ಕೆಂಪೇಗೌಡ ವಿಮಾನ ನಿಲ್ದಾಣ ವಾರ್ಷಿಕ ಶೇ.10 ಪ್ರಗತಿ
Team Udayavani, Feb 8, 2022, 12:42 PM IST
ದೇವನಹಳ್ಳಿ: ಭಾರತದ ವೈಮಾನಿಕ ವಲಯವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದ್ದು ಇದು 2013-14ರ ಹಣಕಾಸು ವರ್ಷದಲ್ಲಿ ಕೇವಲ 16.9 ಕೋಟಿ ಜನ ಸಂಚರಿಸಿದ್ದರೆ 2019-20ರಲ್ಲಿ 34.1 ಕೋಟಿ ಜನ ಪ್ರಯಾಣಿಸುವ ಮೂಲಕ ದ್ವಿಗುಣಗೊಂಡಿದ್ದು ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನ ನಿಲ್ದಾಣ ವಾರ್ಷಿಕ ಶೇ.10 ಪ್ರಗತಿ ಕಾಣುತ್ತಿದೆ.
ಕಳೆದ 2 ದಶಕಗಳಲ್ಲಿ ಕಡಿಮೆ ದರದ ವಿಮಾನಯಾನ ಸಂಸ್ಥೆಗಳು ಮಾರುಕಟ್ಟೆಗೆ ಪ್ರವೇಶಪಡೆದಿವೆ. ದೂರದ ನಗರಗಳಿಗೆ ವಿಮಾನ ಸಂಪರ್ಕಮತ್ತು ಪ್ರಾದೇಶಿಕ ವೈಮಾನಿಕ ಸಂಚಾರದಲ್ಲಿಹೆಚ್ಚಳವಾಗಿದ್ದು ಭಾರತದ ವೈಮಾನಿಕ ವಲಯದಚಹರೆಯನ್ನೇ ಬದಲಾಯಿಸಿದೆ. ಈ ಪ್ರಕ್ರಿಯೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ ದಕ್ಷಿಣ ಭಾರತದ ಅತ್ಯಂತ ಆದ್ಯತೆಯ ಟ್ರಾನ್ಸ್‌ಫರ್ ಹಬ್ ಆಗಿ ಹೊರಹೊಮ್ಮಿದೆ.
ಪ್ರಯಾಣಿಕರು ಹೆಚ್ಚಳ: ಪ್ರಸ್ತುತ ಬೆಂಗಳೂರು ವಿಮಾನ ನಿಲ್ದಾಣ 74 ಸ್ಥಳೀಯ ತಾಣಗಳಿಗೆ(ಪ್ರಸ್ತುತ ವರ್ಷ 2021) ವಿಮಾನ ಸೇವೆ ಒದಗಿಸುತ್ತಿದೆ. ಇದು ಕೋವಿಡ್ ಪೂರ್ವದಲ್ಲಿ ಕೇವಲ 54 ಮಾರ್ಗ ಹೊಂದಿತ್ತು. ದಕ್ಷಿಣ ಭಾರತದ ವಿಮಾನ ನಿಲ್ದಾಣಗಳಲ್ಲಿ ಅತ್ಯಂತ ಹೆಚ್ಚಿನ ವಿಮಾನಗಳ ಹಾರಾಟ ನಡೆಸುತ್ತಿದೆ. ಇದರಲ್ಲಿ ಹೆಚ್ಚು ಮಹಾನಗರಗಳಲ್ಲದ ನಗರ ಹೊಂದಿದೆ. ಮಹಾನಗರಗಳಲ್ಲದ ನಗರಗಳಲ್ಲಿ ಈ ಹಿಂದೆ ಶೇ.58ರಷ್ಟಿದ್ದು 2021ರಲ್ಲಿ ಶೇ.63ಕ್ಕೆ ಹೆಚ್ಚಾಗಿದೆ. ಅಲ್ಲದೆ 2021ರ 1ನೇತ್ರೈಮಾಸಿಕದಿಂದ 4ನೇ ತ್ರೈಮಾಸಿಕದ ನಡುವೆ ಮಹಾನಗರಗಳಲ್ಲದ ಮಾರ್ಗಗಳಿಗೆ ಟ್ರಾಫಿಕ್ ಶೇ.27 ಬೇಡಿಕೆ ಹೆಚ್ಚಾಗಿದೆ.
ಹಲವು ರಾಜ್ಯಗಳ ಪ್ರಯಾಣಿಕರು: 2021ರ ವರ್ಷದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ಸುಮಾರು ಶೇ.19 ವಿಮಾನಗಳ ಸಂಚಾರ ಹೊಂದಿದ್ದು ಕೋವಿಡ್ ಪೂರ್ವದಲ್ಲಿ ಕೇವಲ ಶೇ.10ರಷ್ಟಿತ್ತು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಚೆನ್ನೈ, ಕೊಚ್ಚಿ, ಹೈದರಾಬಾದ್ ಮತ್ತು ಗೋವಾಗಳಿಂದ ಹೆಚ್ಚು ಪ್ರಯಾಣಿಕರು ವಿಮಾನಯಾನ ಮಾಡುತ್ತಿದ್ದಾರೆ.
ಮಹಾನಗರಗಳಲ್ಲದ ನಗರಗಳಿಗೆ ವಿಮಾನಗಳು ಹೆಚ್ಚಾಗಿರುವುದೇ ಅಲ್ಲದೆ ಬೆಂಗಳೂರಿನ ಭೌಗೋಳಿಕ ಸ್ಥಾನ ಮತ್ತು ಕರ್ನಾಟಕ ರಾಜ್ಯದಲ್ಲಿ ತೀವ್ರವಾಗಿ ಮುಂದುವರಿಯುತ್ತಿರುವ ಅರ್ಥವ್ಯವಸ್ಥೆಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಹಾಗೂ ಮಧ್ಯ ಭಾರತಕ್ಕೆ ಹೆಬ್ಟಾಗಿಲಾಗಿಸಿದೆ. ಬೆಂಗಳೂರು ನಿಲ್ದಾಣದಿಂದ 75 ನಿಮಿಷಗಳಲ್ಲಿ ಭಾರತದ 23 ನಗರ ತಲುಪಬಹುದಾಗಿದೆ.
ಅನುಕೂಲ: ಮಹಾನಗರಗಳಲ್ಲದ ನಗರಗಳಿಗೆ ಹೆಚ್ಚು ವಿಮಾನ ಸಂಚರಿಸುತ್ತಿರುವುದರಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಹೆಚ್ಚಾಗಿದೆ. ಹೆಚ್ಚಿನ ವೈಮಾನಿಕ ಸಂಚಾರ ಮತ್ತು ಇತರೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೂ ಅನುಕೂಲ ಕಲ್ಪಿಸಿದೆ. ಇದು25.6 ಕೋಟಿ ಜನರಿಗೆ(ಭಾರತ 1/5ರಷ್ಟು) ಜನರಿಗೆ ವಿಮಾನಯಾನ ಪೂರೈಸುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಅತ್ಯುತ್ತಮ ಪ್ರಯಾಣದಅನುಭವ ನೀಡಲು ವಿಶ್ವ ಮಟ್ಟದ ಮೂಲಸೌಕರ್ಯ, ಸೌಲಭ್ಯ ಹೊಂದಿದೆ.
ಹೊಸದಾಗಿ ರೂಪಿಸಿದ ವಿಶ್ರಾಂತಿ ಕೋಣೆ ಮತ್ತು ತಾತ್ಕಾಲಿಕ ತಂಗುವಿಕೆ ಹೋಟೆಲ್‌ಗಳಲ್ಲಿಅತ್ಯುತ್ತಮ ಸೇವೆ, ಆತಿಥ್ಯ ಒಳಗೊಂಡಿವೆ.ತಡೆರಹಿತ ಚಾಲನೆ ಮತ್ತು ಪ್ರಯಾಣಿಕರ ಸರಾಗ ವರ್ಗಾವಣೆಗೆ ಹೆಚ್ಚುವರಿ ಮಾರ್ಗ ಸೃಷ್ಟಿಸಲಾಗಿದೆ. ಪ್ರಾರಂಭವಾಗಲಿರುವ ಎರಡನೇ ನಿಲ್ದಾಣ ಬೆಂಗಳೂರು ವಿಮಾನ ನಿಲ್ದಾಣವನ್ನು ಭಾರತಕ್ಕೆ ಹೊಸ ಹೆಬ್ಟಾಗಿಲು ಎಂಬಂತೆ ಅಭಿವೃದ್ಧಿ ಪಡಿಸುವ ನಿರೀಕ್ಷೆ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.