![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 5, 2020, 6:56 AM IST
ವಿಜಯಪುರ: ಲಾಕ್‌ಡೌನ್ ಸಂದರ್ಭದಲ್ಲಿ ಬಹಳಷ್ಟು ನಿರ್ಗತಿಕರು ಮತ್ತು ಬಡವರು ತಮಗೆ ದೊರೆತ ದಿನಸಿ ಕಿಟ್‌ಗಳಿಂದ ಹೊಟ್ಟೆ ತುಂಬಿಸಿಕೊಂಡರು. ಆದರೆ ದಿನಸಿ ಕಿಟ್‌ಗೆ ಕೈಚಾಚದ ಅನೇಕ ಮಧ್ಯಮ ವರ್ಗದ ಕುಟುಂಬದ ಕಷ್ಟ ಅನುಭವಿಸಿದವರಿಗೇ ಗೊತ್ತು ಎಂದು ಅ.ಶಿ.ವೈ.ನಗರ್ತ ಮಹಂತಿನ ಮಠ ಧರ್ಮ ಸಂಸ್ಥೆ ಅಧ್ಯಕ್ಷ ಬಿ.ಪ್ರಭುದೇವ್ ತಿಳಿಸಿದರು.
ಪಟ್ಟಣದ ಗಾಂಧಿ ಚೌಕದ ಮಹಂತಿನ ಮಠ ಧರ್ಮ ಸಂಸ್ಥೆಯಿಂದ ನಗರ್ತ ಜನಾಂಗದ ಮಧ್ಯಮ ವರ್ಗದ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ ಸಂದರ್ಭದಲ್ಲಿ ಮಾತನಾಡಿದರು. ಲಾಕ್‌ಡೌನ್ ಸಡಿಲಗೊಂಡ ನಂತರ ನಾವು ದಿನಸಿ ಕಿಟ್ ವಿತರಿಸುತ್ತಿದ್ದು, ಅವರು ಬೇರೆ ಯಾವ ಸಂಘ ಸಂಸ್ಥೆಗಳು, ಪಕ್ಷಗಳ ಮುಖಂಡರು ನೀಡಿದ ದಿನಸಿ ಕಿಟ್ ಪಡೆದಿಲ್ಲ.
ಆದರೆ ಎರಡು ಮೂರು ತಿಂಗಳು ಕಳೆಯುವಷ್ಟರಲ್ಲಿ ದುಡಿಮೆಯಿಲ್ಲದೆ ಆದಾಯದಿಂದ ವಂಚಿತರಾದವರು. ಬಾಯಿ ಬಿಟ್ಟು ತಮ್ಮ ಕಷ್ಟ ಹೇಳಿಕೊಳ್ಳಲು ಹಿಂಜರಿದವರು. ಅಂತಹವರನ್ನು ಗುರುತಿಸಿ, ದಿನಸಿ ಕಿಟ್ ವಿತರಿಸಿದ್ದೇವೆ ಎಂದರು. ಸಂಸ್ಥೆ ನಿರ್ದೇಶಕ ಎನ್.ರುದ್ರಮೂರ್ತಿ ಮಾತನಾಡಿ, ಲಾಕ್‌ಡೌನ್ ಅಂಗವಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಕೆಲಸ ಇಲ್ಲವಾಯಿತು. ಇನ್ನೊಬ್ಬರ ಬಳಿ ನೆರವಿನ ಹಸ್ತಕ್ಕೆ ಕೈ ಚಾಚಲು ಸಂಕೋಚ ಅಡ್ಡಿಯಾಯಿತು.
ಆದಾಯ ಸಂಪೂರ್ಣ ನಿಂತು ಹೋಯಿತು. ಇಂತಹ ಜನಾಂಗದ ಕುಟುಂಬ ಗುರುತಿಸಿ, ಅವರಿಗೆ 800 ರೂ. ಗಳಷ್ಟು ಬೆಲೆ ದಿನಸಿ ಕಿಟ್ ವಿತರಿಸಿದ್ದು, ಒಟ್ಟು 50 ದಿನಸಿ ಕಿಟ್ ಮತ್ತು ಒಬ್ಬರಿಗೆ ಔಷಧ ಉಚಿತವಾಗಿ ನೀಡಿರುವುದಾಗಿ ತಿಳಿಸಿದರು. ಸಂಸ್ಥೆ ಕಾರ್ಯದರ್ಶಿ ವಿ.ವಿಶ್ವನಾಥ್, ನಿರ್ದೇಶಕ ಬಿ.ಕೆ.ದಿನೇಶ್, ಪಿ.ಮುರಳಿಧರ, ಸಿ.ವಿಜಯರಾಜ, ಸಿ.ಮಂಜುನಾಥ್, ಸುರೇಶ್ ಬಾಬು, ಬಿ.ಶೀಲಾರಾಣಿ ಇದ್ದರು.
You seem to have an Ad Blocker on.
To continue reading, please turn it off or whitelist Udayavani.