15ರಂದು ಮಂಡಲ ಪೂಜೆ ಕಾರ್ಯಕ್ರಮ
Team Udayavani, Dec 14, 2019, 3:04 PM IST
ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯ, ಮಾಲೆಧರಿಸುವ ಭಕ್ತರ ಭಜನೆ, ಇರುಮುಡಿ ಮೊದಲಾದಯಾತ್ರಗೆ ಸಕಲ ವ್ಯವಸ್ಥೆ ಕಲ್ಪಿಸಿದ್ದು, ಭಕ್ತರ ಶ್ರದ್ಧೆ ಭಕ್ತಿಯ ಸ್ಥಳವಾಗಿದೆ.
ವಿಶೇಷವಾಗಿ ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಮಾಲೆ ಧರಿಸಿ ವ್ರತ ಕೈಗೊಳ್ಳುವ ನೂರಾರು ಅಯ್ಯಪ್ಪಸ್ವಾಮಿ ಭಕ್ತರಿಗೆ ವ್ರತ ಬೋಧಿಸಿ, ಇರುಮುಡಿ ಕಟ್ಟಿ ಕಳುಹಿಸಿಕೊಡಲಾಗುತ್ತಿದೆ. ಹಳ್ಳಿಗಳಿಂದ ಬರುವ ಭಕ್ತರು ದೇವಾಲಯದಲ್ಲಿಯೇ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಪ್ರತಿನಿತ್ಯ ಭಜನೆ, ವ್ರತ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ.
ಅಯ್ಯಪ್ಪ ಸ್ವಾಮಿ ದೇಗುಲದ ಇತಿಹಾಸ: 70ರ ದಶಕದಲ್ಲಿ ನಾರಾಯಣ ಶಾಸ್ತ್ರಿ, ನಾರಾಯಣ ಸ್ವಾಮಿ, ಬಾಲದಂಡ ಪಾಣಿ ಮೊದಲಾಗಿ ಪ್ರಮುಖರು ಆರಂಭಿಸಿದ ಅಯ್ಯಪ್ಪಸ್ವಾಮಿ ಮಾಲಾಧರಣೆ ಹಾಗೂ ವ್ರತಗಳು ಈವರೆಗೆ ನಡೆಯುತ್ತಿವೆ. 2001ರಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ನಿರ್ಮಾಣಕ್ಕೆ ಹೆಬ್ಬೂರು ನಾರಾಯಣ ಸ್ವಾಮೀಜಿಯವರ ಪ್ರೇರಣೆಯಾಯಿತು.
ಗರ್ಭಗುಡಿ, ವಿಶಾಲ ಪ್ರಾಂಗಣ ನಿರ್ಮಾಣವಾಯಿತು. ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ಶಿಲಾ ಮೂರ್ತಿಯೊಂದಿಗೆ ಗಣಪತಿ ಹಾಗೂ ಸುಬ್ರಹ್ಮಣ್ಯ ಮೂರ್ತಿಗಳಿವೆ. ನಾಲ್ಕು ಅಡಿ ಎತ್ತರದ ಕಪ್ಪು ಶಿಲೆಯಲ್ಲಿ ನವಗ್ರಹ ಪೀಠ ನಿರ್ಮಿಸಲಾಗಿದ್ದು, ಮೂರ್ತಿಗಳು ವಿಶಿಷ್ಟ ಶಿಲ್ಪಕಲೆಯಿಂದ ಆಕರ್ಷಕವಾಗಿವೆ.
ಪ್ರಾಂಗಣದಲ್ಲಿ ತಮಿಳುನಾಡಿನ ಮಹಾಬಲಿಪುರಂನ ಕಲಾವಿದರು ನಿರ್ಮಿಸಿರುವ ದಶಾವತಾರ, ಅಷ್ಟಲಕ್ಷ್ಮೀ ವಿಗ್ರಹಗಳು ಕಲಾತ್ಮಕತೆಯಿಂದ ಕೂಡಿವೆ. ಅಯ್ಯಪ್ಪ ಸ್ವಾಮಿ ಕಥೆ ಬಿಂಬಿಸುವ ದೃಶ್ಯಾವಳಿಗಳ ಚಿತ್ರಗಳಿವೆ. ಭಕ್ತರ ಸಹಕಾರದಿಂದ ದೇವಸ್ಥಾನದ ಬಾಗಿಲುಗಳಿಗೆ 10 ಲಕ್ಷ ರೂ. ವೆಚ್ಚದಲ್ಲಿ ಹಿತ್ತಾಳೆ ಕವಚ, ಮುಂಭಾಗದ ಮಂಟಪ ನಿರ್ಮಾಣವಾಗಿದೆ. ಪಕ್ಕದಲ್ಲಿ ಸಭೆ ಮಂಟಪವಿದ್ದು, ಶುಭಕಾರ್ಯಗಳು ನಡೆಯುತ್ತವೆ ಎನ್ನುತ್ತಾರೆ ಟ್ರಸ್ಟ್ ಕಾರ್ಯದರ್ಶಿ ಬಿ.ವಿ.ಬಸವರಾಜು. ದೇವಸ್ಥಾನದ ಎದುರು 27 ಅಡಿ ಧ್ವಜಸ್ತಂಭ ಗಮನ ಸೆಳೆಯುತ್ತದೆ. ಪುರುಷ, ಸ್ತ್ರೀ ಬೇಧವಿಲ್ಲದೇ ಭಕ್ತರು ನಿತ್ಯ ದರ್ಶನ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಭೇದವಿಲ್ಲದ ವ್ರತಾಚರಣೆ: ಭಕ್ತರು, ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳಲು, ಜಾತಿ, ಬೇಧವಿಲ್ಲದೇ ಮಾಲೆಧರಿಸಿ, ಅಯ್ಯಪ್ಪ ಸ್ವಾಮಿ ವ್ರತಾಚರಣೆ ಮಾಡುತ್ತಾರೆ. ಇಷ್ಟಾರ್ಥಗಳು ನೆರವೇರಿದ ಬಳಿಕ ಭಕ್ತರೇ ಬಂದು, ಸ್ವಾಮಿಗೆ ಕಾಣಿಕೆ ನೀಡುತ್ತಾರೆ. ಪ್ರತಿವರ್ಷ ಮಂಡಲ ಪೂಜೆ ಅದ್ಧೂರಿಯಿಮದ ಜರುಗುತ್ತದೆ. ಸಹಸ್ರ ಭಕ್ತರು ಇಡುಮುಡಿ ಕಟ್ಟಿಕೊಂಡು ಸ್ವಾಮಿ ಸೇವೆಯಲ್ಲಿ ತೊಡಗಿದ್ದಾರೆ. ಅಯ್ಯಪ್ಪಸ್ವಾಮಿ\ ಉತ್ಸವದಲ್ಲಿ ಕಲಾತಂಡಗಳು ಭಾಗವಹಿಸುತ್ತವೆ. ಮಕ್ಕಳು ಹಣತೆ ಹಿಡಿದು ಸಾಗುತ್ತಾರೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ಎ ಸ್.ಮಹದೇವಯ್ಯ ಹಾಗೂ ಖಜಾಂಚಿ ಸೂರ್ಯ ನಾರಾಯಣ್ ಹೇಳುತ್ತಾರೆ.
ಶ್ರೀಗಳಿಂದ ಆರ್ಶೀವಚನ: ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್‌ನಿಂದ 15ರಂದು, 46ನೇ ವರ್ಷದ ವಾರ್ಷಿಕ ಮಂಡಲ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 5 ಗಂಟೆಗೆ ಗಣಹೋಮ, ಮಧ್ಯಾಹ್ನ 11ಕ್ಕೆ ಅಯ್ಯಪ್ಪ ಸ್ವಾಮಿ ಭಜನೆಯಿದೆ. 12ಕ್ಕೆ ಶಿವಗಂಗೆ ಮೇಲಣಗವಿ ಮಠದ ಪೀಠಾಧ್ಯಕ್ಷ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿ ಆಶೀರ್ವಚನ ನೀಡಲಿದ್ದಾರೆ. ಆ ನಂತರ ಅನ್ನಸಂತರ್ಪಣೆಯಿರುತ್ತದೆ. ಸಂಜೆ 4ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿ ರುವ ಅಯ್ಯಪ್ಪಸ್ವಾಮಿ ಉತ್ಸವದಲ್ಲಿ ವೀರ ಭದ್ರ, ವೀರಗಾಸೆ ಕುಣಿತ, ಕೇರಳದ ಚಂಡೆ ವಾದ್ಯ, ದೇವರ ವೇಷಭೂಷಣಗಳ ಪ್ರದ ರ್ಶನದ ಕಲಾತಂಡಗಳು ಭಾಗವಹಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.