ವಿಜೃಂಭಣೆಯ ಕಡಲೆಕಾಯಿ ಪರಿಷೆ


Team Udayavani, Nov 22, 2022, 2:42 PM IST

tdy-6

ದೇವನಹಳ್ಳಿ: ಕಡಲೇ ಕಾಯಿ ಕಡಲೇ ಕಾಯಿ ಎನ್ನುತ್ತಿ ರುವ ವ್ಯಾಪಾರದ ದೃಶ್ಯ ಪಟ್ಟಣದ ನೆಹರು ಪಾರಿವಾಳ ಗುಟ್ಟದ ಇತಿಹಾಸ ಪ್ರಸಿದ್ಧ ಕಾರ್ತಿಕ ಸೋಮವಾರದ ಪ್ರಯುಕ್ತ ಪ್ರತಿ ವರ್ಷದಂತೆ ಶ್ರೀಆಂಜನೇಯ ಸ್ವಾಮಿ ದೇವಾಲಯದ ಕಡಲೆಕಾಯಿ ಪರಿಷೆಯಲ್ಲಿ ಕಂಡುಬಂತು.

ಶ್ರೀ ಆಂಜನೇಯ ಸ್ವಾಮಿಗೆ ಕಡಲೆಕಾಯಿ, ಅರಿಶಿನ ಕುಂಕುಮ ಅಲಂಕಾರ ಮಾಡಲಾಯಿತು. ಸಹಸ್ರ ನಾಮ ಅರ್ಚನೆ ನಡೆಯಿತು. ಶ್ರೀಗಬೀರಲಿಂಗೇಶ್ವರ ಸ್ವಾಮಿ, ಭಕ್ತ ಕನಕದಾಸ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಾರ್ತಿಕ ಮಾಸ ದೀಪ ದರ್ಶನವನ್ನು ನಡೆಸಿದರು. ಕಳೆದ 2 ವರ್ಷದಿಂದ ಕೊರೊನಾದಿಂದ ಸರಳವಾಗಿ ದೇಗುಲದಲ್ಲೇ ಕಡಲೆಕಾಯಿ ಪರಿಷೆ ಮಾಡಲಾಗಿತ್ತು. ಹಲವು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಕೊರೊನಾ ಇಳಿಮುಖ ವಾಗಿರುವುದರಿಂದ ವಿಜೃಂಭಣೆಯಿಂದ ಕಡಲೆಕಾಯಿ ಪರಿಷೆ ಮಾಡಲಾಗಿತ್ತು.

ಕುಟುಂಬ ಸಮೇತ ಸ್ವಾಮಿ ದರ್ಶನ: ಬಿಸಿ-ಬಿಸಿ ಕಡಲೆಕಾಯಿಯನ್ನು ಪಟ್ಟಣದ ನಾಗರೀಕರು ಗುಂಪುಗುಂಪಾಗಿ ಸೇರಿ ಕಡಲೆ ಕಾಯಿಯ ರುಚಿಯನ್ನು ಸವಿದು, ಸಂತೋಷದಿಂದ ಕುಟುಂಬ ಸಮೇತರಾಗಿ ಸ್ವಾಮಿಯ ದರ್ಶನ ಪಡೆದರು. ವ್ಯಾಪಾರಸ್ಥರು ರಾಶಿ ರಾಶಿ ಕಡಲೆಕಾಯಿ ಹಾಕಿ ಮಾರಿದರು. ಒಂದು ಕೆ.ಜಿ ಕಡಲೆಕಾಯಿಗೆ 100 ರೂ.ಗಳಂತೆ ವಿವಿಧ ರೀತಿಯ ಕಡಲೆಕಾಯಿಗಳ ಮಾರಾಟ ಮಾಡಿದರು. ಉರಿದ ಕಡಲೆ ಕಾಯಿಗೆ ಒಂದು ಸೇರಿಗೆ 25 ರೂ.ರಂತೆ ಮಾರಾಟ ಮಾಡುತ್ತಿದ್ದರು. ಉರಿದ ಕಡಲೆಕಾಯಿ ಕೆ.ಜಿಗೆ 150ರಂತೆ ಮಾರಾಟವಾಗುತ್ತಿತ್ತು. ವ್ಯಾಪಾರಿಗಳು ಕಡಲೆಕಾಯಿ ಕಡಲೆಕಾಯಿ ಎಂದು ಕೂಗಿ ಭಕ್ತರನ್ನು ಅಕರ್ಷಿಸಿದರು. ಪಟ್ಟಣದ ಸಾವಿರಾರು ಜನರು ಶ್ರೀಆಂಜನೇಯ ಸ್ವಾಮಿ ದರ್ಶನ ಪಡೆದರು.

ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳು: ಪ್ರತಿ ವರ್ಷ ದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ನಡೆಯಿತು. ಉತ್ತಮ ಮಳೆಯಾಗಿರುವುದರಿಂದ ಕಡಲೆಕಾಯಿ ಬೆಳೆಹಾನಿ ಹೆಚ್ಚಾಗಿದೆ. ಕಡಲೆಕಾಯಿ ಸಮ ರ್ಪಕವಾಗಿ ಬಂದಿಲ್ಲ. ಗಟ್ಟಿ ಕಡಲೆಕಾಯಿ ಹುಡುಕುವ ಪರಿಸ್ಥಿತಿ ಉಂಟಾಗಿತ್ತು. ವ್ಯಾಪಾರಸ್ಥರ ಮುಗದಲ್ಲಿ ಮಂದಹಾಸ ಮೂಡಿತ್ತು. ಬಹುಮಾನ ವಿತರಣೆ: 10ನೇ ತರಗತಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹು ಮಾನ ವಿತರಿಸಲಾಯಿತು. ಪ್ರೌ

ಢಶಾಲಾ ವಿದ್ಯಾ ರ್ಥಿಗಳಿಗೆ ಕಬಡ್ಡಿ ಪಂದ್ಯಾವಳಿ, 100 ಮೀಟರ್‌ ಓಟದ ಸ್ಪರ್ಧೆ ನಡೆಯಿತು. ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಯಿತು. ಕಡಲೆಕಾಯಿ ಪರಿಷೆ ಅಂಗವಾಗಿ ಬರುವ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಕಡಲೆಕಾಯಿ ಪ್ರಸಾದವನ್ನು ನೀಡಲಾಯಿತು. ದೇಗುಲದ ಪಕ್ಕದಲ್ಲಿ ನಡೆದ ಭಜನೆಯಲ್ಲಿ ಮಕ್ಕಳು, ದೊಡ್ಡವರು ಪಾಲ್ಗೊಂಡು ಶ್ರೀರಾಮ ಸ್ಮರಣೆ ಮಾಡಿದರು.

ಪೂಜಾ ಕಾರ್ಯಕ್ರಮದಲ್ಲಿ ಜೈ ಮಾರುತಿ ಭಕ್ತ ಮಂಡಳಿ ಗೌರವಾಧ್ಯಕ್ಷ ಕೆ.ಮೋಟಪ್ಪ, ಅಧ್ಯಕ್ಷ ಶಿವನಾಪುರದ ಎಸ್‌.ಸಿ.ರಮೇಶ್‌, ಉಪಾಧ್ಯಕ್ಷ ಬಿ.ಕೆ. ಶಿವಪ್ಪ, ಎಸ್‌.ಆರ್‌. ಮುನಿರಾಜು, ಕಾರ್ಯಾಧ್ಯಕ್ಷ ಸತ್ಯನಾರಾಯಣಚಾರ್‌, ಪ್ರಧಾನ ಕಾರ್ಯದರ್ಶಿ ಮಂಜುನಾಥ್‌, ಖಜಾಂಚಿ ಎನ್‌.ಶಶಿಧರ್‌ ಹಾಗೂ ಭಕ್ತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.

ನಗರ ಹಾಗೂ ಸುತ್ತಮುತ್ತಲಿನ ಜನರು ಹೆಚ್ಚು ಬರುವುದರಿಂದ ವ್ಯಾಪಾರ ಚೆನ್ನಾಗಿದೆ. ಆಂಜನೇಯ ಸ್ವಾಮಿ ಭಕ್ತ ಮಂಡಳಿ ಅವರು ಜಾಗ ಅಭಿವೃದ್ಧಿಪಡಿಸಿ, ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕಡಲೆಕಾಯಿ ಹೆಚ್ಚು ಬೆಲೆಯಾದರೂ ಗ್ರಾಹಕರು ಖರೀದಿಸುತ್ತಾರೆ. ಕೆ.ಜಿಗೆ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. – ಗೋಪಾಲ್‌, ವ್ಯಾಪಾರಿ ದೇವಾಲಯ ಸಮಿತಿ

ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಇಲ್ಲಿ ಕಡಲೆಕಾಯಿ ಸವಿಯಲು ಜನರು ಬರುತ್ತಾರೆ. ಆಂಜನೇಯ ಸ್ವಾಮಿ, ಗವಿ ವೀರಭದ್ರಸ್ವಾಮಿ, ಭೀರಲಿಂಗೇಶ್ವರ ಸ್ವಾಮಿ, ಗಣಪತಿ ಸೇರಿದಂತೆ ವಿವಿಧ ದೇಗುಲಗಳಿವೆ. ಈ ಗುಟ್ಟವು ಪ್ರಾಕೃತಿಕವಾಗಿಯೂ ಗಮನ ಸೆಳೆಯುತ್ತಿದೆ. ಪ್ರಶಾಂತ ವಾತಾವರಣ ಹೊಂದಿದೆ. – ಅನುರಾಧ, ಭಕ್ತೆ

ಹಿರಿಯರು ಕಡಲೆಕಾಯಿ ಪರಿಷೆ ಪ್ರಾರಂಭಿಸಿದ್ದರು. ಹಿರಿಯರ ಮಾರ್ಗದರ್ಶನದಂತೆ ಕಡಲೆಕಾಯಿ ಪರಿಷೆ ಮುಂದುವರಿಸಿಕೊಂಡು ಹೋಗಿದ್ದೇವೆ. ಪ್ರತಿ ವರ್ಷವೂ ಸಾವಿರಾರು ಜನರು ಆಂಜನೇಯ ಸ್ವಾಮಿ ದೇವಾಲಯಕ್ಕೆ ಬಂದು ಸ್ವಾಮಿ ದರ್ಶನ ಮಾಡುತ್ತಿದ್ದಾರೆ. – ಶಿವನಪುರ ಎಸ್‌.ಸಿ.ರಮೇಶ್‌, ಅಧ್ಯಕ್ಷ, ಜೈ ಮಾರುತಿ ಭಕ್ತ ಮಂಡಳಿ ಸೇವಾ ಸಮಿತಿ

ಟಾಪ್ ನ್ಯೂಸ್

Singam Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singam Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

22-bantwala-5

Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ

7

BBK11: ತಾಯಿಯನ್ನು ನೆನೆದು ಬಿಗ್‌ ಬಾಸ್‌ ವೇದಿಕೆಯಲ್ಲೇ ಕಣ್ಣೀರಿಟ್ಟ ಕಿಚ್ಚ ಸುದೀಪ್

21-ptr

Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!

20-kadaba

ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

25-kota

Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ

Singam Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singam Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

23-balindra

Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.