ಪ್ರಯಾಣಿಕರಿಗೆ ನ್ಯೂ ಇಯರ್ ‌ಕೊಡುಗೆ

ಕೆಂಪೇಗೌಡ ವಿಮಾನ ನಿಲ್ದಾ ಣದ ದಕ್ಷಿಣ ರನ್‌ವೇಯನ್ನು ಕ್ಯಾಟ್‌MMM1 ಹಂತಕ್ಕೆ ಮೇಲ್ದರ್ಜೆಗೆ ಏರಿಕೆ

Team Udayavani, Jan 1, 2021, 4:14 PM IST

ಪ್ರಯಾಣಿಕರಿಗೆ ನ್ಯೂ ಇಯರ್ ‌ಕೊಡುಗೆ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು(ಕೆಐಎಬಿ/ಬೆಂಗಳೂರು ವಿಮಾನನಿಲ್ದಾಣ)ರಿನ ದಕ್ಷಿಣ ರನ್‌ವೇ(ನೂತನ ರನ್‌ವೇ)ಈಗಕ್ಯಾಟ್‌-3ಬಿ ನಿಯಮಗಳಿಗೆ ತಕ್ಕಂತೆ ಸಜ್ಜಾಗಿದೆ. ಡಿ.31ರಬೆಳಗಿನ 5.30 ಗಂಟೆಯಿಂದ ಇದು ಜಾರಿಗೆ ಬಂದಿದೆ ಎಂದು ಬಿಐಎಎಲ್‌ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಮಾನಗಳು ಇಳಿಯಲು ಉನ್ನತ ಮಟ್ಟದ ವ್ಯವಸ್ಥೆ(ಐ.ಎಲ್‌.ಎಸ್‌.), ವಿಮಾನದ ರನ್‌ವೇ ಮತ್ತು ಸುತ್ತಲಿನ ಪ್ರದೇಶದಲ್ಲಿ ಏರ್ ಫೀಲ್ಡ್‌ ಗ್ರೌಂಡ್‌ ಲೈಟ್‌ (ಎ.ಜಿ.ಎಲ್‌.) ಬೆಳಕಿನ ವ್ಯವಸ್ಥೆ, ಇದಲ್ಲದೆ ಟ್ರ್ಯಾನ್ಸ್‌ ಮಿಸ್ಸೋ ಮೀಟರ್‌, ಸ್ವಯಂಚಾಲಿತ ಹವಾಮಾನ ನಿರೀಕ್ಷಣಾಲಯ(ಎ.ಡಬ್ಲ್ಯೂ.ಒ.ಎಸ್‌.), ಮೇಲ್ಮೆ„ಚಲನೆಯ ರ್ಯಾಡಾರ್‌(ಎಸ್‌.ಎಂ.ಆರ್‌.) ಮತ್ತು ಇತರೆ ಮಾರ್ಗ ಸೂಚಿಸುವ ನೆರವು ಒಳಗೊಂಡ ವ್ಯವಸ್ಥೆಯನ್ನು ಸ್ಥಾಪಿಸುವುದರ ಜೊತೆಗೆ ಪ್ರತಿಕೂಲ ಹವಾಮಾನ ಮತ್ತು ಮಂಜು ಮುಸುಕಿದ ಸ್ಥಿತಿಗಳಿಂದ ವಿಮಾನದ ಚಲನೆಯ ಮೇಲೆ ಈಗ ಕನಿಷ್ಠ ಪರಿಣಾಮ ಉಂಟಾಗಲಿದೆ.

ಈ ಮೇಲ್ದರ್ಜೇಗೇರಿಸುವ ರನ್‌ವೇ ವ್ಯವಸ್ಥೆಯೊಂದಿಗೆ 50 ಮೀಟರ್‌ಗಳಷ್ಟು ಕಡಿಮೆ ರನ್‌ವೇ ವಿಷುವಲ್‌ ರೇಂಜ್‌ನಲ್ಲಿ ವಿಮಾನ ಇಳಿಯಲು ಮತ್ತು 125 ಮೀಟರ್‌ ರನ್‌ವೇ ವಿಷುವಲ್‌ ರೇಂಜ್‌ನಲ್ಲಿ ವಿಮಾನ ಹಾರಲು ಅವಕಾಶ ಮಾಡಿಕೊಡಬಹುದಾಗಿದೆ.ಇದುವರೆಗೆ ವಿಮಾನ ಕೆಳಗಿಳಿಯಲು 550 ಮೀಟರ್‌ ಮತ್ತು ಮೇಲೆ ಹಾರಲು 300 ಮೀಟರ್‌ ವಿಷುವಲ್‌ರೇಂಜ್‌ಗೆ ಪರವಾನಗಿ ಇರುತಿತ್ತು. ಇದರೊಂದಿಗೆಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ದೇಶದಲ್ಲಿ ಕ್ಯಾಟ್‌ MMM1 ರನ್‌ವೇ ಹೊಂದಿರುವ ದಕ್ಷಿಣ ಭಾರತದ ಏಕೈಕ ಹಾಗೂ ದೇಶದ 6ನೇ ವಿಮಾನ ನಿಲ್ದಾಣವಾಗಿದೆ.

ಮಂಜು ಮುಸುಕಿದ್ರೂ ವಿಮಾನ ಇಳಿಯುತ್ತೆ: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇದುವರೆಗೆ ಮಂಜುಕವಿದ ವಾತಾವರಣದಿಂದ ವಿಮಾನ ಹಾರಾಟ ಮತ್ತು ವಿಮಾನಗಳುಇಳಿಯುವುದರಲ್ಲಿ ವಿಳಂಬವಾಗು ತ್ತಿತ್ತಲ್ಲದೇ, ಅವುಗಳನ್ನು ಬೇರೆಡೆಗೆ ಕಳುಹಿಸುವ ಕ್ರಮಗಳು ನಡೆಯುತ್ತಿದ್ದವು. ಇದರಿಂದ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗುವುದಲ್ಲದೆ, ವೈಮಾನಿಕಉದ್ಯಮಕ್ಕೆ ಹಣಕಾಸು ನಷ್ಟಗಳು ಉಂಟಾಗುತ್ತಿದ್ದವು.ಭಾರತಕ್ಕೆ ನೂತನ ಪ್ರವೇಶದ್ವಾರವಾಗಿರುವುದರೊಂದಿಗೆ ಪ್ರಯಾಣಗಳಿಗೆ ಅವಕಾಶಮಾಡಿಕೊಡುವ, ಅನುಭವಗಳನ್ನು ಸೃಷ್ಟಿಸುವ, ಮತ್ತು ಜೀವನಗಳನ್ನು ಸ್ಪರ್ಷಿಸುವ ದೃಷ್ಟಿಕೋನದೊಂದಿಗೆ ವಿಮಾನ ನಿಲ್ದಾಣದಲ್ಲಿ ಪ್ರಯಾಣ ಅನುಭವವನ್ನು ಸೀಮಾತೀತ,ಆನಂದಪೂರ್ಣ ಮತ್ತು ನೆನಪಿಸಿಸಿಕೊಳ್ಳುವಂತೆಮಾಡುವ ಉದ್ದೇಶದೊಂದಿಗೆ ಅಗತ್ಯ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಪರಿಚಯಿಸುವುದನ್ನು ಬಿಐಎಎಲ್‌ ಮುಂದುವರಿಸಲಿದೆ.

ತರಬೇತಿ ಪಡೆದ ಸಿಬ್ಬಂದಿ ನೇಮಕ: ಪರೀಕ್ಷಾರ್ಥ ಹಾಗೂ ಮಾಪನಾಂಕ ನಿರ್ಣಯದ ಹಾರಾಟಗಳು ಮತ್ತು ಸಾಮಾನ್ಯ ನಾಗರಿಕ ವಿಮಾನಯಾನ ಪ್ರಾಧಿಕಾರ(ಡಿಜಿಸಿಎ)ದಿಂದ ನಿರೀಕ್ಷಣೆಗಳ ಯಶಸ್ವಿ ಮುಕ್ತಾಯದ ನಂತರ ರನ್‌ವೇ ಕಾರ್ಯಾಚರಣೆನಡೆಸಲು ನಿಯಂತ್ರಣಾ ಒಪ್ಪಿಗೆಗಳನ್ನು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಪಡೆದುಕೊಂಡಿದೆ. ಈ ಸೌಲಭ್ಯದ ಬಳಕೆಯನ್ನು ಗರಿಷ್ಠವಾಗಿಸಲು ವಿಮಾನಯಾನ ಸಂಸ್ಥೆಗಳು ಕ್ಯಾಟ್‌- ||| ಕಾರ್ಯಾಚರಣೆಗಳಿಗೆ ತರಬೇತಿ ಪಡೆದಿರುವ ಸಿಬ್ಬಂದಿಯನ್ನು ನಿಯೋಜಿಸಬೇಕು.

ಮಂಜು: ಕುರಿತ ವಿಶ್ಲೇಷಣಾ ಅಧ್ಯಯನ :

ವಿಮಾನ ನಿಲ್ದಾಣದ ಪ್ರದೇಶದಲ್ಲಿ ಹವಾಮಾನ ಸ್ಥಿತಿಗಳನ್ನು ಕುರಿತು ಸಹಭಾಗಿತ್ವದಲ್ಲಿ ಅಧ್ಯಯನ ನಡೆಸಲು ಜವಾಹರ್‌ಲಾಲ್‌ ನೆಹರು ಉನ್ನತ ವೈಜ್ಞಾನಿಕಸಂಶೋಧನಾ ಕೇಂದ್ರ(ಜೆ.ಎನ್‌.ಸಿ.ಎ.ಎಸ್‌.ಆರ್‌.)ದಜೊತೆಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವು2019ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ವಿಮಾನ ನಿಲ್ದಾಣಪ್ರದೇಶದ ಮೇಲೆ ವಿಕಿರಣಾತ್ಮಕ ಮಂಜುಕವಿಯುವುದನ್ನು ಮುಂಚಿತವಾಗಿ ತಿಳಿಸುವಸಾಮರ್ಥ್ಯವಿರುವ ಸಂಖ್ಯಾತ್ಮಕ ಅನುಕರಣಾಉಪಕರಣವನ್ನು ಅಭಿವೃದ್ಧಿ ಪಡಿಸಲು ಈ ನಾಲ್ಕು ವರ್ಷಗಳ ಅಧ್ಯಯನ ಪ್ರಸ್ತುತ ನಡೆಯುತ್ತಿದೆ.

ಉತ್ತರ ರನ್‌ವೇ ನವೀಕರಣ :

ಜೂ.22 ರಿಂದ ಕಾಯಾಚರಣೆ ನಿಲ್ಲಿಸಲಾಗಿರುವ ಉತ್ತರ ರನ್‌ವೇ ಯ ಪುನರ್‌ವಸತಿ ಕಾರ್ಯಪ್ರಗತಿಯಲ್ಲಿದೆ. ರನ್‌ವೇಗೆ ಹೊಸದಾಗಿ ಮೇಲ್ಮೈ ಹಾಸು ಹಾಕುವುದು ಜೊತೆಗೆ ಎಲ್‌ ಇಡಿ ರನ್‌ವೇ ಸೆಂಟರ್‌ಲೈಟ್‌ಗಳು ಮತ್ತು ರನ್‌ವೇ ಕೊನೆಯ ಲೈಟ್‌ಗಳನ್ನು ಅಳವಡಿಸುವುದು ನವೀಕರಣ ಕಾರ್ಯದಲ್ಲಿ ಸೇರಿವೆ. ಕಡಿಮೆ ದೃಶ್ಯ ಸಾಧ್ಯತೆಯ ಮತ್ತು ಪ್ರತಿಕೂಲಹವಾಮಾನ ಸ್ಥಿತಿಗಳಲ್ಲಿ ಕಾರ್ಯಾಚರಣೆ ನಡೆಸಲು ಅಗತ್ಯ ಸಡಿಲತೆಯನ್ನು ಈ ವಿಸ್ತರಣಾ ಕಾರ್ಯಗಳು ಸಾದರಪಡಿಸಲಿವೆ.

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.