18ರಂದು ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ
Team Udayavani, May 15, 2021, 8:26 PM IST
ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಆವರಣದಲ್ಲಿ ನಿರ್ಮಾಣವಾಗುತ್ತಿರುವಕೋವಿಡ್ ಕೇರ್ ಸೆಂಟರ್ ಸ್ಥಳವನ್ನು ಜಿಲ್ಲಾಧಿಕಾರಿಕೆ.ಶ್ರೀನಿವಾಸ್ ಪರಿಶೀಲಿಸಿದರು.ಬಳಿಕ ಮಾತನಾಡಿದ ಅವರು, ವಿಮಾನ ನಿಲ್ದಾಣದಪ್ರಾಧಿಕಾರದ ನೆರವಿನಿಂದ 150 ಬೆಡ್ ಮತ್ತು ಆಕ್ಸಿಜನ್‌ವ್ಯವಸ್ಥೆ ಹೊಂದಿರುವ ಕೋವಿಡ್ ಸೆಂಟರ್ ಅನ್ನುತುರ್ತಾಗಿ ತೆರೆಯಲಾಗಿದ್ದು, ಮೇ 18ರಂದು ಈಕೋವಿಡ್ ಕೇರ್ ಸೆಂಟರ್ ಉದ್ಘಾಟನೆಗೊಳ್ಳಲಿದೆ.
ಜಿಲ್ಲೆಯ ಕೋವಿಡ್ ಸೋಂಕಿತರು ಇದರ ಉಪಯೋಗಪಡೆಯಬಹುದು ಎಂದರು.ಜಿಲ್ಲಾಡಳಿತವು ಕೊರೊನಾ ತಡೆಗಟ್ಟಲು ಸಾಕಷ್ಟುಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಪ್ರತಿಯೊಬ್ಬರೂ ಕೊರೊನಾ ಹೋಗಲಾಡಿಸಲು ಸಾಮಾಜಿಕ ಅಂತರ,ಮಾಸ್ಕ್ ಕಡ್ಡಾಯವಾಗಿ ಧರಿಸಬೆಕು. ಮುನ್ನೆಚ್ಚರಿಕೆಕ್ರಮಗಳನ್ನು ಪಾಲಿಸಬೇಕು ಎಂದು ಮನವಿಮಾಡಿದರು.
ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ|ಎ.ತಿಪ್ಪೇಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಡಾ| ಶ್ರೀನಿವಾಸ್, ಉಪವಿಭಾಗಾಧಿಕಾರಿ ಅರುಣ್‌ಕುಮಾರ್, ಜಿಲ್ಲಾ ಮಲೇರಿಯಾ ಅಧಿಕಾರಿಡಾ.ಧರ್ಮೇಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ,ಸುಜಯ್ ಮತ್ತಿತರರಿದ್ದರು.
150 ಹಾಸಿಗೆಗಳ ಹಾಗೂ ಆಕ್ಸಿಜನ್ ವ್ಯವಸೆ §ಹೊಂದಿರುವ ಕೋವಿಡ್ ಚಿಕಿತ್ಸಾ ಕೇಂದ್ರ-ಕೋವ್ – ಏಯ್ಡ ಬಿಎಲ್‌ಆರ್‌ಗಾಗಿ ಸ್ವಯಂಸೇವಕರಾಗಲು ಇಚ್ಛಿಸುವ ವೈದ್ಯರು, ದಾದಿಯರು,ಅರೆ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಆಹ್ವಾನಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.