ನ್ಯಾ.ಸದಾಶಿವ ಆಯೋಗ ವರದಿ ಜಾರಿ ಅನಿವಾರ್ಯ
Team Udayavani, Dec 11, 2022, 12:51 PM IST
ನೆಲಮಂಗಲ: ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲೇಬೇಕು ಎಂದು ಬಿಜೆಪಿಜಿಲ್ಲಾ ಉಪಾಧ್ಯಕ್ಷ ಬಿ.ಹೊಂಬಯ್ಯ ತಿಳಿಸಿದರು.
ನಗರದ ಕವಾಡಿ ಮಠದಿಂದ ನಗರದ ಮುಖ್ಯಬೀದಿಗಳಲ್ಲಿ ದಲಿತ ಸಂಘಟನೆಗಳಮುಖಂಡರ ನೇತೃತ್ವದಲ್ಲಿ ಸದಾಶಿವ ಆಯೋಗ ಜಾರಿಗೆ ಒತ್ತಾಯಿಸಿ, ಹರಿಹರದಿಂದ ಆರಂಭವಾಗಿರುವ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದಅವರು, ಪ.ಜಾತಿಯ ಕೆಲವು ಸಮುದಾಯಗಳು ರಾಜಕೀಯವಾಗಿ ಶೈಕ್ಷಣಿಕವಾಗಿ ಪ್ರಾತಿನಿಧ್ಯತೆ ಹೊಂದಿರುವುದಿಲ್ಲ ಎಂಬ ಅಂಶಗಳು ಈಗ ಬಹಿರಂಗಗೊಂಡಿದೆ.
ಪ.ಜಾತಿಗಳ ಒಳಮೀಸಲಾತಿ ಜಾರಿಗಾಗಿ ರಾಜ್ಯ ಪ.ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಡಿ.11ರಂದು ನಡೆಯಲಿರುವ ಬೃಹತ್‌ಸಮಾವೇಶಕ್ಕೆ ನಾವೆಲ್ಲರೂ ಸಂಪೂರ್ಣ ಬೆಂಬಲ ನೀಡಲಿದ್ದೇವೆ ಎಂದರು.
ನಾವುಗಳು ಎಲ್ಲಾ ರಾಜಕೀಯ ಪಕ್ಷಗಳಿಗೆ ಎಚ್ಚರಿಸುವ ಹಾಗೂ ಎಚ್ಚರಿಕೆ ನೀಡುವ ಸಲುವಾಗಿಸಮುದಾಯದ ಎಲ್ಲಾ ಮುಖಂಡರು ವಿವಿಧ ಸಂಘಗಳ ಪದಾಧಿಕಾರಿಗಳು ಬೃಹತ್ ಪಾದಯಾತ್ರೆಯ ಹೋರಾಟಕ್ಕೆ ಧುಮುಕಿದ್ದು, ಪ್ರತಿಯೊಬ್ಬರೂ ಸಮಾವೇಶಕ್ಕೆ ಬೆಂಬಲ ನೀಡಿ ಭಾಗವಹಿಸಬೇಕು ಎಂದು ಹೇಳಿದರು.
ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಆರ್. ಭಾಸ್ಕರ್ ಪ್ರಸಾದ್ ಮಾತನಾಡಿ, ಯಥಾಸ್ಥಿತಿ ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡಬೇಕು. ಇಲ್ಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸರ್ಕಾರ ಸಚಿವರು ತಮ್ಮ ಖುರ್ಚಿ ಖಾಲಿ ಮಾಡಲಿ. ಬೃಹತ್ ಸಮಾವೇಶಕ್ಕೆ ಸ್ವಯಂ ಆಸಕ್ತಿವಹಿಸಿ ಭಾಗವಹಿಸಿ ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡ ಬೇಕು. ನಮ್ಮ ಹಕ್ಕು ಪಡೆಯಬೇಕು ಎಂದರು.
ಮಳೆಯಲ್ಲೇ ಪಾದಯಾತ್ರೆ: ಸದಾಶಿವ ಆಯೋಗದ ವರದಿಗೆ ಆಗ್ರಹಿಸಿ ನಡೆಸಿದ ಪಾದಯಾತ್ರೆಗೆ ಬೆಳಗ್ಗೆ ಮಳೆ ಬಂದು ಅಡ್ಡಿ ಪಡಿಸಿತ್ತು, ಆದರೆ, ಮಳೆಗೂ ಜಗ್ಗದೇ ಹೋರಾಟಗಾರರು ಕೊಡೆಹಿಡಿದು ನಗರದ ಮುಖ್ಯರಸ್ತೆಗಳಲ್ಲಿ ಪಾದಯಾತ್ರೆಯನ್ನು ಮಾಡುವ ಮೂಲಕ ಬೆಂಗಳೂರಿನ ಕಡೆ ಪಯಣ ಆರಂಭಿಸಿದರು.
ಆಮ್ ಆದ್ಮಿ ಟಿಕೆಟ್ ಆಕಾಂಕ್ಷಿ ಗಂಗಬೈಲಪ್ಪ, ಬಿಜೆಪಿ ಮುಖಂಡ ವೆಂಕಟೇಶ್ ದೊಡ್ಡೇರಿ, ಮಾದಿಕ ಸಂಘದ ತಾಲೂಕು ಅಧ್ಯಕ್ಷ ಕನಕರಾಜು, ಮುಖಂಡ ಚಲುವರಾಜು, ದೀಪಕ್ ಕಿರಣ್, ಮಹದೇವ್, ನಾಗರಾಜು ನರಸಿಂಹಯ್ಯ, ಮಲ್ಲೇಶ್, ಗ್ರಾಪಂ ಸದಸ್ಯ ರಂಗಸ್ವಾಮಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.