ರೈತರ ಸಮಸ್ಯೆಗಳಿಗೆ ಸರ್ಕಾರ ಮಧ್ಯ ಪ್ರವೇಶಿಸಲಿ
Team Udayavani, Apr 16, 2020, 2:38 PM IST
ದೇವನಹಳ್ಳಿ: ಮುಖ್ಯಮಂತ್ರಿ ಮತ್ತು ಸಚಿವರು ಸುಮ್ಮನೆ ಹೇಳಿಕೆ ನೀಡಿದರೆ ಸಾಲದು. ರೈತರಿಗೆ ಅನುಕೂಲವಾಗುವ ಕಾರ್ಯಕ್ರಮ ಅನುಷ್ಠಾನಗೊಳಿಸಿ ಕಾರ್ಯಗತಗೊಳಿಸಬೇಕು. ಕೃಷಿ ಮತ್ತು ಇನ್ನಿತರೆ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿ ನಗರ ಶಾಸಕ ದಿನೇಶ್ ಗುಂಡೂರಾವ್ ತಿಳಿಸಿದರು.
ತಾಲೂಕಿನ ಉಗನವಾಡಿ ಮತ್ತು ಇಲ್ಲತೊರೆ ಗ್ರಾಮದಲ್ಲಿ ಬೆಳೆದಿರುವ ತೊಂಡೆಕಾಯಿ ಮತ್ತು ಟೊಮೆಟೋ ತೋಟಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ಕಾರ್ಯಕ್ರಮ ರೂಪಿಸಬೇಕು. ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ರೈತರು ತಾವು ಬೆಳೆದ ತೊಂಡೆಕಾಯಿ ಮತ್ತು ಟೊಮೆಟೋ ಇನ್ನಿತರೆ ಬೆಳೆಗಳಿಗೆ ಬೆಲೆಯಿಲ್ಲದೆ ರೈತ ಕಂಗಾಲಾಗಿದ್ದಾನೆ. ಸಾಲ ಹೆಚ್ಚು ಮಾಡಿ
ಕೊಂಡು ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ. ಸಾಲ ಮರು ಪಾವತಿಗೆ ಕಷ್ಟ ಅನುಭವಿಸುವ ಪರಿಸ್ಥಿತಿ ಬಂದೊದಗಿದೆ. ರೈತರು ಬೆಳೆದ ತರ ಕಾರಿಗಳು ಕಣ್ಣು ಮುಂದೆ ಕೊಳೆಯುತ್ತಿದೆ. ರೈತರ ಸ್ಥಿತಿ ಗಂಭೀರವಾಗಿದೆ ಎಂದರು.
ರೈತರಿಂದ ನೇರವಾಗಿ ತೊಂಡೆಕಾಯಿ ಮತ್ತು ಟೊಮೆಟೋ, ಹಿರೇಕಾಯಿ, ಈರುಳ್ಳಿ ಇನ್ನಿತರೆ ತರಕಾರಿ ಖರೀದಿಸಿ, 2-3 ಲಕ್ಷ ವೆಚ್ಚದಲ್ಲಿ ನಮ್ಮ ಕ್ಷೇತ್ರದಲ್ಲಿರುವ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರಿಗೆ 2 ಟನ್‌ನಷ್ಟು ತರಕಾರಿ ನೀಡಲಾಗುತ್ತಿದೆ. ಈ ಭಾಗದ ಕಾಂಗ್ರೆಸ್ ಮುಖಂಡರ ಸಹಕಾರ ಪಡೆದು ತರಕಾರಿ ಗಳನ್ನು ರೈತರಿಂದ ಖರೀದಿಸುತ್ತಿ ದ್ದೇವೆ. ಈ ಭಾಗದ ರೈತರ ಸಮಸ್ಯೆಗಳ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ರಾಜ್ಯ ಸರ್ಕಾರ ಲಾಕ್ ಡೌನ್ ನನ್ನು ಸಮಪರ್ಕಕವಾಗಿ
ಕಾರ್ಯ ನಿರ್ವಹಿಸುತ್ತಿಲ್ಲ. ಕೊರೊನಾ ವೈರಸ್ ಲಾಕ್ ಡೌನ್ ಅನ್ನು ಕಾನೂನು ಪಾಲಿಸಿ ಮನೆಯಲ್ಲಿಯೇ ಇದ್ದು ಜೀವ ಉಳಿಸಿಕೊಂಡು ಮುಂದಿನ ಜೀವನ ಸಾಗಿಸಬೇಕು ಎಂದು ಹೇಳಿದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ. ಮಂಜುನಾಥ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಲಕ್ಷ್ಮೀ ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಪ್ರಸನ್ನಕುಮಾರ್, ಉಪಾ ಧ್ಯಕ್ಷ ಎಸ್.ಜಿ. ಮಂಜುನಾಥ್, ಖಜಾಂಚಿ ದ್ಯಾವರಹಳ್ಳಿ ವಿ. ಶಾಂತ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್. ನಾಗೇಶ್, ಗ್ರಾಪಂ ಸದಸ್ಯ ನಾರಾಯಣಸ್ವಾಮಿ, ಲಕ್ಷ್ಮೀ ಕಾಂತ್, ಚನ್ನಕೇಶವ, ಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡ ನರ ಸಿಂಹ ಮೂರ್ತಿ ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.