ಶೀಘ್ರ ಐಸೋಲೇಷನ್ ವಾರ್ಡ್ ಕಾರ್ಯಾರಂಭ
Team Udayavani, Jul 28, 2020, 7:54 AM IST
ದೇವನಹಳ್ಳಿ: ಕೋವಿಡ್ ಸೋಂಕು ತಾಲೂಕು ಮತ್ತು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರ ಪಕ್ಕದ ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ನೂತನ ತೀವ್ರ ನಿಗಾ ಘಟಕ, ಐಸೋಲೇಷನ್ ವಾರ್ಡ್ ಘಟಕ ನಿರ್ಮಾ ಣದ ಕಾಮಗಾರಿ ಭರದಿಂದ ನಡೆಯುತ್ತಿದೆ. ಕೋವಿಡ್ ಪರೀಕ್ಷೆ ಸಕಾಲದಲ್ಲಿ ನಡೆಸಿ ಸೋಂಕಿತರಿಗೆ ಚಿಕಿತ್ಸೆ ನೀಡುವುದು,
ಸೋಂಕಿತ ರಲ್ಲದವರನ್ನು ಕ್ವಾರಂಟೈನ್‌ನಿಂದ ಬಿಡುಗಡೆ ಮಾಡುವುದು ಅನಿವಾರ್ಯ. ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಿ ರುವ ತಾಯಿ ಮಗು ಆಸ್ಪತ್ರೆಯಲ್ಲಿನ 4-6 ಕೊಠಡಿಗಳನ್ನು ಹೈಟೆಕ್ ಗಂಟಲು ದ್ರವ ಪರೀಕ್ಷಾ ಕೇಂದ್ರ, 80 ಹಾಸಿಗೆಯುಳ್ಳ ತುರ್ತು ನಿಗಾ ಘಟಕ ಕಾರ್ಯಾರಂಭಕ್ಕೆ ಸಿದ್ಧತೆ ನಡೆ ಯುತ್ತಿದೆ. ಈ ಮೂಲಕ ಒಂದು ವಾರದೊಳ ಗಾಗಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ತೀವ್ರ ನಿಗಾ ಘಟಕ ಮತ್ತು ಐಸೋ ಲೇಷನ್ ವಾರ್ಡ್‌ಗಳು ಜಿಲ್ಲೆ ಮತ್ತು ತಾಲೂಕಿನಲ್ಲಿ ಅತ್ಯವಶ್ಯಕ. ಕೋವಿಡ್ ಪಾಸಿಟಿವ್ ಪ್ರಕರಣ ಗಳಿಗೆ ಚಿಕಿತ್ಸೆ ನೀಡಲು ಸಹಕಾರಿ. ಕಳೆದ ಜೂನ್‌ನಲ್ಲಿ ಗಂಟಲು ದ್ರವ ಪರೀಕ್ಷೆಗಳ ವರದಿ ಬೆಂಗಳೂರಿಗೆ ಕಳುಹಿಸಿದರೂ ಸಾವಿರಾರು ಸೋಂಕಿತ ಜನರ ಪರೀಕ್ಷೆ ನಡೆಸುವುದು ಸವಾಲಾಗಿತ್ತು. ಇದನ್ನು ಮನ ಗಂಡ ಸರ್ಕಾರ ಕೇಂದ್ರ ವಿಪತ್ತು ನಿರ್ವಹಣಾ ಯೋಜನೆಯಡಿ ದೇವನಹಳ್ಳಿಯಲ್ಲಿ 10 ತುರ್ತು ನಿಗಾ ಘಟಕದ ಬೆಡ್‌ಗಳ ಜತೆಗೆ ಪ್ರತಿ ಬೆಡ್‌ಗೆ ಒಂದೊಂದು ವೆಂಟಿಲೇಟರ್ ಉಳ್ಳ ಹೈಟೆಕ್ ಕೇಂದ್ರ ಮತ್ತು 60 ಹಾಸಿಗೆಗಳ ಸುಸಜ್ಜಿತ ಚಿಕಿತ್ಸಾ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಪ್ರತ್ಯೇಕಿತ ಗಂಟಲು ದ್ರವ ಪಡೆ ಯಲು ಕೊಠಡಿ ವ್ಯವಸ್ಥೆಯ ಸಿದ್ಧತೆ ನಡೆದಿದೆ. ಕೋವಿಡ್ ಆಸ್ಪತ್ರೆ ಪ್ರಾರಂಭವಾಗುತ್ತಿರುವುದರಿಂದ ತ್ವರಿತವಾಗಿ ಗಂಟಲು ದ್ರವ ಪರೀಕ್ಷೆ ನಡೆಸಿ, ಗರಿಷ್ಠ ಮೂರು ತಾಸಿನಲ್ಲಿ ಸ್ಥಳದಲ್ಲಿಯೇ ವರದಿ ಸಿಗುವುದರಿಂದ ಸೋಂಕಿತರಿಗೆ ತ್ವರಿತ ಚಿಕಿತ್ಸೆ, ನೆಗೆಟಿವ್ ಬಂದಂ ತಹವರಿಗೆ ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಾರೆ.
ಇತ್ತೀಚಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪರೀಕ್ಷಾ ವರದಿ ಕೈಸೇರುತ್ತಿರುವುದು ತಡವಾಗುತ್ತಿದೆ. ಅದಕ್ಕಾಗಿ ಕೋವಿಡ್ ಸೋಂಕಿತರಿಗಾಗಿ ಪರೀಕ್ಷಾ ಘಟಕ ಪ್ರಾರಂಭಿಸಲಾಗುತ್ತಿದೆ. –ಡಾ.ಮಂಜುಳಾದೇವಿ, ಜಿಲ್ಲಾ ಆರೋಗ್ಯಾಧಿಕಾರಿ
ಸಕಾಲದಲ್ಲಿ ಸೋಂಕು ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡುವುದು. ಸೋಂಕಿತರಲ್ಲದವರನ್ನು ಕ್ವಾರಂಟೈನ್ ನಿಂದ ಬಿಡುಗಡೆಗೊಳಿಸಬೇಕು. ಸೋಂಕಿನ ಪರೀಕ್ಷಾ ಘಟಕ ಪ್ರಾರಂಭಿಸುತ್ತಿರುವುದು ಉತ್ತಮ ಕಾರ್ಯ. – ಎಚ್.ಕೆ.ವೆಂಕಟೇಶಪ್ಪ, ಜಿಲ್ಲಾ ಡಿಎಸ್‌ಎಸ್ ಕಾರ್ಯಕಾರಿ ಸಮಿತಿ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.