ರೇಷ್ಮೆಗೂಡುನೊಂದಿಗೆ ಬರುತ್ತಿದೆಯಾ ಸೋಂಕು?
ಸೋಂಕು ಪೀಡಿತ ಜಿಲ್ಲೆ, ರಾಜ್ಯಗಳಿಂದ ರಾಮನಗರಕ್ಕೆ ಹರಿದು ಬರುತ್ತಿರುವ ರೇಷ್ಮೆ ಗೂಡು
Team Udayavani, Apr 17, 2020, 3:41 PM IST
ಸಾಂದರ್ಭಿಕ ಚಿತ್ರ
ರಾಮನಗರ: ಕೋವಿಡ್-19 ವೈರಸ್ ಸೋಂಕು ರಹಿತ ರಾಮ ನಗರ ಸದ್ಯ ಗ್ರೀನ್ ಜೋನ್‌ನಲ್ಲಿದೆ. ಆದರೆ ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಗೆ ಸೋಂಕು ಪೀಡಿತ ಪ್ರದೇಶಗಳಿಂದ ರೇಷ್ಮೆ ಗೂಡು ಬರುತ್ತಿದ್ದು, ಜಿಲ್ಲಾ ಕೇಂದ್ರ ರಾಮನಗರದ ನಿವಾಸಿಗಳಲ್ಲಿ ಆತಂಕ ಮತ್ತೆ ಮನೆ ಮಾಡಿದೆ. ಕಳೆದೊಂದು ವಾರದಿಂದ ಸೋಂಕು ಪೀಡಿತ ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು, ರಾಜ್ಯದ ಬೆಳಗಾವಿ ಜಿಲ್ಲೆ ಗಳಿಂದಲೂ ರೇಷ್ಮೆ ಗೂಡು ರಾಮನಗರಕ್ಕೆ ಬಂದಿದೆ. ರೆಡ್
ಜೋನ್‌ನಲ್ಲಿರುವ ಬೆಳಗಾವಿಯಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಮುಚ್ಚಿದೆ. ಆದರೆ ಅಲ್ಲಿಂದಲೇ ರಾಮನಗರಕ್ಕೆ ಗೂಡು ಬರುತ್ತಿದೆ ಎಂದು ಗೂಡು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ವಿಶೇಷವಾಗಿ ಮಹಾರಾಷ್ಟ್ರದಿಂದ ಬರುತ್ತಿರುವ ಗೂಡು ಮಾರುಕಟ್ಟೆಗೆ ಬಾರದೆ ನೇರ ರೀಲರ್‌ಗಳ ಫ್ಯಾಕ್ಟರಿಗಳನ್ನು ಸೇರುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗೆ ಸೋಂಕಿತ ಪ್ರದೇಶಗಳಿಂದ ಬರುತ್ತಿರುವ ಜನ ತಮ್ಮೊಡನೆ ಸೋಂಕು ಮೆತ್ತಿಸಿಕೊಂಡೇ ಬಂದರೆ ಗತಿ ಏನು ಎಂಬುದು ನಗರವಾಸಿಗಳ ಪ್ರಶ್ನೆ. ರೇಷ್ಮೆ ಗೂಡು ತರುವ ರೈತರು ಮಾರುಕಟ್ಟೆಗಾದರು ನೇರವಾಗಿ ಬಂದರೆ ಕೆಲವೊಂದು ರಕ್ಷಣಾ ವ್ಯವಸ್ಥೆಯಾದರು ಅಲ್ಲಿ ಜಾರಿಯಲ್ಲಿದೆ. ಮಾರುಕಟ್ಟೆಯ ವ್ಯವಸ್ಥೆಯನ್ನೇ ಧಿಕ್ಕರಿಸುವುದು ಸರಿಯಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಬೈವೋಲ್ಟಿನ್ ರೇಷ್ಮೆ ಗೂಡಿಗೆ (ಬಿಳಿಗೂಡು) ರಾಮನಗರದಲ್ಲಿ ಬೇಡಿಕೆ ಇದ್ದು, ಬೇರೆ ಮಾರುಕಟ್ಟೆಗಳಿಗಿಂತ ಇಲ್ಲಿ ಹೆಚ್ಚಿನ ದರ ಸಿಗುತ್ತಿದೆ. ಕಳೆದೆರೆಡು ವಾರಗಳಿಂದ ದಿನವೊಂದಕ್ಕೆ ಸರಾಸರಿ 10 ಸಾವಿರ ಕೇಜಿ ಬೈವೋಲ್ಟಿನ್ ಗೂಡು ಈ ಮಾರುಕಟ್ಟೆಗೆ ಬರುತ್ತಿದೆ ಎಂದು ಅಂಕಿ ಅಂಶಗಳು ಹೇಳಿವೆ.
ಅಶ್ವತ್ಥ ನಾರಾಯಣ ಗೌಡ ಬೇಸರ
ಪತ್ರಿಕೆಯೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಗೌಡ, ಸೋಂಕು ಪೀಡಿತ ರಾಜ್ಯಗಳಿಂದ ರೇಷ್ಮೆ ಗೂಡು ತರಲು ಜಿಲ್ಲಾಧಿಕಾರಿಗಳು,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅವಕಾಶ ಕೊಡಬಾರದು. ಬೆಳಗಾವಿ ಮುಂತಾದ ಸೋಂಕು ಪೀಡಿತ ಜಿಲ್ಲೆಗಳಿಂದಲೂ ಗೂಡು ತರುವವರ ಸಂಖ್ಯೆ
ಅಧಿಕವಾಗುತ್ತಿದೆ. ಗ್ರೀನ್ ಜೋನ್‌ನಲ್ಲಿರುವ ರಾಮನಗರ ಹಳದಿ, ಕೆಂಪು ಜೋನ್‌ಗಳಿಗೆ ಹೋಗುವುದು ಬೇಡ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.