ಕರಗ ಹೊತ್ತ ಅರ್ಚಕರಿಂದ ಆದೇಶ ಉಲ್ಲಂಘನೆ
Team Udayavani, Apr 8, 2023, 1:57 PM IST
ಆನೇಕಲ್: ಈ ಬಾರಿಯ ಕರಗ ಉತ್ಸವ ಪೂಜೆಗಷ್ಟೇ ಸೀಮಿತ ಮಾಡಿಕೊಳ್ಳಬೇಕು ಎನ್ನುವ ತಹಶೀಲ್ದಾರ್ ಶಿವಪ್ಪ ಲಮಾಣಿ ಅವರ ಆದೇಶವನ್ನು ಧಿಕ್ಕರಿಸಿ, ದೇಗುಲ ಆವರಣದಲ್ಲಿ ಕರಗ ಹೊತ್ತು ಉತ್ಸವ ನಡೆಸಲಾಗಿದೆ ಎಂದು ವಹ್ನಿಕುಲ ಸೇವಾ ಸಂಘ ಹಾಗೂ ಕುಲಸ್ಥರು ಆನೇಕಲ್ ಪೊಲೀಸ್ ಠಾಣೆ ಹಾಗೂ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ಕರಗ ಆಚರಣೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಠಾಣೆಯ ಬಳಿ ನೂರಾರು ಸಂಖ್ಯೆ ಯಲ್ಲಿ ಜನ ಜಮಾಯಿಸುತ್ತಿದ್ದಂತೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಮನವಿ ಪತ್ರವನ್ನು ತಾಲೂಕು ಕಚೇರಿಯಲ್ಲಿ ಸಲ್ಲಿಸುವಂತೆ ಪೊಲೀ ಸರು ಹೇಳಿದರು. ನಂತರ ತಾಲೂಕು ಕಚೇರಿಗೆ ತೆರಳಿ ಅಲ್ಲಿಯೂ ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ಜನ ವಕೀಲರ ಸಮೇತ ತಾಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್ ಶಿವಪ್ಪ ಲಮಾಣಿ ಸ್ಥಳಕ್ಕೆ ಆಗಮಿಸಿ, ಮನವಿ ಪತ್ರ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಪ್ರತಿಭಟನೆಗೆ ಮುಂದಾದಾಗ, ಸ್ಥಳಕ್ಕೆ ಆಗಮಿಸಿದ ಆನೇಕಲ್ ಇನ್ಸ್‌ಪೆಕ್ಟರ್ ಚುನಾ ವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದ ರಿಂದ ತಾಲೂಕು ಕಚೇರಿಯಲ್ಲಿ ಯಾರೂ ಜಮಾಯಿಸುವಂತಿಲ್ಲ. ತಮ್ಮ ಮನವಿಯನ್ನು ಸ್ವೀಕಾರ ಮಾಡಿ, ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ತಿಗಳ ಸಮುದಾಯಕ್ಕೆ ಅವಮಾನ: ಈ ಸಂದರ್ಭದಲ್ಲಿ ಮಾತನಾಡಿದ ವಹ್ನಿಕುಲ ಸೇವಾ ಸಂಘದ ಅಧ್ಯಕ್ಷ ಸೋಮಶೇಖರ್, ತಹಶೀ ಲ್ದಾರ್ ಶಿವಪ್ಪ ಲಮಾಣಿಯವರು ತಾಲೂಕು ಕಚೇರಿಯಲ್ಲಿ ಎರಡು ಕಡೆಯವರ ಸಭೆ ಕರೆದು, ಈ ಬಾರಿ ಆಚರಣೆಗೆ ಅವಕಾಶ ಇಲ್ಲ. ನಿಮ್ಮ ನಡುವೆ ಒಮ್ಮತ ಬರದ ಹಿನ್ನೆಲೆ ದೇವಾ ಲಯದ ಒಳಗೆ ಪೂಜೆಗಷ್ಟೇ ಸೀಮಿತ ಆಗಿ ರಬೇಕು, ಕರಗವನ್ನು ಹೊರುವುದು, ಪಲ್ಲಕ್ಕಿ ಉತ್ಸವಕ್ಕೆ ಅವಕಾಶ ಇಲ್ಲ ಎಂದು ಸೂಚನೆ ನೀಡಿದ್ದರು. ಆದರೆ, ಇದೆಲ್ಲವನ್ನು ಧಿಕ್ಕರಿಸಿ ದೇವಾಲಯದಲ್ಲಿ ಅರ್ಚಕ ರಮೇಶ್, ಇತರರು ಕರಗ ಹೊತ್ತು ಆಚರಣೆ ಮಾಡುವ ಮೂಲಕ ತಿಂಗಳ ಜನಾಂಗಕ್ಕೆ ಅಪಮಾನ ಮಾಡಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯ ಮಾಡಿದರು.
ಆರೋಪ ಸತ್ಯಕ್ಕೆ ದೂರ: ಮೂಲ ವಹ್ನಿಕುಲ ಸೇವಾ ಸಂಘದ ಅಧ್ಯಕ್ಷ ಪಿ.ಮಂಜುನಾಥ್ ಮಾತನಾಡಿ, ಪೂಜಾ ಉತ್ಸವದ ಬಳಿಕ ಕರಗ ವನ್ನು ಹೊರುವ ಸಂಪ್ರದಾಯ ಇದೆ. ದೇವಾಲ ಯದ ಹೊರಗೆ ಹೋಗದೆ ಒಳಭಾಗದಲ್ಲೇ ಆಚರಣೆ ಮಾಡಿದ್ದೇವೆ. ಇದರಲ್ಲಿ ಯಾವುದೇ ತಪ್ಪು ಆಗಿಲ್ಲ, ರಮೇಶ್ ಕರಗ ಹೊತ್ತಿದ್ದಾರೆ ಎನ್ನುವ ಕಾರಣಕ್ಕೆ ಆರೋಪವನ್ನು ಮಾಡುತ್ತಿದ್ದು ಇದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯ ದೊರೆಸ್ವಾಮಪ್ಪ, ಯಲ್ಲಪ್ಪ, ಧರ್ಮ ರಾಜು, ಮೋಹನ್, ಸತೀಶ್, ಜಯಕುಮಾರ್, ನಾಗಮ್ಮ, ನಂದಿನಿ, ಉಷಾ, ಯಶೋದಾ, ಸುಮಿತ್ರಾ, ಲೋಕೇಶ್, ಗಿರೀಶ್, ಶಂಕರ್, ಶ್ರೀನಿವಾಸ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.