ತಾಲೂಕಿನ ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ
Team Udayavani, Aug 16, 2020, 12:53 PM IST
ದೊಡ್ಡಬಳ್ಳಾಪುರ: ತಾಲೂಕಿನ ವಿವಿಧೆಡೆಗಳಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಹಾಡೋನ ಹಳ್ಳಿಯಲ್ಲಿ ಮಧ್ಯರಾತ್ರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದು ಗಮನ ಸೆಳೆಯಿತು.
ಗ್ರಾಮದ ಪಾಠದ ಮನೆ ವತಿಯಿಂದ 74 ಸ್ವಾತಂತ್ರ್ಯ ದಿನವನ್ನು ಆ.14ರ ಮಧ್ಯರಾತ್ರಿ ಆಚರಿಸಲಾಯಿತು. ಗ್ರಾಮಸ್ಥರಾದ ಎಚ್.ಡಿ.ಸತೀಶ್ ಮಾತನಾಡಿ, ಪಾಠದ ಮನೆ ವತಿಯಿಂದ 22 ವರ್ಷಗಳಿಂದಲೂ ಸ್ವಾತಂತ್ರ್ಯ ದಿನವನ್ನು ಮಧ್ಯರಾತ್ರಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯ ಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಸಿಗಳನ್ನು ವಿತರಿಸಲಾಯಿತು.
ಗ್ರಾಮದ ಗುಂಡಪ್ಪ, ಪ್ರಕಾಶ್, ಎಚ್.ಆರ್.ಹರೀಶ್, ಸುನೀಲ್, ಎಚ್.ಎಂ.ಹರೀಶ್, ಅನಿಲ್, ಮನು, ಮಂಜುನಾಥ್, ರಾಹುಲ್, ನರೇಶ್, ಮದನ್, ವಿನಯ್, ಅಮರ್, ಶ್ರೀನಿವಾಸ್, ಮೋಹನ್, ನಿಖೀಲ್, ಅವಿನಾಶ್, ಹೇಮಂತ್, ರಕ್ಷಿತ್, ಸುಹಾಸ್, ವಜ್ರೆàಶ್, ಸುಭಾಷ್ ಮತ್ತಿತರರಿದ್ದರು.
ನಗರದ ಕುಚ್ಚಪ್ಪನಪೇಟೆಯಲ್ಲಿ ಅರಿವು ಮಿತ್ರವೃಂದದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ರಂಗ ಕಲಾವಿದ ಕೆ.ಸಿ.ನಾರಾಯಣ್ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಕಸಾಪದಿಂದ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಅರಿವು ಮಿತ್ರವೃಂದದ ಪಿ.ಆರ್.ರಮೇಶ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ತಾಲೂಕು ಕಚೇರಿ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಧ್ವಜಾರೋಹಣ ನೆರವೇರಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರೊ.ಎನ್.ಶ್ರೀ ನಿವಾಸಯ್ಯ ಧ್ವಜಾರೋ ಹಣ ನೆರವೇರಿಸಿದರು. ನಗರದ ಸರಸ್ವತಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಶಾಲಾ ಅಧ್ಯಕ್ಷ ಎ.ಸುಬ್ರಹ್ಮಣಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಯದರ್ಶಿ ಮಂಜುಳಾ, ಉಪಾಧ್ಯಕ್ಷ ಎಸ್. ಸ್ವರೂಪ್, ನಯನ ಸ್ವರೂಪ್ ಹಾಗೂ ಮುಖ್ಯೋಪಾಧ್ಯಾಯ ಬಿ.ಕೆ.ಸಂಪತ್ ಕುಮಾರ್ ಉಪಸ್ಥಿತರಿದ್ದರು. ನಗರದ ಎಂಎ ಸ್‌ವಿ ಪ ಬ್ಲಿಕ್ ಶಾಲೆಯಲ್ಲಿನ ಡೆದ ಸ್ವಾತಂತ್ರ್ಯ ದಿನಾಚರಣೆಯ ಪ್ರಗತಿ ಪರ ರೈತ ಶಿ ವಪ್ಪ ಧ್ವಜಾರೋಹಣ ನೆರವೇರಿಸಿದರು. ಶಾಲಾ ಅಧ್ಯಕ್ಷ ಎ.ಸುಬ್ರಹ್ಮಣ್ಯ, ಕಾರ್ಯದರ್ಶಿ ಮಂಜುಳಾ, ಪ್ರಾಂಶುಪಾಲರಾದ ಲೈಲಾ ಕುಮಾರಿ ಮತ್ತು ನಾಗರತ್ನ ಎನ್.ಪಾಲನ್ ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರದ ಎಂ.ಎಸ್.ವಿ. ಪಬ್ಲಿಕ್ ಶಾಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಶಾಲಾ ಅಧ್ಯಕ್ಷ ಸುಬ್ರಹ್ಮಣ್ಯ ಎ.ರವರು ಧ್ವಜಾರೋಹಣ ಮಾಡಿದರು. ಶಾಲೆಯ ಉಪಾಧ್ಯಕ್ಷ ಸ್ವರೂಪ್ ಎಸ್., ಶಾಲೆಯ ಪ್ರಾಂಶುಪಾಲರಾದ ನಾಗರತ್ನ ಎನ್.ಪಾಲನ್ ಮತ್ತು ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಅರವಿಂದ ವಿದ್ಯಾಸಂಸ್ಥೆ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಅದ್ಯಕ್ಷರು ನಗರಸಭೆಯ ನಿಕಟ ಪೂರ್ವ ಅಧ್ಯಕ್ಷ ಟಿ. ಎನ್.ಪ್ರಭುದೇವ್ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿಗಳಾದ ಡಿ.ಕೆ.ವೆಂಕಪ್ಪ, ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಅರವಿಂದ ಕನ್ನಡ ಶಾಲೆಯ ಮುಖ್ಯ ಶಿಕ್ಷಕಿ ಅಶ್ರಫ್ ಉನ್ನಿಸಾ, ಆಂಗ್ಲ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ವಸಂತ ರಾಜ, ತುಳಸಿ ವೈ.ಎನ್ ಅನಿತಾ ಹಾಗೂ ಉಪನ್ಯಾಸಕರು ಶಿಕ್ಷಕರು ಭಾಗವಹಿಸಿದ್ದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.