ಸೋಂಕಿಂದ ಮೃತಪಟ್ಟ ಬಿಪಿಎಲ್‌ ಕುಟುಂಬಕ್ಕೆ 10 ಸಾವಿರ ರೂ.


Team Udayavani, Apr 25, 2021, 1:21 PM IST

ಸೋಂಕಿಂದ ಮೃತಪಟ್ಟ ಬಿಪಿಎಲ್‌ ಕುಟುಂಬಕ್ಕೆ  10 ಸಾವಿರ ರೂ.

ದೇವನಹಳ್ಳಿ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ನಾಗೇಶ್‌ 2021-22ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು.

ಬಜೆಟ್‌ನ ಮೊತ್ತ 26.79 ಕೋಟಿ ರೂ. ಆಗಿದ್ದು, ವೆಚ್ಚ 26.28 ಕೋಟಿ ರೂ., ಉಳಿತಾಯ 51 ಲಕ್ಷ ರೂ. ಆಗಿದೆ. ಬಜೆಟ್‌ ಮಂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ನಾಗೇಶ್‌ ಮಾತನಾಡಿ, ಪಟ್ಟಣದ ಸರ್ವತೋ ಮುಖ ಅಭಿವೃದ್ಧಿಗಾಗಿ ಮೂಲ ಸೌಕರ್ಯಕ್ಕೆ ಒತ್ತು, ಕುಡಿಯುವ ನೀರಿನ ಪೂರೈಕೆ ಸೇರಿ ಅಭಿವೃದ್ಧಿಗೆ ಪೂರಕ ಬಜೆಟ್‌ ಮಂಡಿಸಲಾಗಿದೆ ಎಂದರು.

ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬದವರಿಗೆ 10 ಸಾವಿರ ರೂ. ಸಹಾಯಧನ ವಿತರಣೆ, ನೀರಿನ ಘಟಕಗಳ ಸ್ಥಾಪನೆ, ಅಗತ್ಯವಿರುವ ಕಡೆ ಹೆಚ್ಚುವರಿ ಆಗಿ 2 ಘಟಕ ಸ್ಥಾಪನೆ. ಕೆರೆಸುತ್ತಲು ವಾಯುವಿಹಾರಕ್ಕಾಗಿ ಪಾದಚಾರಿ ಮಾರ್ಗ, ಉದ್ಯಾನ ನಿರ್ಮಿಸಿ ವ್ಯಾಯಾಮ ಸಲಕರಣೆಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಮುಕ್ತಿವಾಹನ ಮತ್ತು ಶವಸಂಸ್ಕಾರ ಪೆಟ್ಟಿಗೆಸೌಲಭ್ಯ ಕಲ್ಪಿಸಲಾಗುವುದು. ಪುರಸಭಾ ಕಚೇರಿಯ ಮುಂಭಾಗದಲ್ಲಿ 4 ಅಂತಸ್ತಿನ ವಾಣಿಜ್ಯ ಕಟ್ಟಡಸಂಕೀರ್ಣ, ಸಮಾರಂಭ ಹಾಗೂ ಸಭಾಂಗಣ ನಿರ್ಮಿಸುವುದು. ಜನಸಂದಣಿ, ಅಪಘಾತವಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಘನತ್ಯಾಜ್ಯ ವಿಲೇವಾರಿ ಬಗ್ಗೆ ಅರಿವು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅನುದಾನದಡಿಯಲ್ಲಿ ಕೆಂಪೇಗೌಡ ಸರ್ಕಲ್‌ನಿಂದಪಟ್ಟಣದ ಮೂಲಕ ರಾಣಿಸರ್ಕಲ್‌ವರೆಗೆ ರಸ್ತೆ ಮತ್ತು ಪಾದಚಾರಿ ಅಭಿವೃದ್ಧಿಗೊಳಿಸಲಾಗುವುದುಸೇರಿದಂತೆ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಕೂಡಲೇ ಖರೀದಿಸಿ: ಪುರಸಭಾ ಸದಸ್ಯ ಜಿ.ಎ. ರವೀಂದ್ರ ಮಾತನಾಡಿ, ಬಜೆಟ್‌ನಲ್ಲಿ ಮಂಡಿಸಿರುವ ಎಲ್ಲಾ ಕಾರ್ಯಕ್ರಮಗಳು ಕಾರ್ಯಗತವಾಗಬೇಕು. ಮೊದಲು ಮುಕ್ತಿ ವಾಹನ, ಶವ ಸಂಗ್ರಹಣ ಪೆಟ್ಟಿಗೆ ಕಾರ್ಯವನ್ನು ಜರೂರಾಗಿ ಮಾಡಬೇಕು. ಘೋಷಣೆ ಯಾಗಿ ಉಳಿಯಬಾರದು ಎಂದು ಸಭೆಯಲ್ಲಿ ಗಮನಕ್ಕೆ ತಂದರು.

ಅವ್ಯವಹಾರ ಆಗಬಾರದು: ಪುರಸಭಾ ಸದಸ್ಯ ಎನ್‌.ರಘು ಮಾತನಾಡಿ, ಕೋವಿಡ್‌-19 ಕಾಯಿಲೆಯಿಂದ ಮರಣಹೊಂದಿರುವ ಬಿಪಿಎಲ್‌ ಬಡಕುಟುಂಬಗಳಿಗೆ 10 ಸಾವಿರ ರೂ. ವಿಳಂಬ ಮಾಡದೆ ನೀಡಬೇಕು. ಅರ್ಹರಿಗೆ ತಲುಪಿಸುವಕೆಲಸವಾಗಬೇಕು. ಇದರಲ್ಲಿ ಯಾವುದೇ ಅವ್ಯವಹಾರ ಆಗಬಾರದು ಎಂದು ವಿವರಿಸಿದರು.

ಮುಕ್ತಿ ವಾಹನ, ಶವಪೆಟ್ಟಿಗೆ ಖರೀದಿ: ಮುಖ್ಯಾಧಿಕಾರಿ ಎ.ಎಚ್‌.ನಾಗರಾಜ್‌ ಮಾತನಾಡಿ, ಮುಕ್ತಿ ವಾಹನ ಮತ್ತು ಶವ ಸಂಸ್ಕರಣಾ ಪೆಟ್ಟಿಗೆ ಖರೀದಿಸಲು ಸದಸ್ಯರ ಸಭೆ ಕರೆದು ತೀರ್ಮಾನದ ಪತ್ರ ಕಳುಹಿಸಿಕೊಡುವಂತೆ ಡೀಸಿ ತಿಳಿಸಿದ್ದಾರೆ. ಆನ್‌ ಲೈನ್‌ನಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಿ, ಕೂಡಲೇ ಮುಕ್ತಿವಾಹನ ಮತ್ತು ಶವ ಸಂಸ್ಕರಣಾ ಪೆಟ್ಟಿಗೆ ಖರೀದಿಸಲಾಗುವುದು ಎಂದು ಹೇಳಿದರು.

ಪುರಸಭಾ ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀ ನಾರಾಯಣ್‌ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆಯಲ್ಲಿ ಸದಸ್ಯರಾದ ಜಿ.ಎ.ರವೀಂದ್ರ, ರತ್ನಮ್ಮ ರವಿಕುಮಾರ್‌, ಎನ್‌.ರಘು, ಎಸ್‌.ಸಿ.ಚಂದ್ರಪ್ಪ, ಮಂಜುನಾಥ್‌, ಬಾಲರಾಜ್‌, ಮುನಿಕೃಷ್ಣ,ಗೋಪಿ, ಲಕ್ಷ್ಮೀ ಅಂಬರೀಶ್‌, ರುದ್ರೇಶ್‌, ಗೀತಾಶ್ರೀಧರ್‌, ಲೀಲಾವತಿ ಶಿವಕುಮಾರ್‌, ಕೋಮಲಾ, ಸುಮಿತ್ರಾ ಸಿಬ್ಬಂದಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.