ರಾಗಿ ಕಟಾವು ಮಾಡಲು ಕಾರ್ಮಿಕರ ಕೊರತೆ
Team Udayavani, Dec 12, 2019, 4:07 PM IST
ದೇವನಹಳ್ಳಿ: ತಾಲೂಕಿನಲ್ಲಿ ಸುಮಾರು 3 ವರ್ಷಗಳಿಂದಲೂ ತೀವ್ರ ಬರಗಾಲ ಆವರಿಸಿ, ಬೆಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಈ ಬಾರಿ ಉತ್ತಮ ಹಿಂಗಾರು ಮಳೆಯಿಂದ ರಾಗಿ ಬೆಳೆ ಉತ್ತಮ ಇಳುವರಿಗೆ ಬಂದಿದೆ.ಆದರೆ ಕಟಾವು ಮಾಡಲು ಜಡಿ ಮಳೆಯ ವಾತಾವರಣ ಹಾಗೂ ಕೂಲಿ ಆಳುಗಳ ಕೊರತೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಟಾವು ಮಾಡಲು ಒಬ್ಬ ಕಾರ್ಮಿಕರಿಗೆ ದಿನಕ್ಕೆ 300 ರಿಂದ 500 ರೂ.ಕೊಡಬೇಕು. ಎಕರೆ ಲೆಕ್ಕಚಾರದ ಪ್ರಕಾರ ಒಪ್ಪಂದದಂತೆ 1 ಎಕರೆಗೆ 6 ಸಾವಿರ ರೂ. ಕೇಳುತ್ತಾರೆ.ಕಟಾವು ಮಾಡುವ ಯಂತ್ರ ಗಂಟೆಗೆ 4ಸಾವಿರದಂತೆ ಪಕ್ಕದ ಆಂಧ್ರ ಪ್ರದೇಶದಿಂದ ಬಂದಿವೆ. ಯಂತ್ರಗಳಲ್ಲಿ ಕಟಾವು ಮಾಡಿಸಿದರೆ ರಾಗಿ ಹಾಗೂ ಹುಲ್ಲು ಪುಡಿಯಾಗಿ ಗುಣಮಟ್ಟ ಕಳೆದುಕೊಳ್ಳುತ್ತದೆ ಎಂದು ರೈತ ರಮೇಶ್ ಹೇಳುತ್ತಾರೆ. ಚನ್ನರಾಯಪಟ್ಟಣ ಹೋಬಳಿ 2035 ಎಕ್ಟೇರ್‌ರಾಗಿ ಬಿತ್ತನೆಆಗಿದ್ದು, ಈಗ ಶೇ 50 ರಷ್ಟು ಬೆಳೆ ಕಟಾವು ಮಾಡಿದ್ದಾರೆ.ತಾಲೂಕಿಗೆ ಬೆಳೆ ಕಟಾವು ಮಾಡುವಒಂದುಚೈನ್‌ಯಂತ್ರ ನೀಡಲಾಗಿತ್ತು. ರಾಗಿ ಬೆಳೆ ನೆಲಕ್ಕೆ ಉರುಳಿರುವ ಕಾರಣ ಯಂತ್ರಕ್ಕೆ ಕಟಾವು ಮಾಡಲು ಸಾಧ್ಯ ವಿಲ್ಲದಕಾರಣ ವಾಪಸ್ಸು ಕಳಿಸಿದ್ದೇವೆ. ದಿಕ್ಕು ತೋಚದರೈತರು ಪಕ್ಕದರಾಜ್ಯದ ಖಾಸಗಿ ಯಂತ್ರಗಳ ಮೊರೆ ಹೋಗಿದ್ದಾರೆ ಎಂದು ಕೃಷಿ ಅಧಿಕಾರಿ ಬೇವಿನಕಟ್ಟಿ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.