Nadakacheri: ಕುಂದಾಣ ನಾಡಕಚೇರಿ ಉದ್ಘಾಟನೆಗೆ ಗ್ರಹಣ
Team Udayavani, Nov 8, 2023, 1:08 PM IST
ದೇವನಹಳ್ಳಿ: ಕುಂದಾಣ ನಾಡಕಚೇರಿ ನಿರ್ಮಾಣವಾಗಿ 6 ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯಕ್ಕೆ ಸಮಯ ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ಸುಮಾರು 10 ವರ್ಷಗಳಿಂದ ಶಿಥಿಲಾವಸ್ಥೆ ಯಲ್ಲಿದ್ದ ತಾಲೂಕಿನ ಕುಂದಾಣ ನಾಡ ಕಚೇರಿಗೆ ಕಳೆದ 2022ರಲ್ಲಿ ಕಟ್ಟಡದ ಕಾಯ ಕಲ್ಪ ದೊರೆತಿದೆ. ಆದರೆ, ಕಟ್ಟಡ ನಿರ್ಮಾಣ ಮಾಡಿ 6ತಿಂಗಳಾದರೂ ಉದ್ಘಾಟನೆ ವಿಳಂಬವಾಗುತ್ತಿದೆ.
ಪರಿಶೀಲನೆ: 2022ರಲ್ಲಿ ಶಾಸ ಕರಾಗಿದ್ದ ಎಲ್.ಎನ್.ನಾರಾಯಣಸ್ವಾಮಿ ನೇತೃತ್ವ ದಲ್ಲಿ ಸರ್ಕಾರದಿಂದ 18.84 ಲಕ್ಷ ರೂ. ವೆಚ್ಚ ದಲ್ಲಿ ಹಳೆಯ ನಾಡಕಚೇರಿಯನ್ನು ನೆಲ ಸಮಗೊಳಿಸಿ ನೂತನ ಸುಸಜ್ಜಿತವಾದ ಕಟ್ಟಡ ಕಟ್ಟಲಾಗಿದೆ. 4 ತಿಂಗಳ ಹಿಂದೆ ಜಿಲ್ಲಾಧಿಕಾರಿ ಗಳು ನಾಡಕಚೇರಿ ಪರಿಶೀಲನೆ ಮಾಡಿದ್ದಾರೆ. ಆದರೆ, ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಪರದಾಟ:ಕಲ್ಲಿನ ಹಳೆ ಕಟ್ಟಡದಲ್ಲಿದ್ದ ಕಚೇರಿಗಳನ್ನು ತೆರವು ಮಾಡಿದ ಬಳಿಕ ಪಶು ಆಸ್ಪತ್ರೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ 2 ಕೋಣೆಗಳಲ್ಲಿ ಉಪ ತಹಶೀಲ್ದಾರ್ ಕಚೇರಿ, ಖಾಸಗಿ ಕಟ್ಟಡದಲ್ಲಿ ಆರ್‌ಐ ಮತ್ತು ಗ್ರಾಮ ಲೆಕ್ಕಿಗರು, ಪ್ರತ್ಯೇಕವಾಗಿ ಕಾರ್ಯ ನಿರ್ವಹಿ ಸುತ್ತಿದ್ದಾರೆ. ಇದರಿಂದಾಗಿ ಜನ ಸಮರ್ಪಕ ಸೇವೆ ಪಡೆಯಲು ಪರದಾಡುತ್ತಿದ್ದಾರೆ.
ಖಾಸಗಿ ನಿವಾಸದ ಒಂದು ಕಡೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಯೂ ಇರುವುದರಿಂದ ನಾಡ ಕಚೇರಿ ಯಲ್ಲಿಯೇ ತುಳಿತವಾಗಿ ಕಂದಾಯಕ್ಕೆ ಸಂಬಂಧಿಸಿದ ಎಲ್ಲಾ ಕೆಲಸ ಒಂದೇ ಸೂರಿ ನಡಿ ದೊರೆಯಲು ನೂತನ ನಾಡಕಚೇರಿ ಸಿದ್ಧವಾಗಿದ್ದರೂ ಉದ್ಘಾಟನೆಯಾಗದೆ ಅಧಿಕಾರಿಗಳು ಕಚೇರಿ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ.
ನೂತನ ಕಚೇರಿ ಬಳಿ ಬೆಳೆದ ಗಿಡ-ಗಂಟಿ: ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ನಾಡಕಚೇರಿ ಉದ್ಘಾಟನೆ ಮಾಡಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಕೂಡಲೇ ಸಚಿವರ ಆಗಮನದ ದಿನಾಂಕ ಗೊತ್ತು ಪಡಿಸಬೇಕು. ಜಿಲ್ಲಾಧಿಕಾರಿಗಳ ಕಚೇರಿ ಯೂ ಕೂಗಳತೆ ದೂರದಲ್ಲಿದ್ದು ಕಟ್ಟಡ ಉದ್ಘಾಟನೆಯಾದರೆ ಕಂದಾಯ ಅಧಿಕಾರಿಗಳು ಕಚೇರಿಯಲ್ಲಿಯೇ ತಮ್ಮ ಕೆಲಸ ನಿರ್ವಹಿಸಲು ಸಹಾಯಕವಾಗುತ್ತದೆ. ಕುಂದಾಣ ನಾಡಕಚೇರಿ ಕಚೇರಿ ಸುತ್ತ ಗಿಡಗಂಟಿ ಬೆಳೆದು ಸ್ವಚ್ಛತೆ ಇಲ್ಲದೆ ಬಳಕೆಗೆ ಬಾರದಂತಾಗಿದೆ.
ಕುಂದಾಣ ನಾಡಕಚೇರಿಯನ್ನು 18.84 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸಂಬಂಧ ಕುಂದಾಣ ಉಪ ತಹಶೀಲ್ದಾರ್ ಅವರಿಗೆ ಕಟ್ಟಡ ಹಸ್ತಾಂತರಿಸಿದ್ದೇವೆ. ● ಮೋಹನ್ ಕುಮಾರ್, ಜಿಲ್ಲಾ ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ
6 ತಿಂಗಳು ಕಳೆದರೂ ಕುಂದಾಣ ನಾಡಕಚೇರಿ ಉದ್ಘಾಟನೆಗೊಂಡಿಲ್ಲ. ಬಡವರನ್ನು ಅನವಶ್ಯಕವಾಗಿ ತಿರುಗಾಡಿಸುವುದು ಸಾಮಾನ್ಯವಾಗಿದೆ. ಅದಕ್ಕಾಗಿ ಕೂಡಲೇ ನಾಡಕಚೇರಿ ಲೋಕಾರ್ಪಣೆ ಮಾಡಬೇಕು. ● ಪ್ರವೀಣ್ ಕುಮಾರ್, ಕುಂದಾಣ ಗ್ರಾಮಪಂಚಾಯ್ತಿ ಸದಸ್ಯ
ನೂತನ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ, ಕುಡಿವ ನೀರು, ಶೌಚಾಲಯ, ಭದ್ರತೆಗೆ ತಡೆಗೋಡೆ, ಸಾರ್ವಜನಿಕರು ಕೂರಲು ಆಸನದ ವ್ಯವಸ್ಥೆ ಮಾಡಿಲ್ಲ. ಜಿಲ್ಲಾಧಿಕಾರಿ, ಸಚಿವರ ಗಮನಕ್ಕೆ ತಂದು ಶೀಘ್ರ ಜನರ ಸೇವೆಗೆ ನೀಡಲಾಗುವುದು. ● ಶಿವರಾಜ್, ತಹಶೀಲ್ದಾರ್
ನಾಡ ಕಚೇರಿ ಉದ್ಘಾಟನೆಗೆ ಸಿದ್ಧವಾಗಿದೆ. ಸ್ಥಳಾಂತರವಾಗ ಬೇಕಷ್ಟೇ. ನಾಡಕಚೇರಿ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಸ್ಥಳಾಂತರಗೊಂಡು ಕೆಲಸ ಕಾರ್ಯ ಅಲ್ಲಿಯೇ ನಿರ್ವಹಿಸಲಾಗುತ್ತದೆ. ● ಬಿ.ಎ.ಚೈತ್ರಾ, ಉಪ ತಹಶೀಲ್ದಾರ್, ಕುಂದಾಣ
– ಎಸ್.ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.