kannada rajyotsava: ಅನ್ಯ ಭಾಷೆ ಅಕ್ಷರಕ್ಕೆ ಕರವೇಯಿಂದ ಕಪ್ಪು ಮಸಿ
Team Udayavani, Nov 2, 2023, 10:23 AM IST
ನೆಲಮಂಗಲ: ನಗರದ ಮುಖ್ಯರಸ್ತೆಗಳು ಪೇಟೆಬೀದಿ ಸೇರಿವಿವಿಧ ಭಾಗಗಳಲ್ಲಿ ಮೆರವಣಿಗೆ ಮಾಡಲಾದ ಭುವನೇಶ್ವರಿ ದೇವಿಯ ಬೆಳ್ಳಿ ರಥಕ್ಕೆ ಶ್ರೀ ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ ಚಾಲನೆ ನೀಡಿದರು.
ಶಿವರಾಮೇಗೌಡ ಕರವೇ ತಾಲೂಕು ಅಧ್ಯಕ್ಷ ಸುರೇಶ್ ಮಾತನಾಡಿ, ನಮ್ಮ ನಾಡಿನಲ್ಲಿ ಜೀವನ ಮಾಡುವ ಅನ್ಯ ಭಾಷೆ ಜನ ನಮ್ಮ ನುಡಿಯನ್ನು ಕಲಿಯದೇ ನಮ್ಮ ಕನ್ನಡದ ಅಳಿವಿಗೆ ಕಾರಣವಾಗುತ್ತಿದ್ದಾರೆ. ಸರ್ಕಾರಗಳು, ಹಿಂದಿ ಹೇರಿಕೆ ಮಾಡಿ ಕನ್ನಡವನ್ನು ನಶಿಸುವಂತೆ ಮಾಡುತ್ತಿದ್ದಾರೆ. ಅಕ್ಕಪಕ್ಕದ ರಾಜ್ಯದ ಭಾಷಿಕರು ಕರುನಾಡಿನಲ್ಲಿ ಹೆಚ್ಚಾಗಿ ಕನ್ನಡ ಮರೆಯುತ್ತಿದ್ದಾರೆ. ಆದ್ದರಿಂದ ಕನ್ನಡ ರಾಜ್ಯೋತ್ಸವದ ದಿನ ಹಿಂದಿ ಸೇರಿದಂತೆ ಕನ್ನಡ ನಶಿಸಲು ಕಾರಣವಾಗುತ್ತಿರುವ ಭಾಷೆಗಳ ಅಕ್ಷರಕ್ಕೆ ಕಪ್ಪು ಮಸಿ ಬಳಿದು ಎಚ್ಚರಿಕೆ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ತಿಳಿಸಿದರು.
ಬೈಕ್ ರ್ಯಾಲಿ: ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದ ಕವಾಡಿ ಮಠದಿಂದ ಭುವನೇಶ್ವರಿ ದೇವಿಯ ವಿಗ್ರಹವನ್ನು ಬೆಳ್ಳಿ ರಥದ ಮೂಲಕ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಬೈಕ್‌ಗಳಿಗೆ ಕನ್ನಡ ಧ್ವಜ ಕಟ್ಟಿ ರ್ಯಾಲಿ ಮಾಡಿದರು.
ಇನ್ಸ್‌ಪೆಕ್ಟರ್ ಶಶಿಧರ್, ಕರವೇ ಗೌರವಾಧ್ಯಕ್ಷ ವಕೀಲ ರಘುನಾಥ್, ಸಮರ ಸೇನೆ ತಾಲೂಕು ಅಧ್ಯಕ್ಷ ಪುಟ್ಟಾಂಜ ನೇಯ, ಕಾರ್ಮಿಕ ಘಟಕದ ಅಧ್ಯಕ್ಷ ಉಮೇಶ್, ರಾಜ್ಯ ಒಕ್ಕಲಿಗರ ಒಕ್ಕೂಟದ ಮಧುಸೂಧನ್, ಚನ್ನಪ್ಪ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ರೆಹಮಾನ್, ನಗರ ಘಟಕದ ಅಧ್ಯಕ್ಷ ಯಶವಂತ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಂಜು ನಾಥ್, ತಾಲೂಕು ಉಪಾಧ್ಯಕ್ಷ ನರಸಿಂಹಮೂರ್ತಿ, ಹಿಲಿಯದ್ ಪಾಷಾ, ಆಟೋ ಗಂಗಾಧರ್, ಸಮರ ಸೇನೆ ನಗರ ಅಧ್ಯಕ್ಷ ಚಂದ್ರಜೀರಾವ್, ಕಾರ್ಮಿಕ ಘಟಕದ ತಾಲೂಕು ಉಪಾಧ್ಯಕ್ಷ ರವಿಕುಮಾರ್, ಪ್ರಕಾಶ್, ವಕೀಲ ಕನಕರಾಜು ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.