿಂದ ಒಂದು ಕಡೆ ತೇವಾಂಶ ಹೆಚ್ಚಳವಾಗಿ ಅಪಾರ ಪ್ರಮಾಣದ ಮೆಣಸಿನಕಾಯಿ ಬೆಳೆ ಸಮರ್ಪಕವಾಗಿ ಇಳುವರಿ ಬಾರದೆ ನಾಶವಾಗಿರುವುದರ ಜೊತೆಗೆ ಬೇಸಿಗೆ ಇರುವುದರಿಂದ ಮೆಣಸಿನ ಕಾಯಿಗೆ ನಂಜುರೋಗ ತಗುಲಿದೆ. ಹೀಗಾಗಿ ನಿರೀಕ್ಷಿತ ಬೆಳೆ ಬಂದಿಲ್ಲ. ಆದ್ದರಿಂದ ಮಾರುಕಟ್ಟೆಯಲ್ಲಿ ಮೆಣಸಿಕಕಾಯಿ ಬೆಲೆ ಗಗನಕ್ಕೇರಿದೆ ಎಂಬ ಮಾತು ವ್ಯಾಪಾರಸ್ಥರಿಂದ ಕೇಳಿಬರುತ್ತಿದೆ.
ಇದನ್ನೂ ಓದಿ:ವರುಣ ಆಗಮನದ ಶುಭ ಸೂಚನೆ; ಮೇ ತಿಂಗಳಲ್ಲಿ ಬಿರು ಬಿಸಿಲಿನ ತಾಪದ ಆತಂಕ ಸ್ವಲ್ಪ ದೂರ
ಹಸಿ ಮೆಣಸಿನಕಾಯಿ ಬೆಲೆ ಏರಿಕೆ ಹೋಟೆಲ್ ಮಾಲೀಕರ ನಿದ್ದೆ ಗೆಡಿಸಿದೆ. ಹೋಟೆಲ್‌ಗಳಲ್ಲಿ ಯಾವುದೇ ರುಚಿಕರ ಆಹಾರ ಪದಾರ್ಥಗಳ ತಯಾರಿಗೆ ಹಸಿ ಮೆಣಸಿನಕಾಯಿ ಬೇಕೇಬೇಕು. ಈ ಮಧ್ಯೆ ಗ್ಯಾಸ್ ದರ, ಅಡುಗೆ ಎಣ್ಣೆ, ವಿದ್ಯುತ್ ಮತ್ತಿತರ ಬೆಲೆಗಳ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹೋಟೆಲ್ ಮಾಲೀಕರಿಗೆ ಮೆಣಸಿನಕಾಯಿ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
You seem to have an Ad Blocker on.
To continue reading, please turn it off or whitelist Udayavani.