ಏಕರೂಪ ಕಮಿಷನ್‌ ಜಾರಿ ಮಾಡಿ


Team Udayavani, Sep 3, 2022, 2:03 PM IST

ಏಕರೂಪ ಕಮಿಷನ್‌ ಜಾರಿ ಮಾಡಿ

ದೇವನಹಳ್ಳಿ : ಪಡಿತರ ವಿತರಣೆಯಲ್ಲಿ ದೇಶದಲ್ಲಿಯೇ ಒಂದೇ ಕಮಿಷನ್‌ ಜಾರಿಯಾಗ ಬೇಕು. ಪಡಿತರ ವಿತರಕರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ದೇವನಹಳ್ಳಿ ತಾಲೂಕು ಸರ್ಕಾರಿ ಪಡಿತರ ವಿತರ ಕರ ನೂತನ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೋವಿಡ್‌ ಸಮಯದಲ್ಲಿ ಪ್ರಾಣದ ಹಂಗನ್ನು ತೊರೆದು ಇಡೀ ರಾಜ್ಯದಲ್ಲಿ 4 ಕೋಟಿ ಜನರಿಗೆ ಪಡಿತರ ವಿತರಣೆ ಮಾಡಿದ್ದಾರೆ.

440 ರೂ. ಕಮಿಷನ್‌ ಜಾರಿ ಮಾಡಿ: ಆಹಾರ ಭದ್ರತೆ ಜಾರಿಯಾದ ಮೇಲೆ 1 ಯುನಿಟ್‌ಗೆ 5 ಕೆ.ಜಿ.ವಿತರಣೆ ಜಾರಿಯಾದ ಮೇಲೆ ಕಮಿಷನ್‌ ಏರು ಪೇರಾಗಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಕಮಿಷನ್‌ ಪಡೆಯುತ್ತಿದ್ದೇವೆ. ದೇಶದಲ್ಲಿ ಒಂದೇ ಕಮಿಷನ್‌ ಜಾರಿಯಾಗಬೇಕು. 440 ರೂ. ಕಮಿಷನ್‌ ಜಾರಿ ಮಾಡಬೇಕು. ಸಗಟು ಮಳಿಗೆಗಳಿಗೆ ಒಂದು ಕ್ವಿಂಟಲ್‌ಗೆ 1 ಕೆ.ಜಿ. ವೇಸ್ಟೇಜ್‌ ತೆಗೆಯಬೇಕು. ವಿವಿಧ 9 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ದಿನ ಬಳಕೆ ವಸ್ತು ವಿತರಿಸಿ: ಕೇರಳದಲ್ಲಿ ಪಡಿತರದ ಜೊತೆಗೆ ನಿತ್ಯ ಬಳಕೆ ವಸ್ತುಗಳನ್ನು ಸಹ ವಿತರಿಸುತ್ತಿದ್ದಾರೆ. ಅದೇ ಮಾದರಿ ನಮ್ಮ ರಾಜ್ಯದಲ್ಲಿ ಜಾರಿಗೆ ತರಬೇಕು. ಇದರಿಂದ ಸರ್ಕಾರಕ್ಕೆ ಯಾವುದೆ ನಷ್ಟವಾಗುವುದಿಲ್ಲ. ಪಡಿತರ ವಿತರಕರಿಗೂ ಉತ್ತೇಜನ ನೀಡಿದಂತಾ ಗುತ್ತದೆ. ಹಾಗಾಗಿ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತಿದೆ.

1520 ಕೋಟಿ ಬಾಕಿ: ಪಡಿತರ ವಿತರಕರಿಗೆ ಬರಬೇಕಾದ ಹೆಚ್ಚುವರಿ ಕಮಿಷನ್‌ ಹಣ ತುರ್ತಾಗಿ ಬಿಡುಗಡೆ ಮಾಡಬೇಕು. 1520 ಕೋಟಿ 5 ತಿಂಗಳ ಬಾಕಿ ಹಣ ಆದಷ್ಟು ಬೇಗ ಬರಲಿದೆ. ಹಾಗೂ ಆಯಾ ತಿಂಗಳ ಕಮಿಷನ್‌ ಆಯಾ ತಿಂಗಳಲ್ಲೇ ನೀಡಬೇಕು. ಕ್ವಿಂಟಲ್‌ಗೆ 124 ರೂ.ನಂತೆ ರಾಜ್ಯಕ್ಕೆ 1536 ಕೋಟಿ 5 ತಿಂಗಳ ಕಮಿಷನ್‌ ಹಣ ಬಿಡುಗಡೆಯಾಗ ಬೇಕಿದೆ ಎಂದು ಹೇಳಿದರು.

ಬಾಕಿ ಕಮಿಷನ್‌ ತುರ್ತು ನೀಡಿ: ರಾಜ್ಯದ ಪಡಿತರ ವಿತರಕರ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಾಕಿ ಉಳಿದಿರುವ ಕಮಿಷನ್‌ ಹಣವನ್ನು 15 ದಿನಗಳೊಳಗಾಗಿ ಪಡಿತರ ವಿತರಕರ ಖಾತೆಗೆ ಜಮಾ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರಲಾಗಿದೆ. ಅತೀ ಶೀಘ್ರದಲ್ಲೇ ಕಮಿಷನ್‌ ಹಣ ಪಾವತಿಯಾಗಲಿದೆ. ಪಡಿತರ ವಿತರಕರು ಸರ್ಕಾರದ ಕೊಂಡಿಯಂತೆ ಕೆಲಸ ನಿರ್ವಹಿಸುತಿದ್ದಾರೆ. ರಾಜ್ಯದಲ್ಲಿ ಮಾದರಿಯಾಗಿ ಪಡಿತರ ವಿತರಣೆ ಮಾಡುತ್ತಿದ್ದೇವೆ. ಕೊರೊನಾ ವೇಳೆ 4 ಕೋಟಿ 30 ಲಕ್ಷ ಜನರಿಗೆ ಪಡಿತರ ವಿತರಕರು ತಮ್ಮ ಜೀವದ ಹಂಗನ್ನು ತೊರೆದು ಪಡಿತರ ವಿತರಣೆ ಮಾಡಿದ್ದೇವೆ. ಪ್ರತಿಯೊಬ್ಬರು ಸಂಘಕ್ಕೆ ಬೆಂಬಲವಾಗಿ ನಿಲ್ಲಬೇಕು. ದೇವನಹಳ್ಳಿಯಲ್ಲಿ ಪ್ರಥಮ ವಾಗಿ ನೂತನ ಸಂಘ ಸ್ಥಾಪಿಸಿ ಉತ್ತಮ ಕೆಲಸ ಮಾಡಿದ್ದಾರೆ. ಇದರಿಂದ ಪ್ರತಿಯೊಬ್ಬರ ಸಮಸ್ಯೆ ಚರ್ಚಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಕೊಳ್ಳಬಹುದಾಗಿದೆ ಎಂದರು.

ಪಡಿತರ ವಿತರಕರ ಸಂಘ ಸ್ಥಾಪನೆ: ತಾಲೂಕು ಸೊಸೈಟಿ ಅಧ್ಯಕ್ಷ ಎ.ದೇವರಾಜ್‌ ಮಾತನಾಡಿ ತಾಲೂಕಿನಲ್ಲಿ ಪಡಿತರ ವಿತರಕರ ಸಂಘ ಸ್ಥಾಪನೆಯಾಗಿದೆ. ಪ್ರತಿ ಪಡಿತರು ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ಪಡಿತರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಈ ಮೊದಲೇ ಸಂಘ ಪ್ರಾರಂಭವಾಗಬೇಕಾಗಿತ್ತು ಎಂದು ಹೇಳಿದರು.

ದೇವನಹಳ್ಳಿ ತಾಲೂಕು ಸರ್ಕಾರಿ ಪಡಿತರ ವಿತರಕರ ಸಂಘದ ಪದಾದಿಕಾರಿಗಳು: ಅಧ್ಯಕ್ಷ ಸಿ.ರಾಜಣ್ಣ, ಉಪಾಧ್ಯಕ್ಷ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಎನ್‌. ವೆಂಕಟೇಶ್‌, ಸಂಘಟನಾ ಕಾರ್ಯದರ್ಶಿ ಅನಂತಕುಮಾರ್‌, ಎಂ.ಕೆ. ಖಜಾಂಚಿ ಶ್ರೀ ರಾಮ, ಸದಸ್ಯರಾದ ನಾರಾಯಣ ಸ್ವಾಮಿ, ಭರತ್‌.ಬಿ.ಆರ್‌, ವೆಂಕಟೇಶ್‌.ಪಿ, ವಿ.ನಾಗಮ್ಮ ನೇಮಕವಾಗಿ ದ್ದಾರೆ. ಇದೆ ವೇಳೆ ಆಹಾರ ಮತ್ತು ನಾಗರೀಕ ಸರಬರಾಜು ಮತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ಉಪನಿರ್ದೇಶಕಿ ಗಿರಿಜಾದೇವಿ, ಆಹಾರ ಶಿರಸ್ತೇದಾರ್‌ ಶ್ರೀಧರ್‌, ಪುರಸಭೆ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ ಶ್ರೀಧರ್‌ ಮೂರ್ತಿ, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎ.ಸಿ.ನಾಗರಾಜ್‌, ಪುರಸಭಾ ಸದಸ್ಯ ಜಿ.ಎ.ರವೀಂದ್ರ ತಾಲೂಕಿನ ಎಲ್ಲ ಪಡಿತರ ವಿತರಕರು ಹಾಗೂ ಸಹಾಯಕರು ಇದ್ದರು.

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

10-bng

Bengaluru: ಬೊಲೆರೊದಲ್ಲಿ ಬಂದು ಮೇಕೆ ಕಳ್ಳತನ ; 29 ಕುರಿ, ಮೇಕೆ, ವಾಹನ ಜಪ್ತಿ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.