ಪರಿಸರ ಸ್ವತ್ಛವಾಗಿಟ್ಟುಕೊಳ್ಳಿ
Team Udayavani, Oct 4, 2018, 12:58 PM IST
ಆನೇಕಲ್: ಬೆಂಗಳೂರಿನಲ್ಲಿ ಒಂದು ದಿನ ಪೌರಕಾರ್ಮಿಕರು ಕಸ ತೆಗೆಯ ದಿದ್ದರೆ ಗಾರ್ಡನ್ ಸಿಟಿ ಗಾರ್ಬೇಜ್ಸಿ ಟಿ ಆಗುತ್ತದೆ. ಅಷ್ಟು ತ್ಯಾಜ್ಯವನ್ನು ನಾವು ಪ್ರತಿ ದಿನ ರಸ್ತೆಗೆ ಎಸೆಯುತ್ತಿದ್ದೇವೆ ಎಂದು ಬೆಂ.ನಗರ ಜಿಲ್ಲಾ ಅಧಿಕಾರಿ ವಿಜಯ್ ಶಂಕರ್ ಹೇಳಿದರು.
ತಾಲೂಕಿನ ಜಿಗಣಿ ನಿತ್ಯಾನಂದ ಕಾಲೇಜಿನಲ್ಲಿ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ವಿತರಣೆ ಕಾರ್ಯಕ್ರ ಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಮನೆಯನ್ನು ಸ್ವತ್ಛವಾಗಿಟ್ಟು ಕೊಳ್ಳುವ ಹಾಗೆಯೇ ಸಾರ್ವಜನಿಕ ಸ್ಥಳ
ಗಳನ್ನೂ ಸ್ವತ್ಛವಾಗಿಟ್ಟುಕೊಳ್ಳಬೇಕು. ಮಕ್ಕಳು ಚಾಕೊಲೇಟ್ ತಿಂದರೆ ಅದರ ಪೇಪರ್ ಅನ್ನು ಜೇಬಿನಲ್ಲಿಟ್ಟುಕೊಂಡು
ಕಸದ ಬುಟ್ಟಿಯಲ್ಲಿ ಹಾಕಬೇಕು ಎಂಬ ಮನವರಿಕೆಯನ್ನು ಪೋಷಕರು ಮಕ್ಕಳಿಗೆ ತಿಳಿಸಬೇಕೆಂದರು. ಸಂಸದ ಡಿ.ಕೆ.ಸುರೇಶ್, ದೇಶದ ಇತಿಹಾಸದಲ್ಲಿ ಅಧಿಕಾರಿಗಳು ಗ್ರಾಮ ವಾಸ್ತವ್ಯದಿಂದ ಅಹವಾಲು ಸ್ವೀಕರಿಸುವುದು ರಾಜ್ಯದಲ್ಲಿ ಮಾತ್ರ ಎಂದರು.
ಸಮಸ್ಯೆ ಬಗೆ ಹರಿಯಲಿ: ಕೆರೆ ಅಭಿವೃದ್ಧಿ,ಸರ್ಕಾರಿ ಭೂಮಿಯನ್ನು ಬಲಾಡ್ಯರು ಒತ್ತುವರಿ ಮಾಡಿದ್ದಾರೆ. ಗ್ರಾಮಠಾಣಾ ವಿಸ್ತರಣೆ ಆಗಬೇಕು. ಇದರಿಂದ ಈ ಭಾಗದ ಅರ್ಧ ಸಮಸ್ಯೆಗಳು ಬಗೆಹರಿಯಲಿದೆ. ಬನ್ನೇರುಘಟ್ಟ ಭಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ಕೊಡ ಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಎಂದರು.
ಶಾಸಕ ಎಂ.ಕೃಷ್ಣಪ್ಪ, ಕಂದಾಯ ನಿವೇಶನ ಈ ಹಿಂದೆ ಇರುವವರ ಹೆಸರಲ್ಲೇ ಉಳಿದುಕೊಂಡಿರುವುದರಿಂದ ಮಕ್ಕಳು
ಮೊಮ್ಮಕ್ಕಳು ಕೋರ್ಟ್ ಅಲೆದಾಡು ವಂತಾಗುತ್ತದೆ. ಕೆರೆ ಅಕ್ಕಪಕ್ಕ ಮನೆ ಕಟ್ಟಿಕೊಂಡಿರುವವರಿಗೆ ಪರ್ಯಾಯ
ವ್ಯವಸ್ಥೆ ಕಲ್ಪಿಸುವಂತೆ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು ಎಂದರು.
ಆನೇಕಲ್ ಶಾಸಕ ಬಿ.ಶಿವಣ್ಣ, ಬೆಂಗಳೂರು ನಗರ ಜಿಪಂ ಅಧ್ಯಕ್ಷ ಸಿ.ಮುನಿ ರಾಜು, ವಿಧಾನ ಪರಿಷತ್ ಸದಸ್ಯ
ಎಂ.ನಾರಾಯಣಸ್ವಾಮಿ ಮಾತನಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಬಿ.ಆರ್.ಹರೀಶ್ ನಾಯಕ್, ತಹಶೀಲ್ದಾರ್ ಮಹದೇವಯ್ಯ, ತಾಪಂ ಅಧ್ಯಕ್ಷೆ ಮುನಿರತ್ನ, ಜಿಗಣಿ ಪುರಸಭೆ ಅಧ್ಯಕ್ಷೆ ಮುನಿರತ್ನಮ್ಮ, ವಿಶೇಷ ತಹಶೀಲ್ದಾರ್ ಮಂಜುನಾಥ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.