ಜಿಲ್ಲೆಯಲ್ಲಿ ಕುಡಿವ ನೀರಿಗೆ ಹಾಹಾಕಾರ
1500 ಅಡಿ ಕೊರೆಸಿದರೂ ಸಿಗದ ನೀರು , ನೀರಿಗಾಗಿ ಟ್ಯಾಂಕ್‌ಗಳ ಮುಂದೆ ಮಹಿಳೆಯರ ಸಾಲು
Team Udayavani, Mar 8, 2021, 1:07 PM IST
ದೇವನಹಳ್ಳಿ: ಜಿಲ್ಲೆ ಬಯಲುಸೀಮೆ ಪ್ರದೇಶವಾಗಿದ್ದು, ಯಾವುದೇ ನದಿ ಮೂಲಗಳಿಲ್ಲದೆ ಜನರಿಗೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಎಷ್ಟೇ ಮಳೆ ಬಿದ್ದರೂ ಸಹ ನೀರಿನ ಸಮಸ್ಯೆ ಇದ್ದೇ ಇದೆ. ಗ್ರಾಮೀಣ ಪ್ರದೇಶದಲ್ಲಿರುವ ಕೊಳವೆಬಾವಿಗಳು ಭತ್ತಿ ಹೋಗುತ್ತಿವೆ. ನೀರಿನ ಸಮ ಸ್ಯೆಯಿರುವ ಹಳ್ಳಿಗಳಲ್ಲಿ ಟ್ಯಾಂಕರ್ ಮತ್ತು ಖಾಸಗಿ ಕೊಳವೆಬಾವಿಗಳಮೂಲಕ ನೀರನ್ನು ಪೂರೈಸುತ್ತಿದ್ದು, ಬೆಸ್ಕಾಂನಿಂದಸರಿಯಾಗಿ ವಿದ್ಯುತ್ ಸರಬರಾಜು ಆಗದ ಕಾರಣ ಹಳ್ಳಿಗಳಲ್ಲಿ ಲೋಡ್‌ಶೆಡ್ಡಿಂಗ್ ಸಮಸ್ಯೆ ಕಾಡುತ್ತಿದೆ.
ನೀರಿಗಾಗಿ ಟ್ಯಾಂಕ್‌ಗಳ ಮುಂದೆ ಮಹಿಳೆಯರ ಸಾಲು: ಗ್ರಾಮೀಣ ಭಾಗದಲ್ಲಿ ದಿನಕ್ಕೆ ಒಂದು ಬಾರಿ ಗ್ರಾಪಂ.ಗಳು ಕುಡಿಯುವ ನೀರು ಬಿಡುತ್ತಿದ್ದರೂ ಸಮರ್ಪಕ ನೀರು ಸಿಗದೆ ಮಹಿಳೆಯರು ತಮ್ಮ ಕೆಲಸಕಾರ್ಯ ಬಿಟ್ಟು ನೀರಿನ ಟ್ಯಾಂಕ್‌ಗಳ ಮುಂದೆನೀರಿಗಾಗಿ ಕಾದು ಕುಳಿತಿರುವ ಪರಿಸ್ಥಿತಿ ಉಂಟಾಗಿದೆ.ನೀರಿಗಾಗಿ 33 ಕೋಟಿ ರೂ.ಅನುದಾನಕ್ಕೆ ಬೇಡಿಕೆ:ಜಿಲ್ಲೆಯಲ್ಲಿ ಬೇಸಿಗೆಯನ್ನು ಎದುರಿಸಲು 4ತಾಲೂಕುಗಳಲ್ಲಿ ನೀರಿನ ದಾಹ ತೀರಿಸಲು ರಾಜ್ಯ ಸರ್ಕಾರಕ್ಕೆ 33 ಕೋಟಿ ರೂ.ಗಳ ಅನುದಾನ ಬಿಡುಗಡೆಯ ಪ್ರಸ್ತಾವನೆಯನ್ನು ಜಿಪಂ ಅಧ್ಯಕ್ಷ ವಿ. ಪ್ರಸಾದ್‌ರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ. ಈ ಅನುದಾನ ಬಂದರೆ 4 ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆಸುವುದು,ಪಂಪು ಮೋಟಾರ್ ಖರೀದಿ ಹಾಗೂ ದುರಸ್ತಿ ಕೇಸಿಂಗ್ ಪೈಪ್, ಪಾನೆಲ್ ಬೋರ್ಡ್ ಸೇರಿ ಕುಡಿಯುವ ನೀರಿನ ಪೂರೈಕೆಗೆ ಅಗತ್ಯವಿರುವ ಎಲ್ಲಾ ಪರಿಕರಗಳಿಗೂ ಈ ಅನುದಾನ ಬಳಕೆ ಮಾಡಲಾಗುವುದು.
ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸ ಕೋಟೆ, ನೆಲಮಂಗಲ ತಾಲೂಕುಗಳಲ್ಲಿ 181 ಕೊಳವೆ ಬಾರಿ ಕೊರೆಸಲಾಗಿದ್ದು, 130 ಮಾತ್ರ ಸಫಲವಾಗಿದೆ.ಜಿಪಂನಿಂದ ಖಾಸಗಿ ಬೋರ್‌ವೆಲ್ ಮೂಲಕ ಜಿಲ್ಲೆಯ ಜನರಿಗೆ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಖಾಸಗಿ ಬೋರ್‌ವೆಲ್‌ಗಳಿಗೆ ಮಾಸಿಕ 18 ಸಾವಿರ ರೂ.ನೀಡಲಾಗುತ್ತಿದೆ. ಈಗ ಹೊಸದಾಗಿ 33 ಕೋಟಿ ರೂ.ಅನುದಾನ ಬರುವುದರಿಂದ ಈಗಾಗಲೇ ಅಧಿಕಾರಿಗಳಿಗೆ ಹೊಸ ಬೋರ್‌ವೆಲ್ ಕೊರೆಸಲು ಗುರುತಿಸಲಾಗುತ್ತಿದೆ. 4 ತಾಲೂಕುಗಳ ಶಾಸಕರನೇತೃತ್ವದಲ್ಲಿ ಆಯಾ ತಾಲೂಕುಗಳ ತಹಶೀಲ್ದಾರ್ ಹಾಗೂ ಜಿಲ್ಲಾ ಕುಡಿಯುವ ನೀರಿನ ಅಧಿಕಾರಿಗಳ ತಂಡದೊಂದಿಗೆ ಟಾಸ್ಕ್ಪೋರ್ಸ್ ರಚಿಸಲಾಗಿದೆ.
ಜಿಲ್ಲೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬರದಂತೆಕುಡಿಯುವ ನೀರಿಗೆಹೆಚ್ಚಿನ ಆದ್ಯತೆನೀಡಲಾಗುತ್ತಿದೆ.ಬೇಸಿಗೆ ಇರುವುದರಿಂದ ಅಧಿಕಾರಿಗಳುಕುಡಿಯುವ ನೀರಿಗೆಪ್ರಾಮುಖ್ಯತೆ ನೀಡಬೇಕು. ಎಲ್ಲೇ ನೀರಿನ ಸಮಸ್ಯೆ ಬಂದರೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. –ವಿ.ಪ್ರಸಾದ್, ಜಿಪಂ ಅಧ್ಯಕ್ಷ
ಬರ ನಿರ್ವಹಣೆಗೆ ಜಿಲ್ಲೆಯಲ್ಲಿ 33 ಕೋಟಿ ರೂ.ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಲಾಗಿದೆ. ಆರ್ ಡಿಪಿಆರ್‌ನಿಂದ ಅನುದಾನ ಬರುತ್ತಿದೆ. ಜಿಲ್ಲೆಯಲ್ಲಿಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಜಿಪಂನಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. –ಎಂ.ಆರ್.ರವಿಕುಮಾರ್, ಜಿಪಂ ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.