ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಳ
Team Udayavani, Jun 26, 2023, 11:04 AM IST
ದೇವನಹಳ್ಳಿ: ಜಿಲ್ಲೆಯಲ್ಲಿ ಹೈನು ಉದ್ಯಮಕ್ಕೆ ಹೆಸರುವಾಸಿಯಾಗಿದ್ದು, ಪ್ರಸ್ತುತ ಹಾಲು ಉತ್ಪಾದನೆ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿರುವುದರಿಂದ ಹೈನುಗಾರರು ಆರ್ಥಿಕವಾಗಿ ಚೇತರಿಸಿಕೊಳ್ಳಲು ವರದಾನವಾಗಿ ಮಾರ್ಪಟ್ಟಿದೆ.
ಬೇಸಿಗೆಯಲ್ಲಿ ಕುಸಿದಿದ್ದ ಹಾಲು ಉತ್ಪಾದನೆಯಲ್ಲಿ ಈಗ ಮಳೆಗಾಲ ಆರಂಭವಾಗುತ್ತಿದ್ದಂತೆ ಚೇತರಿಕೆ ಕಂಡು ಬರುತ್ತಿದ್ದು ಸರಾಸರಿ ಜಿಲ್ಲೆಯಲ್ಲಿ ನಿತ್ಯ 90ರಿಂದ 95ಸಾವಿರ ಅಧಿಕ ಪ್ರಮಾಣದಲ್ಲಿ ಹೆಚ್ಚಳ ಉತ್ಪಾದನೆ ಕಂಡು ಬಂದಿದೆ.
ಜಿಲ್ಲೆಯ ರೈತರು ಹೈನುಗಾರಿಕೆ ಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಬೇಸಿಗೆ ಅವಧಿಯಲ್ಲಿ ಹಸಿರು ಮೇವಿನ ಕೊರತೆ ಕಾಡುತ್ತಿರುವ ಪರಿಣಾಮ ಹಾಲು ಉತ್ಪಾದನೆಯ ದಿಡೀರ್ ಕುಸಿತವಾದ ಪರಿಣಾಮ ಹಾಲು ಉತ್ಪಾದಕರ ಆದಾಯಕ್ಕೆ ಪೆಟ್ಟು ಬೀಳುವಂತಾಗಿತ್ತು. ಜಿಲ್ಲೆಯ ದೊಡ್ಡಬಳ್ಳಾಪುರ, ನೆಲ ಮಂಗಲ, ಹೊಸಕೋಟೆ, ದೇವನಹಳ್ಳಿ ಹೈನೋದ್ಯಮವನ್ನು ನೆಚ್ಚಿಕೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಸುಮಾರು 1.60ಲಕ್ಷ ಜಾನುವಾರುಗಳಿವೆ. ಈ ಹಿಂದೆ ಪ್ರತಿ ದಿನ ಜಿಲ್ಲೆಯಲ್ಲಿ 6.5ಲಕ್ಷ ಲೀಟರ್ ಹಾಲು ಉತ್ಪಾದನೆ ಯಾಗುತ್ತಿತ್ತು. ಆದರೆ ಕಳೆದ ಕೆಲ ತಿಂಗಳಿಂದ ಇದರಲ್ಲಿ ಕುಸಿತ ಕಂಡು ಪ್ರತಿದಿನ ಕೇವಲ 3ಲಕ್ಷ ಲೀಟರ್ ಹಾಲು ಸಂಗ್ರಹಣೆ ಯಾಗುತ್ತಿತ್ತು. ಇದರಿಂದ ಹೈನೋದ್ಯಮಕ್ಕೆ ಬಂಡವಾಳ ಕೂಡ ಕೈ ಸೇರದ ಪರಿಸ್ಥಿತಿ ಎದುರಾಗಿತ್ತು. ಇದೀಗ ಮಳೆ ಆರಂಭ ವಾಗುತ್ತಿದ್ದಂತೆ ಹಾಲಿನ ಉತ್ಪಾದನೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಈ ಮೂಲಕ ಪ್ರತಿದಿನ 4 ಲಕ್ಷ ಲೀಟರ್ ಹಾಲು ಉತ್ಪಾದನೆಯ ಗಡಿದಾಟಿದೆ. ಇದರಿಂದ ರೈತರಲ್ಲಿ ಕೊಂಚ ಸಂತೋಷ ಮೂಡಿದೆ.
ಚರ್ಮಗಂಟು ರೋಗಕ್ಕೆ 200ಕ್ಕೂ ಹೆಚ್ಚು ರಾಸುಗಳು ಸಾವು: ಕಳೆದ ವರ್ಷ ಚರ್ಮಗಂಟು ರೋಗ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿತ್ತು. ಚರ್ಮಗಂಟು ರೋಗಕ್ಕೆ 200ಕ್ಕೂ ಹೆಚ್ಚು ರಾಸು ಗಳು ಸಾವನ್ನಪ್ಪಿತ್ತು. ಇದರಿಂದ ಎಚ್ಚೆತ್ತು ಕೊಂಡಿ ರುವ ಇಲಾಖೆ ಈ ಬಾರಿ ಮುನ್ನೆ ಚ್ಚರಿಕೆಯಿಂದ ಜೂನ್ ತಿಂಗಳಲ್ಲಿ ಚರ್ಮಗಂಟು ರೋಗ ಲಸಿಕೆ ವಿತರಿಸುತ್ತಿದೆ. ಜೂ.1 ರಿಂದ 30ರವರೆಗೆ 1.60 ಲಕ್ಷ ಲಸಿಕೆ ವಿತರಣೆ ಗುರಿ ಹೊಂದಿದೆ. ಅದರಲ್ಲಿ ಈಗಾಗಲೇ 1.20ಲಕ್ಷ ಲಸಿಕೆ ವಿತರಣೆ ಮುಗಿ ದಿದ್ದು ಅದಷ್ಟು ಬೇಗ ಪೂರ್ಣಗೊಳ್ಳಲಿದೆ. ಕಳೆದ ಬಾರಿ ಚರ್ಮಗಂಟು ರೋಗ ಹೆಚ್ಚು ಕಂಡು ಬಂದ ಗ್ರಾಮಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ.
ಇಳಿಕೆ ಕಂಡಿದ್ದ ಹಾಲು ಉತ್ಪಾದನೆ ಏರಿಕೆ: ಬೇಸಿಗೆ ತಾಪ, ನೀರಿನ ಕೊರತೆ ಚರ್ಮಗಂಟು ರೋಗಗಳ ಸಂಕಷ್ಟ ಗಳಿಂದ ಹೈನೋದ್ಯಮ ಚೇತರಿಕೆ ಕಾಣುತ್ತಿದೆ. ಒಂದು ತಿಂಗಳ ಹಿಂದೆ ಗಣನೀಯ ಇಳಿಕೆ ಕಂಡಿದ್ದ ಹಾಲು ಉತ್ಪಾದನೆ ಈಗ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ 4ಲಕ್ಷ 20ಸಾವಿರ ಇದ್ದದ್ದು, ಇದೀಗ 4ಲಕ್ಷ 80 ಸಾವಿರ ಆಗಿದೆ. ಬೇಸಿಗೆ ಕಾಲದಲ್ಲಿ ಸಾಮಾನ್ಯ ವಾಗಿ ಹಸಿ ಮೇವಿನ ಕೊರತೆ ಉಂಟಾಗುತ್ತದೆ. ಬಿಸಿಲಿನ ತಾಪ ಹೆಚ್ಚಿದ ಕಾರಣ ಹಸಿಮೇವಿನ ಕೊರತೆ ಉಂಟಾಗಿತ್ತು. ಹಸುಗಳ ಮೇವಿನ ವಿವಿಧ ತಳಿಯ ಉತ್ಪನ್ನಗಳ ದರ ಹೆಚ್ಚಳ ಕೂಡ ಆಗಿತ್ತು. ಜಿಲ್ಲೆಯ ವಿವಿಧ ಊರುಗಳಿಂದ ಗರ್ಭ ಧರಿಸಿದ ರಾಸುಗಳನ್ನು ಉತ್ತರ ಭಾರತದಿಂದ ಬಂದು ಹೆಚ್ಚಿನ ಹಣ ಕೊಟ್ಟು ಕೊಂಡೊಯ್ಯುತ್ತಿರುವುದು ಕಂಡು ಬಂತು.
ಪಶುಪಾಲನಾ ಇಲಾಖೆಯ ರೈತ ರಿಗೆ ಹೈನು ಉದ್ಯಮದ ಉತ್ಪಾದನೆಯ ಸಾಗಾ ಣಿಕಾ ವೆಚ್ಚ ಕಡಿಮೆ ಮಾಡುವುದು. ಸಾಕಷ್ಟು ಅಧಿಕ ಲಾಭ ಪಡೆಯುವುದು ಸೇರಿದಂತೆ ರೈತರಿಗೆ ಪಶುಪಾಲನಾ ಇಲಾಖೆ ಮನವರಿಕೆ ಮಾಡಿದೆ.
ಜಿಲ್ಲೆಯಲ್ಲಿ ಹಾಲು ಉತ್ಪಾದಕರಿಗೆ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು. ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ಹಾಗೂ ಸಾಕಷ್ಟು ಅಧಿಕ ಲಾಭ ಪಡೆಯಲು ಹಾಲು ಉತ್ಪಾ ದಕರಿಗೆ ಮನವರಿಕೆಯನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗುತ್ತಿದೆ. ಈಗಾಗಲೇ ಚರ್ಮಗಂಟು ರೋಗ ಬರದಂತೆ ಲಸಿಕೆಗಳನ್ನು ಹಾಕಿಸಲಾಗುತ್ತಿದೆ. ರೈತರಿಗೆ ಉತ್ತಮ ಲಾಭವನ್ನು ಹೈನುಗಾರಿಕೆ ನೀಡುತ್ತಿದೆ. – ಡಾ.ನಾಗರಾಜ್, ಉಪನಿರ್ದೇಶಕರು, ಪಶುಪಾಲನಾ ಇಲಾಖೆ
ಪ್ರಸ್ತುತ ದಿನಗಳಲ್ಲಿ ಪಶು ಆಹಾರ ದುಬಾರಿಯಾಗುತ್ತಿರು ವುದರಿಂದ ಹಾಲು ಉತ್ಪಾದನೆ ಅಧಿಕ ವೆಚ್ಚ ಬೀಳುತ್ತಿದೆ. ಪ್ರತಿ ಲೀಟರ್ ಹಾಲಿಗೆ ಕನಿಷ್ಠ ದರವನ್ನು ನಿಗದಿ ಪಡಿಸಬೇಕು. ರೈತರ ಆರ್ಥಿಕ ಮಟ್ಟ ಸುಧಾರಣೆಯಾಗಲು ಹೈನುಗಾರಿಕೆ ಪೂರಕವಾಗಿದೆ. – ರಾಮಾಂಜಿನಪ್ಪ, ಹಾಲು ಉತ್ಪಾದಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.