ರಾಜಕೀಯ ಲಾಭಕ್ಕೆ ಗೋಹತ್ಯೆ ನಿಷೇಧ


Team Udayavani, Jan 29, 2021, 7:21 PM IST

krishnabairegowda speach

ದೊಡ್ಡಬಳ್ಳಾಪುರ: ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವುದು ರಾಜ ಕೀಯ ಲಾಭಕ್ಕಾಗಿ. ಇದರಿಂದ ರೈತರಿಗೆ ನಷ್ಟವೇ ಹೊರೆತು ಲಾಭವಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಕೃಷ್ಣಭೈರೇಗೌಡ ಹೇಳಿದರು.

ತಾಲೂಕಿನ ಮೆಣಸಿ ಕಾಲೋನಿಯಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಹಾಲು ಉತ್ಪಾದಕ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದರು. ದೇಶಾದ್ಯಂತ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.

ಕನಿಷ್ಠ ರೈತರ ಸಮಸ್ಯೆ ಕೇಳಲು ಕೂಡ ಪ್ರಧಾನಿ ನರೇಂದ್ರ ಮೋದಿಗೆ ಸೌಜನ್ಯವಿಲ್ಲ. ಜನರ ಹೊಟ್ಟೆ ತುಂಬು ತ್ತಿರುವುದು ಅಂಬಾನಿ, ಅದಾನಿಯಿಂದಲ್ಲ, ರೈತರು ಬೆಳೆಯುತ್ತಿರುವ ಬೆಳೆಯಿಂದ. ಪ್ರಧಾನಿ ಮೋದಿ ಮೊದಲು ರೈತರ ಸಮಸ್ಯೆ ಕೇಳಬೇಕು. ರೈತರ ಬಗ್ಗೆ, ಗೋವುಗಳ ಬಗ್ಗೆ ಕಾಳಜಿ ಇದ್ದರೆ ಪ್ರತಿ ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಗೋಶಾಲೆಗಳನ್ನು ಸರ್ಕಾರ ತೆರೆಯಲಿ. ರೈತರಿಗೆ ಬೇಡವಾದ ಜಾನುವಾರುಗಳನ್ನು ಗೋಶಾಲೆಗೆ ಬಿಡುತ್ತಾರೆ. ರೈತರು ಬಿಡುವ ಜಾನುವಾರುಗಳಿಗೆಸರ್ಕಾರವೇ ಹಣ ನೀಡಲಿ. ಈ ಮೂಲಕ ರೈತರ ನೆರವಿಗೆ ಬರಲಿ ನಾವು ಕೂಡ ಸಹಕಾರ ನೀಡು ತ್ತೇವೆ. ರೈತ ಸಮುದಾಯ ಈಗಾಗಲೇ ಐಸಿ ಯುನಲ್ಲಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ಆಶ್ಚರ್ಯವಿಲ್ಲ. ಸದ್ಯಕ್ಕೆ ಹಸುಗಳನ್ನು ಸಾಕಿ ಡೇರಿ ಗಳಿಗೆ ಹಾಲನ್ನು ಹಾಕಿ ಬಡ ರೈತರು ಜೀವನ ನಡೆಸುತ್ತಿದ್ದಾರೆ. ರೈತರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಡೇರಿಗಳ ಪರಿಸ್ಥಿತಿಯೂ ಹೇಳತೀರದಂತಾಗುತ್ತದೆ ಎಂದರು.

ಇದನ್ನೂ ಓದಿ:ಸಮಾಜ ಕಲ್ಯಾಣ ವಸತಿ ಯೋಜನೆಗೆ ಐಕಳ ಹರೀಶ್‌ ಶೆಟ್ಟಿ ಅವರಿಂದ ಶಿಲಾನ್ಯಾಸ

ಕೆಎಂಎಫ್‌ ಹಾಗೂ ಬಮೂಲ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌ ಮಾತನಾಡಿ, ಕೋವಿಡ್ ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ ಬಮೂಲ್‌ ವ್ಯಾಪ್ತಿಯಲ್ಲಿ ರೈತರಿಂದ ಖರೀದಿ ಸುವ ಹಾಲಿನ ದರವನ್ನು ಕಡಿತ ಗೊಳಿಸಲಾಗಿತ್ತು. ಇದೀಗ ಬಮೂಲ್‌ ಚೇತರಿಕೆ ಕಾಣುತ್ತಿದ್ದು ಫೆ.1 ರಿಂದ ಪ್ರತಿ ಲೀಟರ್‌ ಹಾಲಿಗೆ 2 ರೂ. ಏರಿಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಖರ್ಚು ವೆಚ್ಚಗಳನ್ನು ಸರಿದೂಗಿಸಿ ಮತ್ತಷ್ಟು ಏರಿಕೆ ಮಾಡಲಾಗುವುದು. ರೈತರು ಹೈನುಗಾರಿಕೆ ಯಲ್ಲಿ ಹೆಚ್ಚು ತೊಡಗಿಸಿಕೊಂಡರೆ ಬಮೂಲ್‌ ಅವರ ಬೆನ್ನಿಗೆ ನಿಂತಿರುತ್ತದೆ ಎಂದರು. ದೊಡ್ಡ ಬಳ್ಳಾಪುರ ಬಮೂಲ್‌ ಕಚೇರಿ ಉಪ ವ್ಯವಸ್ಥಾ ಪಕ ಗೋಪಾಲಕೃಷ್ಣ, ಇಓ ಅಶ್ವತ್ಥ್, ಪಿಎಲ್‌ಡಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಪುಟ್ಟರಾಜು, ಮುಖಂಡ ರಾಮಕೃಷ್ಣ ಮತ್ತಿತ್ತರಿದ್ದರು.

 

ಟಾಪ್ ನ್ಯೂಸ್

1-horoscope

Daily Horoscope: ಕೇಳಿದವರಿಗೆ ಮಾತ್ರ ಸಲಹೆ ನೀಡಿ, ಅನವಶ್ಯವಾದ ವಿವಾದಕ್ಕೆ ಅವಕಾಶ ಬೇಡ

Bela1

Wild Elephant: ಧರ್ಮಸ್ಥಳ, ಚಾರ್ಮಾಡಿಯಲ್ಲಿ ಕಾಡಾನೆಗಳ ಹಾವಳಿ

Kota-poojary

Social Media Fake Account: ಸಂಸದ ಕೋಟ ಶ್ರೀನಿವಾಸ ಪೂಜಾರಿ ಖಾತೆ ನಕಲಿ: ದೂರು

adike

Areca nut; ಬಳಲಿರುವ ಅಡಿಕೆಗೆ ಚೀನ ವೈರಸ್‌ ಸಿಡಿಲು!

1-kb

Land; ಬಗರ್‌ ಹುಕುಂ ಅರ್ಜಿ: ಎರಡು ತಿಂಗಳು ಗಡುವು

Kharge (2)

Karnataka Politics; ದಲಿತ ಸಿಎಂ ಚರ್ಚೆಗೆ ಮತ್ತೆ ರೆಕ್ಕೆಪುಕ್ಕ

1-vara

Dowry; ವರದಕ್ಷಿಣೆ ಕಿರುಕುಳ: ಕುಂದಾಪುರ ಮೂಲದ ಮಹಿಳಾ ಟೆಕಿ ಆತ್ಮಹ *ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

14-ragi-crop

Devanahalli: ಕೈಕೊಟ್ಟ ಮಳೆ: ಮೊಳಕೆಯಲ್ಲೇ ಒಣಗುತ್ತಿದೆ ರಾಗಿ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-horoscope

Daily Horoscope: ಕೇಳಿದವರಿಗೆ ಮಾತ್ರ ಸಲಹೆ ನೀಡಿ, ಅನವಶ್ಯವಾದ ವಿವಾದಕ್ಕೆ ಅವಕಾಶ ಬೇಡ

Bela1

Wild Elephant: ಧರ್ಮಸ್ಥಳ, ಚಾರ್ಮಾಡಿಯಲ್ಲಿ ಕಾಡಾನೆಗಳ ಹಾವಳಿ

Kota-poojary

Social Media Fake Account: ಸಂಸದ ಕೋಟ ಶ್ರೀನಿವಾಸ ಪೂಜಾರಿ ಖಾತೆ ನಕಲಿ: ದೂರು

adike

Areca nut; ಬಳಲಿರುವ ಅಡಿಕೆಗೆ ಚೀನ ವೈರಸ್‌ ಸಿಡಿಲು!

1-kb

Land; ಬಗರ್‌ ಹುಕುಂ ಅರ್ಜಿ: ಎರಡು ತಿಂಗಳು ಗಡುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.