ಮಹಾತ್ಮರ ಜೀವನ ಆದರ್ಶವಾಗಲಿ
Team Udayavani, Oct 3, 2020, 12:46 PM IST
ನೆಲಮಂಗಲ: ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಯವರ ಜೀವನ ಇಂದಿನ ರಾಜಕಾರಣಿಗಳಿಗೆ ಆದರ್ಶವಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮಾಜಿ ಶಾಸಕ ಎಂ.ವಿ.ನಾಗರಾಜು ಸಲಹೆ ನೀಡಿದರು.
ತಾಲೂಕಿನ ಭವಾನಿ ಶಂಕರ್ ಹೋಟಲ್‌ನಲ್ಲಿ ಆಯೋಜಿಸಲಾಗಿದ್ದ ಮಹಾತ್ಮಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಯವರ ಜನುಮ ದಿನದ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನ ಮನ ಸಲ್ಲಿಸಿ ಮಾತನಾಡಿದರು. ಮಹಾತ್ಮರ ಹುಟ್ಟಿದ ದಿನ ಸಹಿ ತಿಂದು ಸಂಭ್ರ ಮಿಸುವ ಜತೆ ಆದರ್ಶ ರೂಢಿಸಿಕೊಳ್ಳಬೇಕು. ಮಹಾತ್ಮರ ಜೀವನ ಶೈಲಿ ಹಾಗೂ ಶಾಂತಿಯುತ ಹೋರಾಟ, ಶಾಸ್ತ್ರಿಯವರ ಆದರ್ಶ ಜೀವನ ನಮ್ಮ ರಾಜ್ಯದ ಜನಪ್ರತಿನಿಧಿಗಳಿಗೆ ಸಂಪೂರ್ಣ ವಾಗಿ ತಿಳಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಯುವ ಮುಖಂಡ ಭವಾನಿ ಶಂಕರ್ ಮಂಜುನಾಥ್, ಯುವ ಸಮುದಾಯದ ಜನ ಸಾಮಾಜಿಕ, ಆರ್ಥಿಕ ಹಾಗೂ ವ್ಯವಹಾರಿಕವಾಗಿ ಸಮಾಜದ ಒಳಿತಿನೊಂದಿಗೆ ಸಾಗಬೇಕಾದರೆ ಶಾಸ್ತ್ರೀಜಿ, ಗಾಂಧೀಜಿ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕೆಂದರು.
ಪುಷ್ಪನಮನ : ಭವಾನಿ ಶಂಕರ್ ಹೋಟಲ್ ನಲ್ಲಿ ಯುವಮುಖಂಡ ಮಂಜುನಾಥ್ ನೇತೃ ತ್ವದಲ್ಲಿ ನಡೆದ ಮಹಾತ್ಮಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಯವರ ಜನುಮ ದಿನಾಚರಣೆಯಲ್ಲಿ ಇಬ್ಬರ ಭಾವಚಿತ್ರಕ್ಕೆ ಪುಷ್ಪನ ಮನ ಸಲ್ಲಿಸಿ ಪರಿಶ್ರಮ, ಹೋರಾಟದ ಬಗ್ಗೆ ನೆನಪಿಸಿಕೊಂಡರು. ಯುವ ಮುಖಂಡ ಸಂದೀಪ್‌ಕುಮಾರ್, ದಿಲೀಪ್, ಸತೀಶ್‌ಯಲ ಚಗೆರೆ, ಮಂಜುನಾಥ್, ನಟರಾಜು ಮತ್ತಿತರರಿದ್ದರು.
ಪೌರಕಾರ್ಮಿಕರು ಶ್ರಮ ಶ್ಲಾಘನೀಯ :
ನೆಲಮಂಗಲ: ನಗರದ ಸ್ವಚ್ಛತೆ ಕಾಪಾಡುವಲ್ಲಿಪೌರಕಾರ್ಮಿಕರಪರಿಶ್ರಮ ಅಪಾರ ಎಂದು ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಎನ್.ಪಿ.ಹೇಮಂತ್ ಕುಮಾರ್ ಅಭಿಪ್ರಾಯ ಪಟ್ಟರು.ಪಟ್ಟಣದ ಬಸವಣ್ಣ ದೇವರ ಮಠದಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಪೌರಕಾರ್ಮಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು.
ಪೌರಕಾರ್ಮಿಕರ ಸಮಸ್ಯೆ, ಆರೋಗ್ಯ ಕುರಿತಾಗಿ ಲಯನ್ಸ್ ಸಂಸ್ಥೆ ಸದಾ ಕಾಳಜಿ ವಹಿಸುತ್ತದೆ. ಪೌರಕಾರ್ಮಿಕರು ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆ ಮಾಡುವ ಭರದಲ್ಲಿ ತಮ್ಮ ಕುಟುಂಬ ಸದಸ್ಯರ ಆರೋಗ್ಯ ಕಡೆಗಣಿಸಬಾರದು ಎಂದರು.
ಪೌರಾಯುಕ್ತ ಎಲ್. ಮಂಜುನಾಥಸ್ವಾಮಿ ಮಾತನಾಡಿ, ನಗರಸಭೆ ಪೌರಕಾರ್ಮಿಕರ ಆರೋಗ್ಯದ ಕಾಳಜಿವಹಿಸುವಸಲುವಾಗಿಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡುತ್ತಿರುವುದು ಲಯನ್ಸ್ ಸಂಸ್ಥೆ ಆರೋಗ್ಯದ ಕುರಿತಾದ ಕಾಳಜಿ ಶ್ಲಾಘನೀಯ ಎಂದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಜಯಪ್ರಸಾದ್, ಪೌರಕಾರ್ಮಿಕರ ಸಂಘದ ವಿಭಾಗೀಯ ಅಧ್ಯಕ್ಷ ಅಂಕಯ್ಯ, ತಾಲೂಕು ಅಧ್ಯಕ್ಷ ಚಂದ್ರು, ಮಂಜುನಾಥ್, ರಾಜು, ಮಂಜುನಾಥ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.