ಹಲಸು: ಲಾಭದ ನಿರೀಕ್ಷೆಯಲ್ಲಿ ರೈತರು
Team Udayavani, May 16, 2023, 2:40 PM IST
ದೊಡ್ಡಬಳ್ಳಾಪುರ: ಹಲಸಿನ ಸೀಸನ್ ಆರಂಭವಾಗಿದೆ. ತಾಲೂಕಿನಲ್ಲಿ ಈ ಬಾರಿ ಉತ್ತಮ ಫಸಲು ಬರುತ್ತಿದ್ದು, ಹಲಸು ಮಾರಾಟಗಾರರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು ಎಂಬ ಮಾತಿನಂತೆ ಹಲಸು ಹಾಗೂ ಮಾವಿನ ಸೀಸನ್ ಶುರುವಾಗಿದ್ದು, ರಸ್ತೆ ಬದಿಯಲ್ಲಿ ಹಲಸು ಹಣ್ಣುಗಳ ಮಾರಾಟ ನಡೆಯುತ್ತಿದೆ. ಆದರೆ ಈ ಬಾರಿ ಮಾವು ತೀರಾ ಕಡಿಮೆಯಾಗುವ ಲಕ್ಷಣ ಗಳಿವೆ. ತಾಲೂಕಿನಲ್ಲಿ ಈ ಬಾರಿ ಮಳೆಯಾಗಿರು ವುದರಿಂದ ಹಲಸು ಇಳುವರಿಗೆ ಸಹಾಯಕವಾಗಿ ಸ್ವಾದಿಷ್ಟ ಹಣ್ಣುಗಳು ಬರತೊಡಗಿವೆ. ಆದರೆ ಇಳುವರಿ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿಲ್ಲ.
ಹಲಸು ಬೆಳೆ: ಹಲಸು ಬಡವರ ಹಣ್ಣು ಎಂದೇ ಜನಜನಿತವಾಗಿದೆ. ಮಾವು, ಬಾಳೆಗಳಂತೆ ಹಲಸನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಇಳುವರಿ ದೃಷ್ಟಿಯಿಂದ ಈ ಹಣ್ಣಿನ ಬೇಸಾಯ ಇತರ ಹಣ್ಣಿಗಿಂತ ಹೆಚ್ಚು ಲಾಭದಾಯಕ. 5 ಕೆಜಿಯಿಂದ 50 ಕೆ ಜಿಗಳವರೆಗೆ ತೂಗುವ ಇದು ಗಾತ್ರದಲ್ಲಿ ಹಣ್ಣುಗಳ ದೊಡ್ಡಣ್ಣನೂ ಹೌದು. ತಾಲೂಕಿನ ತೂಬಗೆರೆ ಹಾಗೂ ಕಸಬಾ ಹೋಬಳಿ ಗಳಲ್ಲಿ ಹೆಚ್ಚು ಹಲಸು ಬೆಳೆಯಲಾಗುತ್ತದೆ. ಉಳಿದ ಹೋಬಳಿಗಳಿಂದಲೂ ಸೀಸನ್‌ನಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಬಯಲು ಸೀಮೆಯ ತೂಬಗೆರೆ ಹೋಬಳಿಯ ಹಲಸಿನ ಹಣ್ಣುಗಳು ಹೆಚ್ಚು ಜನಪ್ರಿಯವಾಗಿವೆ. ತೂಬಗೆರೆ ಹೋಬಳಿಯ ಕಾಚಳ್ಳಿ, ಮೆಳೇಕೋಟೆ, ನೆಲ್ಲುಕುಂಟೆ ಸೇರಿ ದಂತೆ ಇಲ್ಲಿನ ಸುತ್ತ ಮುತ್ತ ನೂರಾರು ವರ್ಷಗಳ ಹಳೆಯ ಮರಗಳಿವೆ. ಬೇರೆಡೆ ಹೆಚ್ಚಿನ ಇಳುವರಿಯಾಗಿ ಹಲ ಸಿನ ಹಣ್ಣುಗಳು ಮಾರುಕಟ್ಟೆಗೆ ಬಂದು ಬೆಲೆ ಇಳಿಮುಖವಾಗಿದ್ದರೂ ಸಹ ತೂಬಗೆರೆ ಹಲಸು ಮಾತ್ರ ತನ್ನ ಬೆಲೆ ಕಳೆದು ಕೊಂಡಿಲ್ಲ ಎನ್ನುವುದು ವಿಶೇಷ. ಇಲ್ಲಿನ ಮಣ್ಣಿನ ಗುಣ ಹಲಸು ಹಣ್ಣುಗಳ ರುಚಿಗೆ ಕಾರಣವಾಗಿದ್ದು, ತೂಬಗೆರೆ ಚಂದ್ರಹಲಸು ಬಗೆ ಎಂದೇ ರಾಜ್ಯದಲ್ಲಿ ಹೆಸರು ಮಾಡಿವೆ.
ಹಲಸು ಮಾರಾಟ: ನಗರದ ಹೊರವಲಯದ ಟಿ.ಬಿ.ವೃತ್ತದ ಬಳಿಯ ಎಪಿಎಂಸಿ ಮಾರುಕಟ್ಟೆ ಮೊದಲಾದ ಕಡೆಗಳಲ್ಲಿ ಹಲಸಿನ ರಾಶಿಗಳು ಕಾಣುತ್ತಿದ್ದು, ಹಲಸಿನ ಹಣ್ಣುಗಳನ್ನು ಸ್ಥಳೀಯ ರಲ್ಲದೇ ನೆರೆಯ ಆಂಧ್ರದಿಂದ ಸಹ ವ್ಯಾಪಾರಸ್ಥರು ಖರೀದಿಸುವುದು ವಿಶೇಷವಾಗಿದೆ.
ಮುಂಚೆಯೇ ತೋಟ ಖರೀದಿ: ತಾಲೂಕಿನಲ್ಲಿ ಮಾವಿನಂತೆ ಹಲಸಿನ ತೋಪುಗಳು ಕಡಿಮೆ. ಹೀಗಾಗಿ ರೈತರು ತಮ್ಮ ತೋಟಗಳಲ್ಲಿ ಬೆಳೆ ದಿರುವ ಹತ್ತಾರು ಮರಗಳ ಹಣ್ಣುಗಳನ್ನೇ ಮಾರಾಟ ಮಾಡುತ್ತಾರೆ. ಈ ತೋಟಗಳನ್ನು ಮಾರಾಟಗಾರರು ಮುಂಚೆಯೇ ಖರೀದಿ ಸುತ್ತಾರೆ. ಈ ಬಾರಿ ಇಳುವರಿ ಪರವಾಗಿಲ್ಲ. ಕಳೆದ ವರ್ಷ ಬಿದ್ದ ಮಳೆ ಹಲಸು ಬೆಳೆಗೆ ಪೂರಕವಾಗಿದೆ. ನೀರಾವರಿ ಜಮೀನು ಹಾಗೂ ನೀರಿನ ಆಶ್ರಯವಿರುವ ತೋಟಗಳ ಬಳಿ ಹೆಚ್ಚಿನ ಇಳುವರಿ ಬಂದಿದೆ. ಹಲಸಿನ ತೋಪುಗಳು ಕಡಿಮೆ ಯಾಗುತ್ತಿದ್ದರೂ ತೋಟಗಳಲ್ಲಿ ಬೆಳಸಿರುವ ಹಲಸಿನ ಮರಗಳಲ್ಲಿ ಜನವರಿ ಫೆಬ್ರವರಿಯಲ್ಲಿಯೇ ವ್ಯಾಪಾರ ಮಾಡಿ, ಏಪ್ರಿಲ್ ತಿಂಗಳಿನಿಂದ ಖರೀದಿಸಿ ತಂದು ಮಾರಾಟ ಮಾಡ ಲಾಗುತ್ತದೆ. ಒಂದು ಹುಂಡಿಗೆ (ಗುಡ್ಡೆ) ಸುಮಾರು 60ರಿಂದ 70 ಕಾಯಿಗಳು ಇರುತ್ತವೆ. ಕಾಯಿಗಳ ಗಾತ್ರದ ಮೇಲೆ ಹುಂಡಿಗೆ ಮೂರು ಸಾವಿರದಿಂದ 5 ಸಾವಿರದವರೆಗೆ ಬೆಲೆ ಇರುತ್ತದೆ.
100 ರಿಂದ 150ರೂ ಹಣ್ಣು ಮಾರಾಟ: ದೊಡ್ಡ ಗಾತ್ರದ ಹಲಸಿನ ಹಣ್ಣುಗಳು 100 ರಿಂದ 150 ರೂಗಳವರೆಗೆ ಮಾರಾಟವಾಗುತ್ತಿವೆ. ಹಲಸಿನ ಸೀಸನ್ ಅಂಗವಾಗಿ ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿರುವ ಹಲಸಿನ ತಳಿಗಳಲ್ಲಿ ಹಳದಿ ಬಣ್ಣದ ತೊಳೆಯ ಹಲಸು, ಕೆಂಪುಬಣ್ಣದ ತೊಳೆಯಹೆಬ್ಬಲಸು, ಬೇರು ಹಲಸು ಮೊದಲಾಗಿ ನಾನಾ ವಿಧದ ಹಲಸಿನ ಮಾರಾಟ ನಡೆಯುತ್ತಿದೆ. ಇತರ ಹಲಸಿನ ಹಣ್ಣುಗಳು ಗಾತ್ರ, ಹಣ್ಣಿನ ತಳಿ, ವೈವಿದ್ಯತೆಗಳಿಗನುಗುಣವಾಗಿ 50 ರೂಗಳಿಂದ 150 ರೂಗಳವರೆಗೆ ಮಾರಾಟವಾಗುತ್ತಿವೆ. ಗುಡ್ಡೆ ಹಲಸು 4ರಿಂದ 5 ಸಾವಿರದವರೆಗೆ ಮಾರಾಟವಾಗುತ್ತಿವೆ.
-ಡಿ.ಶ್ರೀಕಾಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.