ಜಿಪಂ ವತಿಯಿಂದ ಕೈ ತೋಟ ಅಭಿಯಾನ
ಪೌಷ್ಟಿಕ ಆಹಾರ ಉತ್ಪಾದನೆ ಹೆಚ್ಚಿಸಲುಕ್ರಮ , 3612 ಕಿಚನ್‌ಗಾರ್ಡನ್ ಪ್ರಗತಿಯಲ್ಲಿ
Team Udayavani, Oct 12, 2020, 2:06 PM IST
ದೇವನಹಳ್ಳಿ: ಇರುವ ಜಾಗದಲ್ಲೇ ತರಕಾರಿ ಬೆಳೆದು ಪೌಷ್ಟಿಕ ಆಹಾರ ಹೆಚ್ಚಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಕೈ ತೋಟ ನಿರ್ಮಿಸುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ರೂಪಿಸಿದೆ.
ಕೋವಿಡ್ ಸಂಕಷ್ಟಕ್ಕೆ ತುತ್ತಾಗಿ ಊರು ಸೇರಿದವರಿಗೆ ಬದುಕು ಕಟ್ಟಿಕೊಡುವಲ್ಲಿನೆರೇಗಾ ಯೋಜನೆಯಡಿಯಲ್ಲಿ ಸಾಕಷ್ಟುಕಾಮಗಾರಿಗಳು ನಡೆಯುತ್ತಿವೆ. ವಿಶೇಷವಾಗಿರೈತರ ಜಮೀನುಗಳಲ್ಲಿ ಬದು ನಿರ್ಮಾಣಕ್ಕಾಗಿನಡೆದ ಕಾಮಗಾರಿ ಜಿಲ್ಲೆಯ ಮಟ್ಟಿಗೆ ಯಶಸ್ವಿಯಾಗಿದೆ.
ಪೌಷ್ಟಿಕತೆ ಹೆಚ್ಚಿಸುವ ಯೋಜನೆ: ಪೌಷ್ಟಿಕ ಆಹಾರದ ಕೊರತೆ ನೀಗಿಸಲು ಜಿಲ್ಲಾ ಪಂಚಾಯಿತಿ ವತಿಯಿಂದ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರಿಗೆ ನಿಗದಿಪಡಿಸಿದ ನರ್ಸರಿಗಳಿಂದ ನಿಂಬೆ, ನುಗ್ಗೆ, ಪಪ್ಪಾಯಿ, ಮಾವು,ಹೆಬ್ಬೇವು, ಕರಿಬೇವು, ಸೀಬೆ, ತೆಂಗಿನ ಸಸಿಗಳುಸೇರಿದಂತೆ ವಿವಿಧ ಸಸಿಗಳನ್ನು ತಂದು ನಾಟಿ ಮಾಡಿ ಮನೆಯಂಗಳ, ಹಿತ್ತಲುಗಳ, ಶಾಲಾ ವರಣ, ಅಂಗನವಾಡಿ ಇತರೆ ಕಡೆಗ ಳಲ್ಲಿ ಬೆಳೆ ಸುವುದರ ಮೂಲಕ ಪೌಷ್ಟಿಕ ಹಣ್ಣು, ತರಕಾರಿಗಳನ್ನು ಒದಗಿಸುವ ಯೋಜನೆ ಇದಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೈತೋಟ ನಿರ್ಮಾಣಕ್ಕೆ ವೈಯಕ್ತಿಕ 2,747 ರೂ. ಮತ್ತು ಸಮುದಾಯಕವಾಗಿ 37,391 ರೂ. ಒದಗಿಸಲಾಗುತ್ತಿದೆ.ಜಿಲ್ಲೆಯ 102 ಗ್ರಾಪಂ ಗಳಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕ್ರಿಯಾಯೋಜನೆ: ಜಿಲ್ಲೆಯ 250 ಅಂಗನವಾಡಿಗಳಲ್ಲಿ ಕಿಚನ್ ಗಾರ್ಡನ್‌ಮಾಡಲು ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ನೀಡಲಾಗಿದೆ. ಪ್ರಾಯೋಗಿಕವಾಗಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 10, ನೆಲಮಂಗಲ ತಾಲೂಕಿನಲ್ಲಿ3ಕಿಚನ್ ಗಾರ್ಡನ್ ಮಾಡಲಾಗಿದೆ. ಜಿಲ್ಲೆಯ 100 ಶಾಲೆಗಳಲ್ಲಿ ನೆರೇಗಾ ಯೋಜನೆಯಡಿಕಾಂಪೌಂಡ್ ನಿರ್ಮಾಣ, ಕಿಚನ್ ಗಾರ್ಡನ್,ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಿಯಾಯೋಜನೆ ರೂಪಿಸಿ ಅನುಮೋದನೆಗೆ ನೀಡಲಾಗಿದೆ.
ಇನ್ನೊಂದು ತಿಂಗಳ ಒಳಗಾಗಿ ಅಂಗನವಾಡಿ ಮತ್ತು ಶಾಲೆಗಳಲ್ಲಿ ಕಿಚನ್ ಗಾರ್ಡನ್ ನಿರ್ಮಾಣ ಮಾಡಲು ಚಾಲನೆ ನೀಡಲಾಗುವುದು.ತಾಪಂಇಒಮೇಲ್ವಿಚಾರಕರಾಗಿರುತ್ತಾರೆ.ಶಾಲೆ ಮತ್ತು ಅಂಗನವಾಡಿಗಳಲ್ಲಿ ನುಗ್ಗೆ, ಕರಿಬೇವು, ಪಪ್ಪಾಯಿ,ತೆಂಗು,ಇತರೆಸಸಿಗಳನ್ನು ಬೆಳೆಸಿ ಅಪೌಷ್ಟಿಕತೆ ಹೋಗಲಾಡಿಸುವುದು ಯೋಜನೆಯ ಉದ್ದೇಶಗಿದೆ ಎಂದು ಜಿಪಂ ಅಧಿಕಾರಿಗಳು ಹೇಳುತ್ತಾರೆ.
ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಮನೆಯಂಗಳ ಹಾಗೂ ಶಾಲಾಆವರಣದಲ್ಲಿಹಣ್ಣಿನ ಸಸಿಗಳನ್ನು ನಾಟಿ ಮಾಡಿ, ಕೈತೋಟ ನಿರ್ಮಾಣಮಾಡಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ.ಕೈತೋಟನಿರ್ಮಾಣಕ್ಕೆಈಗಾಗಲೇ ಶಾಲೆ, ಅಂಗನವಾಡಿಗಳನ್ನು ಗುರ್ತಿಸಲಾಗಿದೆ. – ಎನ್.ಎಂ.ನಾಗರಾಜ್, ಜಿಪಂ ಸಿಇಒ
ಜಿಲ್ಲೆಯ 102 ಗ್ರಾಪಂ ಪೈಕಿ ತಲಾ 50 ಗ್ರಾಪಂ ವ್ಯಾಪ್ತಿಗಳಲ್ಲಿಕಿಚನ್ ಗಾರ್ಡನ್ ಮತ್ತು ಸೋಕ್‌ಪಿಟ್‌ಗಳ ನಿರ್ಮಾಣ ಮಾಡಲಾಗುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸದಸ್ಯರಿಗೆ ಪೌಷ್ಟಿಕ ಸಸಿಗಳನ್ನು ನೀಡಲಾಗಿದೆ. – ಕರಿಯಪ್ಪ, ಜಿಪಂ ಉಪ ಕಾರ್ಯದರ್ಶಿ
– ಎಸ್.ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.