ಬೆಟ್ಟ ಹತ್ತಲು ಭರಿಸಬೇಕು ದುಬಾರಿ ಶುಲ್ಕ


Team Udayavani, Nov 7, 2022, 2:38 PM IST

tdy-6

ದೊಡ್ಡಬಳ್ಳಾಪುರ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಚಾರಣಿಗರ ನೆಚ್ಚಿನ ತಾಣವಾದ ಮಾಕಳಿ ದುರ್ಗ ಬೆಟ್ಟವು ಇಕೋ ಟ್ಯೂರೀಸಂ ಅಡಿಯಲ್ಲಿ ಗುರುತಿಸಲಾಗಿದ್ದು, ಬೆಟ್ಟ ಹತ್ತಲು ಇಲಾಖೆಯಿಂದ ವಿಧಿಸಲಾಗುತ್ತಿರುವ ದುಬಾರಿ ಶುಲ್ಕಕ್ಕೆ ಚಾರಣ ಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮಾಕಳಿ ದುರ್ಗ ಹತ್ತಲು ವಾರಂತ್ಯದ ದಿನಗಳಾದ ಶನಿವಾರ, ಭಾನುವಾರಗಳಂದು 485 ಹಾಗೂ ಇತರೆ ದಿನಗಳಲ್ಲಿ 303 ಶುಲ್ಕ ಪಾವತಿಸುವಂತೆ ಶುಲ್ಕ ವಿಧಿಸಲಾಗಿದೆ. ಈ ಹಿಂದೆ ವಾರದ ಎಲ್ಲಾ ದಿನಗಳಲ್ಲೂ ಮಾಕಳಿ ಬೆಟ್ಟಕ್ಕೆ ಹೋಗುವ ಚಾರಣಿಗರು ಆನ್‌ಲೈನ್‌ ಮೂಲಕ 250 ರೂ ಶುಲ್ಕ ಪಾವತಿಸಬೇಕಿತ್ತು. ಆದರೆ, ಮೂರು ವಾರಗಳಿಂದ ಈಚೆಗೆ ಈ ನಿಯಮ ಜಾರಿಗೆ ಬಂದಿದೆ. ಶುಲ್ಕ ಏರಿಕೆಯಲ್ಲಿ ಜಿಎಸ್‌ಟಿ 74 ರೂ., ಆನ್‌ ಲೈನ್‌ ಬುಕ್ಕಿಂಗ್‌ ಶುಲ್ಕ 11 ರೂ. ಸಹ ಸೇರಿಸಲಾಗಿದೆ. ಈ ನಿಯಮ ಮಾಕಳಿ ಬೆಟ್ಟಕ್ಕಷ್ಟೇ ಸೀಮಿತವಾಗಿರದೆ, ಅರಣ್ಯ ಇಲಾಖೆ ರಾಜ್ಯದಲ್ಲಿ ಇಕೋ ಟ್ಯೂರೀಸಂ ಅಡಿಯಲ್ಲಿ ಗುರುತಿಸಲಾಗಿರುವ ಸುಮಾರು 15ಕ್ಕೂ ಹೆಚ್ಚಿನ ಚಾರಣ ಪ್ರದೇಶಗಳಲ್ಲೂ ಏರಿಕೆಯಾಗಿದೆ.

ದುಬಾರಿ ಶುಲ್ಕ ಪಾವತಿ: ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ಹಾಗೂ ರಮಣೀಯ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಮಾಕಳಿ ಬೆಟ್ಟಕ್ಕೆ ವಾರಂತ್ಯದ ದಿನಗಳಲ್ಲಿ ಸರಾಸರಿ 250 ರಿಂದ 300 ಜನ ಬೆಟ್ಟಹತ್ತಲು ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸಿ ಬೆಳಗ್ಗೆ 6 ಗಂಟೆಗೆ ಬರುತ್ತಾರೆ. ಇಡೀ ವಾರ ಕೆಲಸಗಳಲ್ಲಿ ನಿರತರಾಗುವ ಜನ ಆರೋಗ್ಯ, ಮನಸ್ಸಿನ ಶಾಂತಿಗಾಗಿ ಶ್ರಮ ವಹಿಸಿ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಲು ದುಬಾರಿ ಶುಲ್ಕ ಪಾವತಿಸುವಂತಾಗಿರುವುದು ದುರಂತದ ಸಂಗತಿಯಾಗಿದೆ.

ದುಡ್ಡು ಮಾಡುವ ಮನಸ್ಥಿತಿ: ಚಾರಣಕ್ಕೆ ಬಂದವರು ತಮ್ಮ ಅಧಿಕಾರವನ್ನು ಚಲಾಯಿಸಿ ಪ್ಲಾಸ್ಟಿಕ್‌ ಬಿಸಾಕುವುದು, ಅರಣ್ಯದಲ್ಲಿ ಅನೈತಿಕ ಚಟುವಟಿಕೆ ನಡೆಸುವುದು, ನೈಸರ್ಗಿಕ ಸಂಪನ್ಮೂಲವನ್ನು ಹಾನಿ ಮಾಡುವುದು, ಬೆಂಕಿ ಹಚ್ಚುವುದು ಕುಡಿದು ಬಾಟಲನ್ನು ಹೊಡೆದು ಹಾಕುವುದು, ಜೊತೆಗೆ ಸೆಲ್ಫಿ ಗಿಳಿಗಾಗಿ ಪ್ರಾಣ ಕಳೆದುಕೊಳ್ಳುವುದು, ದಾರಿತಪ್ಪಿ ಜೀವಕ್ಕೆ ಕಂಟಕ ತಂದುಕೊಳುವುದು, ಮಾಡಬಾರದ ಸಾಹಸಗಳನ್ನು ಮಾಡಲು ಹೋಗಿ ಆಪತ್ತಿಗೆ ಸಿಲುಕಿಕೊಳ್ಳುವುದು ನಡೆಯುತ್ತಿವೆ. ಇದನ್ನೆಲ್ಲ ತಡೆಯುವ ಉದ್ದೇಶ ಮುಂದಿಟ್ಟುಕೊಂಡು ಶುಲ್ಕವನ್ನು ನಿಗದಿ ಮಾಡಲು ಮುಂದಾಗಿದ್ದು, ಇದರಲ್ಲಿ ಕೆಲವು ಉದ್ದೇಶಗಳು ಮಾತ್ರ ಕಾರ್ಯರೂಪಕ್ಕೆ ಬಂದಿದೆ. ಆದರೆ, ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಕಾರಣ ಸೇವಾ ಮನೋಭಾವವನ್ನು ಬಿಟ್ಟು ದುಡ್ಡು ಮಾಡುವ ಮನಸ್ಥಿತಿಗಳಿಗೆ ಎಲ್ಲಾ ಪ್ರವಾಸಿ ತಾಣಗಳು ಸಹ ಒಳ್ಳೆಯ ಅನುಕೂಲವಾಗಿದೆ.

ಇಲಾಖೆ ಗಮನಹರಿಸಲಿ: ಬೆಂಗಳೂರಿನಿಂದ ದುಡ್ಡಿರುವವರು ಬರುತ್ತಾರೆ. ಎಷ್ಟು ಬೇಕಾದರೂ ದುಡ್ಡು ಕೊಟ್ಟು ನೋಡುತ್ತಾರೆ ಎಂಬೆಲ್ಲ ಯೋಚನೆ ಹೊರತುಪಡಿಸಿ, ಸಾಮಾನ್ಯರು ಸಹ ಚಾರಣಕ್ಕೆ ಹೋಗುವಂತೆ ಶುಲ್ಕವನ್ನು ನಿಗದಿ ಮಾಡುವ ಬಗ್ಗೆ ಇಲಾಖೆಯು ಗಮನಹರಿಸಬೇಕಾಗಿದೆ.

ಹಣ ಮಾಡುವ ಬರದಲ್ಲಿ ಇಂದಿಗೂ ಸಹ ಇಲಾಖೆಯಿಂದ ಚಾರಣ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಚರ್‌ ಗೈಡ್‌ಗಳಿಗೆ ಮೂಲಸೌಕರ್ಯವನ್ನು ಒದಗಿಸಲು ಮುಂದಾಗದವರಿಗೆ ಇನ್ನು ಚಾರಣಿಗರಿಗೆ ಇನ್ಯಾವ ರೀತಿಯ ಭದ್ರತೆ ನೀಡುತ್ತಾರೆಂಬ ಅನುಮಾನವೂ ಸದಾ ಕಾಡುತ್ತದೆ ಎಂದು ಸ್ಥಳೀಯ ಚಾರಣಿಗ ಚಿದಾನಂದ್‌ ದೂರಿದ್ದಾರೆ. ಮಾಕಳಿ ಬೆಟ್ಟದ ಸುತ್ತಮುತ್ತಲಿನ ಸ್ಥಳೀಯ ಗ್ರಾಮಗಳ ಹಾಗೂ ಬೆಟ್ಟವನ್ನು ಹೊಂದಿರುವ ದೊಡ್ಡಬಳ್ಳಾಪುರ ತಾಲೂಕಿನ ಜನರು ಸಹ ಶುಲ್ಕ ಪಾವತಿಸಿಯೇ ಬೆಟ್ಟಕ್ಕೆ ಚಾರಣ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತರುವ ಮೂಲಕ ನಮ್ಮೂರಿನ ಬೆಟ್ಟ ಹತ್ತಲು ನಾವು ಶುಲ್ಕ ನೀಡುವ ಅವೈಜ್ಞಾನಿಕ ಕ್ರಮ ರದ್ದಾಗಬೇಕು ಎಂದು ದೊಡ್ಡಬಳ್ಳಾಪುರದ ಚಾರಣಿಗ ವಿ.ಎಸ್‌. ರವಿಕುಮಾರ್‌, ಶಂಕರ್‌ ಆಗ್ರಹಿಸಿದ್ದಾರೆ.

ಸೌಲಭ್ಯಗಳು ಏನೇನಿರಬೇಕು? : ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸಿಕೊಂಡು ಬೆಟ್ಟ ಹತ್ತಲು ಬರುವ 10 ಜನರ ತಂಡಕ್ಕೆ ಒಬ್ಬರಂತೆ ಅರಣ್ಯ ಇಲಾಖೆ ಗೈಡ್‌ಗಳನ್ನು ಜೊತೆಯಲ್ಲಿ ಕಳುಹಿಸಬೇಕು. ಬೆಟ್ಟ ಹತ್ತುವಾಗ ದಾರಿ ತಪ್ಪದಂತೆ ಜಿಪಿಆರ್‌ಎಸ್‌ ರೂಟ್‌ ಮ್ಯಾಪಿಂಗ್‌ ಸೌಲಭ್ಯ, ಗೈಡ್‌ಗಳ ಬಳಿ ಪ್ರಥಮ ಚಿಕಿತ್ಸೆಗೆ ಅಗತ್ಯ ಇರುವ ಔಷಧಿಯ ಕಿಟ್‌ ಮುಂತಾದ ಸೌಕರ್ಯಗಳನ್ನು ಚಾರಣಿಗರಿಗೆ ನೀಡಬೇಕು. ಅಲ್ಲದೆ, ಚಾರಣದಿಂದ ಹಿಂತಿರುಗಿ ಬಂದವರು ವಿಶ್ರಾಂತಿ ಪಡೆಯುವ ಕೊಠಡಿ, ಕುಡಿಯುವ ನೀರು, ಶೌಚಾಲಯದ ಸೌಲಭ್ಯ, ಚಾರಣಿಗರ ವಾಹನಗಳ ಸುರಕ್ಷತೆ ಮೊದಲಾದ ಅನುಕೂಲಗಳು ಇರಬೇಕು.

ಮೂಲ ಸೌಲಭ್ಯ ನೀಡದೆ ವಂಚನೆ: ಐದು ವರ್ಷಗಳ ಹಿಂದೆ ಮಾಕಳಿ ಬೆಟ್ಟ ಇಕೋ ಟ್ಯೂರೀಸಂ ಪಟ್ಟಿಗೆ ಸೇರ್ಪಡೆಯಾಗಿದೆ. ಇಕೋ ಟ್ಯೂರೀಸಂ ಅಡಿಯಲ್ಲಿ ನೀಡಲಾಗುವ ಯಾವುದೇ ಅನುಕೂಲಗಳು ಮಾಕಳಿ ಬೆಟ್ಟದ ಸಮೀಪ ಇಲ್ಲ. ಅಂದಿನಿಂದಲೂ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬಂದಿದ್ದರೂ, ಚಾರಣಿಗರಿಗೆ ಸೌಲಭ್ಯಗಳನ್ನು ನೀಡಿದೆ ವಂಚನೆ ಮಾಡಲಾಗಿದೆ.

ಸರ್ಕಾರದಿಂದ ಹಗಲು ದರೋಡೆ: ಆರೋಪ : ಮಾಕಳಿ ದುರ್ಗಕ್ಕೆ ಕಾಲ್ನಡಿಗೆಯಲ್ಲಿ ಹೋಗಲು ಸಹ ಯಾವುದೇ ರೀತಿಯ ಮೆಟ್ಟಿಲುಗಳ ಸೌಕರ್ಯ, ಬೆಟ್ಟದ ತಪ್ಪಲಿನಲ್ಲಿ ಕುಡಿಯುವ ನೀರು ಸೇರಿದಂತೆ ಇಕೋ ಟ್ಯೂರೀಸಂ ನಿಯಮದಲ್ಲಿ ಹೇಳಲಾಗಿರುವ ಕನಿಷ್ಠ ಮೂಲಭೂತ ಸೌಲಭ್ಯ ನೀಡದೆ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದು ಸರ್ಕಾರದ ಹಗಲು ದರೋಡೆಯಾಗಿದೆ ಎಂದು ಆನ್‌ಲೈನ್‌ ಮೂಲಕ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಂಡು ಬೆಟ್ಟ ಹತ್ತಲು ಬೆಂಗಳೂರಿನಿಂದ ಬಂದಿದ್ದ ರಶ್ಮಿ , ರಘು ಹಾಗೂ ಸ್ನೇಹಿತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

abhimanyu kashinath next movie suri loves sandhya

Abhimanyu Kashinath; ಸೂರಿ ಲವ್‌ ಗೆ ಉಪ್ಪಿ ಮೆಚ್ಚುಗೆ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

arrested

Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.