ಕೊಯಿರ ಸರ್ಕಾರಿ ಪ್ರೌಢಶಾಲೆಗಿಲ್ಲ ಸಂರಕ್ಷಣೆ

Team Udayavani, Jul 10, 2023, 3:11 PM IST

ಕೊಯಿರ ಸರ್ಕಾರಿ ಪ್ರೌಢಶಾಲೆಗಿಲ್ಲ ಸಂರಕ್ಷಣೆ

ದೇವನಹಳ್ಳಿ: ಸರಕಾರ ಸರಕಾರಿ ಶಾಲೆಗಳ ಉಳಿವಿಗೆ ಸಾಕಷ್ಟು ಅನುದಾನದ ಜತೆಗೆ ವಿವಿಧ ಕಾರ್ಯ ಕ್ರಮಗಳನ್ನು ರೂಪಿಸುತ್ತಿವೆ. ಆದ್ರೆ, ಗ್ರಾಮೀಣ ಭಾಗ ದಲ್ಲಿರುವ ಸಾಕಷ್ಟು ಶಾಲೆಗಳು ಇಂದಿಗೂ ಅಭಿವೃದ್ಧಿಯ ರೆಕ್ಕೆ ತೆರೆಯದೆ, ನಿರ್ಜೀವ ಸ್ಥಿತಿಯಲ್ಲಿರುವುದು ನಿಜಕ್ಕೂ ಶೋಚನೀಯವಾದದ್ದು, ಇದಕ್ಕೊಂದು ಶಾಲೆ ನಿದರ್ಶವಾಗಿದೆ.

ಶಾಲೆಯ ಎಡಭಾಗದಲ್ಲಿರುವ ಕಾಂಪೌಂಡ್‌ ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಎಂ.ವೀರಪ್ಪ ಮೊಯ್ಲಿ ಅವರ ಅನುದಾನದಲ್ಲಿ ಅಭಿವೃದ್ಧಿ ಪಡಿಸ ಲಾಗಿತ್ತು. ಆದರೆ, ಮಳೆ-ಗಾಳಿಗೆ ಹಾಕಿದ್ದ ಕಾಂಪೌಂಡ್‌ ನ ಕೆಲ ಭಾಗ ಕುಸಿದು ಬಿದ್ದಿದೆ. ಇದು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದ್ದು, ಮತ್ತೂಂದೆಡೆ, ಈ ಕುಸಿದು ಬಿದ್ದಂತಹ ಕಾಂಪೌಂಡ್‌ ಮದ್ಯಪ್ರಿಯರಿಗೆ ಫೇವರೇಟ್‌ ಪ್ರವೇಶ ದ್ವಾರವಾಗಿದ್ದು, ಮಳೆ ಬಂದರೆ, ಶಾಲೆಯೇ ಅವರ ಆವರಣವಾಗುತ್ತಿದೆ. ಎಲ್ಲೆಂದರಲ್ಲಿ ಮದ್ಯದ ಬಾಟೆಲ್‌, ಪಾಕೇಟ್‌ಗಳು, ಪ್ಲಾಸ್ಟಿಕ್‌ ಲೋಟಗಳು, ಬಿಸಾಡಿರುವುದು ಕಾಣಬಹುದಾಗಿದೆ. ಇದರಿಂದ ದೂರದ 5-6 ಕಿಮೀನಿಂದ ಶಾಲೆಗೆ ಬರುವ ವಿದ್ಯಾರ್ಥಿ ಗಳ ಮೇಲೆ ಪರಿಣಾಮ ಬೀರುವುದರ ಜತೆಗೆ, ಇಲ್ಲಿನ ಬಾಲಕಿಯರಿಗೆ ಮುಜುಗರಕ್ಕೆ ಕಾರಣವಾಗುತ್ತಿದೆ. ಒಂದು ಶಾಲೆ ಅಂದ್ರೆ, ಅಲ್ಲಿ ಸುಂದರ ವಾತಾ ವರಣ ಸೃಷ್ಠಿಯಾಗಬೇಕಿದೆ.

ಇಲ್ಲಿ ಅದರ ತದ್ವಿರುದ್ಧವಾಗಿ ವಾತಾವರಣ ಸೃಷ್ಠಿಯಾಗುತ್ತಿದೆ. ರಸ್ತೆ ಬದಿಯ ಕಾಂಪೌಂಡ್‌ ಕುಸಿದು 3 ತಿಂಗಳಾದ್ರೂ ದುರಸ್ತಿ ಭಾಗ್ಯ ಕಂಡಿಲ್ಲ. ಶಾಲಾವರಣವು ಸುಮಾರು 6ಎಕರೆಗೂ ಹೆಚ್ಚು ಇರುವುದರಿಂದ ಸಮತಟ್ಟು ಮಾಡಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಸರ ಕಾರಗಳು ಮುಂದಾಗದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದರು.

ಬಿಳಿ ಚಿನ್ನದ ನಾಡು ಕೊಯಿರ ಪ್ರಖ್ಯಾತಿ: ತಾಲೂಕಿನ ಜಿಲ್ಲಾಡಳಿತ ಭವನದ ಕೇವಲ 5-6 ಕಿಮೀ ದೂರದಲ್ಲಿ ಬಿಳಿ ಚಿನ್ನದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೊಯಿರ ಗ್ರಾಮದಲ್ಲಿನ ಸರಕಾರಿ ಪ್ರೌಢ ಶಾಲೆಯ ದುರಾವಸ್ಥೆ ಇದಾಗಿದೆ. ಇಲ್ಲಿ ಸಂರಕ್ಷಣೆ ಕೊರತೆ ಎದ್ದು ಕಾಣುತ್ತಿದ್ದು, ಸಾಕಷ್ಟು ಶಿಕ್ಷಣ ಇಲಾಖೆ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಸಮಾಜ ಸೇವಕರು ಮತ್ತು ಮಂತ್ರಿಗಳು ಸಹ ಭೇಟಿ ಕೊಟ್ಟಿರುವ ಸರಕಾರಿ ಶಾಲೆ ಇದಾಗಿದೆ. ಇಲ್ಲಿನ ವ್ಯವಸ್ಥೆ ಕಂಡರೆ, ಬೆಳಿಗ್ಗೆ ಶಾಲೆಗೆ ಹೋಗುವ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದರ್ಶನವಾಗುವುದು ಮದ್ಯದ ಬಾಟೆಲ್‌ಗ‌ಳು. ಒಂದು ಕಡೆ ಸ್ವತ್ಛಗೊಳಿಸಿದರೂ ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ಮತ್ತೇ ಅದೇ ಕೆಲಸ. ಈ ಬಗ್ಗೆ ಹಲ ವಾರು ಬಾರಿ ಶಿಕ್ಷಣ ಇಲಾಖೆ ಗಮನಕ್ಕೂ ಸಹ ತರಲಾಗಿದ್ದರೂ ಸಹ ಭದ್ರತೆ ಮತ್ತು ಸಂರಕ್ಷಣೆ ಗಾಳಿ ಮಾತಿಗೆ ಸಮನಾಗಿಬಿಟ್ಟಿದೆ.

ಶಾಲೆಗೆ ಪೂರ್ಣ ಪ್ರಮಾಣದಲ್ಲಿ ಕಾಂಪೌಂಡ್‌ ಮಾಡಿರುವುದಿಲ್ಲ. ದನಕರುಗಳು, ಪೋಲಿ ಪುಂಡರು ಶಾಲೆ ಯೊಳಗೆ ನುಗ್ಗುತ್ತಿದ್ದಾರೆ. 120 ವಿದ್ಯಾರ್ಥಿ ಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಅಕ್ಕಪಕ್ಕದ ಗ್ರಾಮಗಳಿಂದ ಮಕ್ಕಳು ಶಾಲೆಗೆ ಬರುತ್ತಾರೆ. ಕಾಂಪೌಂಡ್‌ ಇಲ್ಲದಿರು ವುದರಿಂದ ಸಂಜೆ ಹೊತ್ತಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಕಡಿ ವಾಣ ಹಾಕಬೇಕಿದೆ. ಇಲಾಖೆ ಗಮನಕ್ಕೆ ತರಲಾಗಿದೆ. ಶಾಲಾ ಪ್ರದೇಶ ಅಭಿವೃದ್ಧಿಗೆ ಬೃಹತ್‌ ಯೋಜನೆ ಆಗಿರುವುದರಿಂದ ದಾನಿಗಳು ಮುಂದಾಗುತ್ತಿಲ್ಲ. ● ಶಿವಶಂಕರ್‌, ಮುಖ್ಯ ಶಿಕ್ಷಕ, ಕೊಯಿರ ಪ್ರೌಢ ಶಾಲೆ

ಮಳೆ ಬಂದಾಗ ಕುಸಿದಿರುವ ಕಾಂಪೌಂಡ್‌ ಇದುವರೆಗೂ ರೆಡಿ ಮಾಡಿಲ್ಲ. ಕುಡುಕರು ಸಹ ಆಗಾಗ್ಗೆ ಶಾಲೆ ಯೊಳಗೆ ನುಗ್ಗುತ್ತಿದ್ದು, ಶಿಕ್ಷಕರು ಸಾಕಷ್ಟು ಬಾರಿ ಓಡಿಸಿದ್ದಾರೆ. ಶಾಲೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚು ಓದುತ್ತಿದ್ದಾರೆ. ಸುರಕ್ಷತೆ ಬೇಕಾಗಿದೆ. ಶಾಲೆಯ ಕಟ್ಟಡವೊಂದು ಅಭಿವೃದ್ಧಿಯಾದರೆ ಸಾಲದು, ಉತ್ತಮ ಆಟದ ಮೈದಾನ, ಕಾಂಪೌಂಡ್‌ ವ್ಯವಸ್ಥೆ ಕಲ್ಪಿಸಿಕೊಡಬೇಕು. ● ಮಧು, ವಿದ್ಯಾರ್ಥಿನಿ, 9ನೇ ತರಗತಿ

ಟಾಪ್ ನ್ಯೂಸ್

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.