ಹಣ್ಣಿನ ಮಳಿಗೆ ನಿರ್ಮಿಸಿದರೆ ರೈತರಿಗೆ ಅನುಕೂಲ
Team Udayavani, May 28, 2022, 2:41 PM IST
ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಾಲೂಕಿನಲ್ಲಿ ಇರುವುದರಿಂದ ಹಲಸು, ಮಾವು, ಚಕ್ಕೋತ ಸೀಸನ್(ಋತುಮಾನ) ಗಳಲ್ಲಿ ವಿಮಾನ ನಿಲ್ದಾಣದಲ್ಲಿ ಸ್ಟಾಲ್‌ಗಳ ಮೂಲಕ ಮಾರಾಟ ಮಾಡಲು ಅವಕಾಶ ಮಾಡಿ ಕೊಡಬೇಕುಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಪಟ್ಟಣದ ರಾಣಿಸರ್ಕಲ್‌ನಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆಇಲಾಖೆ ವತಿಯಿಂದ ಹಮ್ಮಿ ಕೊಂಡಿದ್ದ ಹಲಸು, ಮಾವು ಮೇಳವನ್ನು ಉದ್ಘಾಟಿಸಿ ಮಾತನಾಡಿ,ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೈತರು ಬೆಳೆದ ಹಣ್ಣು ಮಾರಾಟ ಮಾಡಲು ಸ್ಟಾಲ್‌ಗಳು ನಿರ್ಮಾಣವಾದರೆ ದೇಶ-ವಿದೇಶಗಳಿಂದ ಬರುವ ಗ್ರಾಹಕರಿಗೆ ಹಣ್ಣು ಮಾರಾಟ ಮಾಡಲುರೈತರಿಗೆ ಅನುಕೂಲವಾಗುತ್ತದೆ. ಮಾವು ಬೆಳೆಯುವರೈತರಿಗೆ ಹಾಗೂ ಮಾವು ಸವಿಯುವ ಗ್ರಾಹಕರ ನಡುವೆಸಂಪರ್ಕ ಕಲ್ಪಿಸಿ ರೈತರಿಗೆ ಉತ್ತಮ ಮಾರುಕಟ್ಟೆಒದಗಿಸಲು ಮೂರು ದಿನ ಮಾವು ಮೇಳವನ್ನು ಹಮ್ಮಿಕೊಂಡಿದೆ ಎಂದರು.
ಅಧಿಕಾರಿಗಳೊಂದಿಗೆ ಚರ್ಚಿಸುವೆ: ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮಾತನಾಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆ ಮಾತನಾಡಿ ಹಣ್ಣಿನ ಸ್ಟಾಲ್‌ಹಾಕಲು ಚರ್ಚಿಸಲಾಗುವುದು. ಮಾವು, ಹಲಸು,ಚಕ್ಕೋತ ಹಾಗೂ ಇತರೆ ಹಣ್ಣಿನ ಮಳಿಗೆಗಳನ್ನು ವಿಮಾನನಿಲ್ದಾಣದಲ್ಲಿ ತೆರೆಯಲು ವಿಐಎಎಲ್ ಅಧಿಕಾರಿಗಳೊಂ ದಿಗೆ ಚರ್ಚಿಸಲಾಗುವುದು. 22 ಸ್ಟಾಲ್ ಬಂದಿದ್ದು,ಜಿಲ್ಲೆಯಲ್ಲಿ ಮಾವಿನ ಫಸಲು ಇನ್ನು ಸರಿಯಾದ ರೀತಿಬರದೇ ಇರುವುದರಿಂದ ಇನ್ನು 15ದಿನದ ನಂತರ ಮತ್ತೆಜಿಲ್ಲೆಯ ಸ್ಥಳೀಯರಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿ ಕೊಡಲಾಗುವುದು ಎಂದರು.
ಹಾಪ್‌ಕಾಮ್ಸ್ ದರಕ್ಕಿಂತ ಕಡಿಮೆ: ಹಾಪ್‌ಕಾಮ್ಸ್ ದರಕ್ಕಿಂತ ಕಡಿಮೆ ರೀತಿಯಲ್ಲಿ ಮಾವನ್ನುನೀಡಲಾಗುತ್ತದೆ. ನೈಸರ್ಗಿಕವಾಗಿ ಮಾಗಿಸಿದ ಒಳ್ಳೆಯ ರುಚಿಯ ಮಾವಿನ ಹಣ್ಣುಗಳನ್ನುಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ದೊರಕಿಸುವಉದ್ದೇಶದಿಂದ ಮಾವು ಮತ್ತು ಹಲಸು ಪ್ರದರ್ಶನಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಮಾವು ಮೇಳದಲ್ಲಿ ಮಾರಾಟಕ್ಕೆ ಬಂದಿರುವ ಹಣ್ಣು ನೈಸರ್ಗಿಕವಾಗಿಯೇ ಮಾಗಿಸಲಾಗಿದೆ. ಎಲ್ಲ ಜಾತಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದರು.
ಗ್ರಾಹಕರನ್ನು ಸಳೆದ ವಿವಿಧ ತಳಿಯ ಮಾವು: ಮಾವು ಮೇಳದಲ್ಲಿ ಮಲಗೋಬ, ಮಲ್ಲಿಕಾ, ಆರ್ಕಾಉದಯ, ಐಲ್ಡಾನ್, ಲಿಲ್ಲಿ, ಬಾದಾಮಿ, ತೋತಾ ಪುರಿ, ಲಾಲ್ ಮಣಿ, ಆಸ್ಟೀವ, ಟಾಯ್ ಅಬ್ಕೀನ್,ಅರ್ಕಾ ಅನ್ಮೋಲ್, ದಶೇರಿ, ಬೆನ್ನೇಶಾನ್, ರಸಪೂರಿ,ಅರ್ಕ ಪುನಿತ, ಸನ್ಸೇಷಿನ್, ಆರ್ಕನಿಲ್ಕೀಕಾಗ್, ಪಾಯರ್, ಕೇಂಟ್, ಕಿಟ್, ಮಾಯ, ಇತರೆಜಾತಿಯ ಮಾವುಗಳು ಗ್ರಾಹಕರನ್ನು ಸೆಳೆದವು. ಪ್ರತಿಯೊಬ್ಬರು ಹಣ್ಣಿನ ಸವಿರುಚಿ ಸವೆದು ನಾಲಿಗೆ ಯಲ್ಲಿ ನೀರು ಬರುವಂತೆ ಆಯಿತು.
ಕರ್ನಾಟಕರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮನಿಯಮಿತ ಅಧ್ಯಕ್ಷ ಕೆ.ವಿ.ನಾಗರಾಜ್, ಜಿಪಂ ಸಿಇಒ ರೇವಣಪ್ಪ, ಅಪರ ಜಿಲ್ಲಾಧಿಕಾರಿ ವಿಜಯಾ, ಉಪವಿಭಾಗಾಧಿಕಾರಿ ತೇಜಸ್‌ಕುಮಾರ್, ಪುರಸಭಾ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ, ತಹಶೀಲ್ದಾರ್ ಶಿವರಾಜ್, ತಾಪಂ ಇಒ ಎಚ್.ಡಿ. ವಸಂತ್ ಕುಮಾರ್, ತಾಲೂಕು ತೋಟಗಾರಿಕಾ ಇಲಾಖೆಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ರವಿಕುಮಾರ್, ಜಿಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್, ಗ್ರಾಪಂ ಅಧ್ಯಕ್ಷ ಹುರುಳುಗುರ್ಕಿ ಶ್ರೀನಿವಾಸ್, ಪ್ರಗತಿಪರ ರೈತ ಜಯರಾಮಯ್ಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.
ರೈತರ ಆದಾಯ ಹೆಚ್ಚಳಕ್ಕೆ ಸಹಕಾರಿ: ಮಾವನ್ನು ನೈಸರ್ಗಿಕವಾಗಿ ಮಾಗಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ರೈತರು ಹಲಸುಮತ್ತು ಮಾವನ್ನು ತಂದು ವ್ಯಾಪಾರ ಮಾಡುತ್ತಿದ್ದಾರೆ. ವಿವಿಧ ಕಡೆಗಳಿಂದ ರೈತರುಬಂದಿದ್ದಾರೆ. ದಳ್ಳಾಳಿಗಳ ಕಾಟ ತಪ್ಪಿಸಲು ಮಾವು ಮೇಳವನ್ನು ಮಾಡಲಾಗಿದೆ. ರೈತರಆದಾಯ ಹೆಚ್ಚಳವಾಗಲು ಮಾವು ಮೇಳ ಸಹಕಾರಿಯಾಗಿದೆ. ರೈತರಿಗೆ ಹೆಚ್ಚಿನಅನುಕೂಲವಾಗುವ ರೀತಿಯಲ್ಲಿ ದಳ್ಳಾಳಿಗಳಿಂದ ತಪ್ಪಿಸಲು ಇದೊಂದು ಉತ್ತಮ ಕಾರ್ಯವಾಗಿದೆ. ಜನರ ಸಹಕಾರ ಇದ್ದರೆ ಮುಂದಿನ ವರ್ಷವೂ ಇದೇ ರೀತಿ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.