ಜನ ಮೆಚ್ಚುಗೆ ಪಡೆದ ಆರೋಗ್ಯ ಕೇಂದ್ರ
Team Udayavani, May 17, 2021, 2:25 PM IST
ನೆಲಮಂಗಲ: ಕೋವಿಡ್ ಮಹಾಮಾರಿಹೆಸರಲ್ಲಿ ಕೆಲವರು ಬೆಡ್ ಬ್ಲಾಕ್ ದಂಧೆಯಲ್ಲಿ ಹಣ ಮಾಡುತ್ತಿದ್ದರೆ ನಗರ ಸಮೀಪದ ಅಡಕಮಾರನಹಳ್ಳಿಯಲ್ಲಿ ಮುಂಗಾರು ಮಳೆ ಚಿತ್ರ ನಿರ್ಮಾಪಕ ಇ.ಕೃಷ್ಣಪ್ಪತಮ್ಮ ತಾಯಿ ಪುಟ್ಟನರಸಮ್ಮ ಅವರ ಹೆಸರಿನಲ್ಲಿ ಉಚಿತವಾಗಿ ಆಸ್ಪತ್ರೆ ಪ್ರಾರಂಭಿಸಿರುವುದು ಸುತ್ತಮುತ್ತಲ ಗ್ರಾಮಗಳ ಬಡವರಿಗೆ ಸಂಜೀವಿನಿ ದೊರೆತಂತಾಗಿದ್ದು ಲಾಕ್‌ಡೌನ್ ವೇಳೆ ವರದಾನವಾಗಿದೆ.
ಸೋಂಕಿತರಿಗೂ ಚಿಕಿತ್ಸೆ ಉಚಿತ:ಅಡಕಮಾರನಹಳ್ಳಿ ಮುಖ್ಯದ್ವಾರದಲ್ಲಿರುವಪುಟ್ಟ ನರಸಮ್ಮ ಉಚಿತ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಚಿಕಿತ್ಸೆ, ಚಿಕಿತ್ಸೆಗೆ ಅತ್ಯವಶ್ಯಕವಾದ ಪ್ರಯೋಗಾಲಯದ ಪರೀಕ್ಷೆ,ಅನಾರೋಗ್ಯ ನಿವಾರಣೆಗೆ ಔಷಧೋಪಚಾರ ಸೇರಿ ಕೋವಿಡ್ ಸೋಂಕಿತರಿಗೂಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಸೇವೆಗೆ ಸಾರ್ಥಕತೆ: ಉಚಿತ ಆರೊಗ್ಯಕೇಂದ್ರದ ತಜ್ಞ ವೈದ್ಯೆ ಡಾ. ಪ್ರಕೃತಿ ಮಾತನಾಡಿ, ನಾನು ವೈದ್ಯಕೀಯ ವಿಜ್ಞಾನವ್ಯಾಸಂಗ ಮಾಡಿದ್ದರಿಂದ ನನ್ನ ಶಿಕ್ಷಣಮೂಲೆಗುಂಪಾಗದೆ ಬಡಜನರಿಗೆಅನುಕೂಲವಾಗಲಿ ಎಂಬುವುದು ಮಾವನವರ ಒತ್ತಾಸೆಯಂತೆ ನಾನು ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದೇನೆ.
ಸೇವೆನನಗೆ ಸದಾ ಸಾರ್ಥಕತೆ ನೀಡುತ್ತಿದೆ,ಆರೋಗ್ಯ ಕೇಂದ್ರದಲ್ಲಿ ಡಾ.ದಿವಾಕರ್ ,ಸಿಬ್ಬಂದಿ ರೋಗಿಗಳಿಗೆ ಉತ್ತಮವಾಗಿಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ವ್ಯರ್ಥವಾಗಲ್ಲ: ಗ್ರಾಮದ ಮುಖಂಡಎ.ಜಿ.ಶಿವಕುಮಾರ್ ಮಾತನಾಡಿ, ನಮ್ಮಚಿಕ್ಕಪ್ಪ ಇ.ಕೃಷ್ಣಪ್ಪ ಅವರು ನಮ್ಮ ಅಜ್ಜಿಅವರ ಹೆಸರಿನಲ್ಲಿ ಆಸ್ಪತ್ರೆ ಪ್ರಾರಂಭಿಸಿದ್ದಾರೆ.ಆರೋಗ್ಯ ಕೇಂದ್ರಕ್ಕೆ ಅವಶ್ಯಕವಾದಯಂತ್ರೋಪಕರಣ ವೈದ್ಯರ ತಂಡ ಮತ್ತುಚಿಕಿತ್ಸಗೆ ಬೇಕಾದ ಔಷಧಿಗಳನ್ನು ನಮ್ಮಕುಟುಂಬದಿಂದಲೇ ನೀಡಲಾಗುತ್ತಿದೆ.ಚಿಕಿತ್ಸೆಗೆ ಆಗಮಿಸುವ ಅನಾರೋಗ್ಯಪೀಡಿತರಿಂದಾಗಲಿ ಅಥವಾ ಸಾರ್ವಜನಿಕರಿಂದಾಗಲಿ ಹಣ ಸ್ವೀಕರಿಸದೆ ಪ್ರಯೋಗಾಲಯವೆಚ್ಚ ಸೇರಿ ಸಂಪೂರ್ಣವಾಗಿ ಉಚಿತಚಿಕಿತ್ಸೆ ನೀಡಲಾಗುತ್ತಿದೆ. ಸುತ್ತಮುತ್ತಲಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳುತ್ತಿರುವುದು ನಮ್ಮ ಶ್ರಮವ್ಯರ್ಥವಾಗುತ್ತಿಲ್ಲ ಎಂಬತೃಪ್ತಭಾವನೆಯಿದೆ ಎಂದು ತಿಳಿಸಿದರು.
ಕೊಟ್ರೇಶ್.ಆರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.