ಐಎಎಸ್, ಕೆಎಎಸ್ ಅಧಿಕಾರಿಗಳಾಗಿ: ಜಿಲ್ಲಾಧಿಕಾರಿ
Team Udayavani, Jan 30, 2021, 1:13 PM IST
ದೇವನಹಳ್ಳಿ: ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿ, ಶ್ರದ್ಧೆಯಿಂದ ಓದುವುದನ್ನು ಅಭ್ಯಾಸ ಮಾಡಿಕೊಳ್ಳುವ ಮೂಲಕ ಸಾಧನೆಯ ಶಿಖರವನ್ನು ತಲುಪಬಹುದೆಂದು ಬೆಂ. ಗ್ರಾಮಾಂತರ ಜಿಲ್ಲಾಧಿ ಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಜಿಪಂ ಸಿಇಒ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಒಬ್ಬ ವಿದ್ಯಾರ್ಥಿನಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಪರಿಭಾವಿ ಸುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಹೆಣ್ಣು ಮಕ್ಕಳು ಹೆಚ್ಚು ಓದಬೇಕು. ಐಎಎಸ್, ಕೆಎಎಸ್, ಐಪಿಎಸ್, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಯಾರಿ ಗಿಂತಲೂ ಕಡಿಮೆ ಇಲ್ಲದ ರೀತಿ ತಮ್ಮ ಸಾಧನೆಯನ್ನು ಮಾಡಿ ತೋರಿಸಬೇಕು. ನಿಮ್ಮ ಭವಿಷ್ಯವನ್ನು ರೂಪಿಸಿ ಕೊಂಡು, ಸಮಾಜದ ಸತøಜೆಗಳಾಗಬೇಕು ಎಂದರು. ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಮಾತ ನಾಡಿ, ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಜಿಪಂ, ತಾಪಂ, ಗ್ರಾಪಂ ಮೂರು ಹಂತಗಳಿದ್ದು, ಗ್ರಾಪಂ ಗ್ರಾಮಗಳ ಸ್ಥಳೀಯ ಆಡಳಿತ ನಡೆಸುವ ಅಧಿಕಾರ ಇರುತ್ತದೆ. ಜಿಲ್ಲಾಮಟ್ಟದಲ್ಲಿ ನಾಲ್ಕು ತಾಲೂಕುಗಳ ಗ್ರಾಮಗಳ ಹೋಬಳಿವಾರು ಒಂದು ಜಿಪಂ ಸದಸ್ಯರಿ ರುತ್ತಾರೆ.
ಜಿಲ್ಲೆಯಲ್ಲಿ 21 ಜಿಪಂ ಸದಸ್ಯರಿದ್ದಾರೆ. ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಗಳು ಒಳಗೊಂಡ ಜಿಪಂ ಜನಪ್ರತಿನಿಧಿಗಳ ಹಾಗೂ ಅಧಿ ಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಹಾಗೂ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಸ್ಥಳೀಯ ಸಂಸ್ಥೆ ಗಳಾದ ಜಿಪಂ, ತಾಪಂ ಹಾಗೂ ಗ್ರಾಪಂ ವ್ಯವಸ್ಥೆಯನ್ನು ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು.
ಇದನ್ನೂ ಓದಿ:ಫೆ. 2 ಕ್ಕೆ ಭಾರತೀಯ ಮಾರುಕಟ್ಟೆಗೆ “ಸ್ಯಾಮ್ ಸಂಗ್ ಗ್ಯಾಲಕ್ಸಿ M02” ಲಗ್ಗೆ
ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ ಮಾತನಾಡಿ, ವೈಯಕ್ತಿಕ ಭಿನ್ನತೆಯು ಪ್ರತಿಯೊಬ್ಬರ ಸೌಭಾಗ್ಯವಾಗಿದ್ದು, ಎಲ್ಲರೂ ಸಹ ಒಂದೊಂದು ವಿಭಾಗದಲ್ಲಿ ಬುದ್ದಿವಂತರಾಗಿರುತ್ತಾರೆ ಎಂದರಲ್ಲದೆ,ಯಾರೊಬ್ಬರೂ ತಮ್ಮೊಂದಿಗೆ ಬೇರೆಯವರನ್ನು ಹೋಲಿಕೆ ಮಾಡಿಕೊಳ್ಳಬೇಡಿ ಎಂದು ವೈದ್ಯ ಹಾಗೂ ವಿಜ್ಞಾನಿಯ ಉದಾಹರಣೆಯ ಮೂಲಕ ತಿಳಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ ಮಾತನಾಡಿದರು.ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ನಡೆದವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾ ರ್ಥಿನಿಯರಿಗೆ ಹಾಗೂ ಇತರೆ ಪ್ರತಿಭಾವಂತ ವಿದ್ಯಾರ್ಥಿ ನಿ ಯರನ್ನು ಗುರುತಿಸಿ ಜಿಪಂ ಕಚೇರಿಗೆ ಆಹ್ವಾನಿಸಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.