ಮಾವಿನ ಮರದಲ್ಲಿ ನಳನಳಿಸುತ್ತಿದೆ ಹೂವು


Team Udayavani, Jan 11, 2023, 12:03 PM IST

tdy-10

ದೇವನಹಳ್ಳಿ: ಗ್ರಾಮೀಣ ಪ್ರದೇಶದಲ್ಲಿ ಮಾವಿನ ಮರಗಳು ಗಾಢ ಹಸಿರಿನ ಚಿಗುರು ಎಲೆಗಳಿಂದ ಕಂಗೊಳಿಸುತ್ತಿದ್ದು, ಬಂಗಾರದ ಬಣ್ಣದ ಹೂಗಳಿಂದ ನೋಡುಗರ ಕಣ್ಮನಸೆಳೆಯುತ್ತಿದೆ. ಮಾವು ಈ ಬಾರಿ ಉತ್ತಮ ಇಳುವರಿ ಬರುವ ನಿರೀಕ್ಷೆ ಅನ್ನದಾತನಲ್ಲಿ ಹುಟ್ಟಿಸಿದೆ.

ಕಳೆದ ವರ್ಷ ಯಥೇಚ್ಚವಾಗಿ ಹೂವಿನ ಪ್ರಮಾಣ ಅಧಿಕವಾಗಿತ್ತು. ಅತಿಯಾದ ಇಬ್ಬನಿ, ವಾತಾವರಣ ಇದೆ. ಅಲ್ಲದೆ, ಮಾವಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿ ಮಾವಿಗೆ ಪ್ರಮುಖವಾಗಿ ಬೂದಿ ರೋಗ, ಚಿಬ್ಬು ರೋಗ, ಅಂಗಮಾರಿ ರೋಗ, ಹೂವು ಗೊಂಚಲಿನ ರೋಗ ಬರುವುದುಂಟು. ಈ ರೋಗಗಳನ್ನು ತಡೆಗಟ್ಟಬೇಕಾದರೆ ಪ್ರಾರಂಭಿಕ ಹಂತದಲ್ಲಿ ಔಷಧಗಳನ್ನು ಸಿಂಪಡಿಸಿದರೆ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತಮ ಇಳುವರಿ ನಿರೀಕ್ಷೆ: ರೋಗಗಳನ್ನು ತಡೆಯಲು ರೈತರು ಔಷಧಿಗಳ ಸಿಂಪಡಣೆ ಮಾಡಿ ನಿಯಂತ್ರಣ ಮಾಡಬೇಕು. ಈ ಸಮಯದಲ್ಲಿಯೇ ಹೆಚ್ಚು ಎಚ್ಚರವಹಿಸಿವುದು ಅಗತ್ಯವಾಗಿದೆ. ಈಗಿನ ಚಳಿ ಮಾವಿನ ಮರಗಳಿಗೆ ಉತ್ತಮ ಫ‌ಸಲು ನೀಡಲು ಪೂರಕವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಮಾವಿನ ಮರಗಳಲ್ಲಿ ಯಥೇತ್ಛವಾಗಿ ಹೂವು ಕಾಣಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿ ಮಾವು ಬೆಳೆಗಾರರಿದ್ದಾರೆ.

ವಾರಕ್ಕೊಮ್ಮೆ ಔಷಧ ಸಿಂಪಡಿಸಿ: ಈಗಾಗಲೇ ಶೇ.40ರಷ್ಟು ಮಾವಿನ ಮರಗಳಲ್ಲಿ ಹೂವು ಕಾಣಿಸಿಕೊಂಡಿವೆ. ಜನವರಿ ಮತ್ತು ಫೆಬ್ರವರಿ ಅಂತ್ಯದೊಳಗೆ ಸಂಪೂರ್ಣ ಹೂವು ಹರಳುವ ಸಾಧ್ಯತೆಯಿದ್ದು, ಮಾವಿನ ಮರಗಳಲ್ಲಿ ಬಿಟ್ಟಿರುವ ಹೂವು ರಕ್ಷಿಸಿಕೊಳ್ಳಲು ಮತ್ತು ಹೂವು ಇನ್ನೂ ಬಿಡದ ಮಾವಿನ ಮರಗಳಿಗೆ ಹೂವು ಬಿಡಲು ವಾರಕ್ಕೊಮ್ಮೆ ಔಷಧಿಗಳನ್ನು ಸಿಂಪಡಿಸುವ ಕಾರ್ಯದಲ್ಲಿ ಬೆಳೆಗಾರರು ತೊಡಗಿದ್ದಾರೆ.

ಉತ್ತಮ ವಾತಾವರಣ :

ಕಳೆದ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಮಾವಿನ ಮರಗಳು ಸಮೃದ್ಧವಾಗಿವೆ. ಸಂಕ್ರಾಂತಿಯ ನಂತರ ಬಿಸಿಲು ಹೆಚ್ಚಾಗುವುದರಿಂದ ಅಕಾಲಿಕ ಮಳೆ ಮತ್ತು ಮಂಜು ಬೀಳದಿದ್ದರೆ ಹೂವು ಉದುರುವುದಿಲ್ಲ. ಹಾಗಾಗಿ, ಹೂವು ಬಿಡಲು ಉತ್ತಮ ವಾತಾವರಣವಿದ್ದು, ಉತ್ತಮ ಫ‌ಸಲಿನ ನಿರೀಕ್ಷೆಯಲ್ಲಿ ರೈತರಿದ್ದಾರೆ. ತೋಟಗಾರಿಕೆ ಇಲಾಖೆ ಪ್ರಕಾರ ಪ್ರತಿವರ್ಷ ರೈತರು ಹೊಸದಾಗಿ ಸಸಿ ನೆಡುತ್ತಿರುವ ಕಾರಣ ತಾಲೂಕಿನಲ್ಲಿಸಾವಿರ ಹೆಕ್ಟೇರ್‌ ಪ್ರದೇಶ ಮಾವು ಬೆಳೆಯಿದೆ. ಈಗಾಗಲೇ ರೈತರು ಔಷಧ ಸಿಂಪಡಿಸುತ್ತಿದ್ದಾರೆ.

ಮಾವು ಬೆಳೆಗೆ ವಿವಿಧ ರೋಗ: ಮಾವು ಬೆಳೆಗಳಿಗೆ ವಿವಿಧ ರೋಗಗಳು ಬರುತ್ತಿದ್ದು, ರೈತರು ನಿಯಂತ್ರಣ ಮಾಡಲು ಔಷಧ ಸಿಂಪಡಣೆ ಮಾಡಬೇಕು. ಇಬ್ಬನಿ ಹೆಚ್ಚು ಇರುವುದರಿಂದ ಬೂದಿರೋಗ, ಚಿಬ್ಬು ರೋಗ, ಅಂಗಮಾರಿ ರೋಗ ಬರಬಹುದು. ರೈತರು ಮುಂಜಾಗ್ರತವಾಗಿ ಔಷಧ ಸಿಂಪರಣೆ ಮಾಡಬೇಕು. ಜನವರಿ ತಿಂಗಳಿನಲ್ಲಿ ಮಳೆ ಏನಾದರೂ ಬಿದ್ದರೆ ಇಳುವರಿಗೆ ಹೊಡೆತ ಬೀಳಲಿದೆ. ಹೂವು ಹೆಚ್ಚಾಗಿ ಬಿಟ್ಟಿರುವುದರಿಂದ ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ತೋಟಗಾರಿಕೆ ಇಲಾಖೆ, ಮಾವು ಬೆಳೆಗಾರರ ಮಂಡಳಿಯಿಂದ ರೈತರಿಗೆ ಪ್ಯಾಕೇಜ್‌ ಹಾಗೂ ಹಣ್ಣುಗಳನ್ನು ತುಂಬಲು ಕ್ರೇಟ್‌, ಹೊರರಾಜ್ಯ ಮತ್ತು ಜಿಲ್ಲೆಗಳಿಗೆ ಹಣ್ಣನ್ನು ಸರಬರಾಜು ಮಾಡಲು ಬಾಕ್ಸ್‌ ನೀಡಲಾಗುತ್ತಿದೆ. ಮಾವು ಬೆಳೆಗಾರರಿಗೆ ಮಾರಾಟ ಮಾಡಲು ಮಾವು ಮಂಡಳಿಯಿಂದ ಅವಕಾಶವನ್ನು ರೈತರಿಗೆ ಕಲ್ಪಿಸಿ ಕೊಡಲಾಗುವುದು ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ತಿಳಿಸಿದ್ದಾರೆ.

ಮಾವು ಸಂರಕ್ಷಣಾ ಘಟಕಗಳಿಲ್ಲ:

ದೇವನಹಳ್ಳಿ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಮಾವಿನ ನಿಲ್ದಾಣ ಪ್ರಾರಂಭಗೊಂಡ ಮೇಲೆ ಲೇಔಟ್‌ ಮತ್ತು ಬಡಾವಣೆಗಳ ಹೆಚ್ಚಳದಿಂದ ಐಟಿಆರ್‌ ಮತ್ತು ಕೈಗಾರಿಕಾ ಪ್ರದೇಶಗಳು ಬರುತ್ತಿರುವುದರಿಂದ ತಾಲೂಕಿನ ಸಾಕಷ್ಟು ರೈತರು ಭೂಮಿಯನ್ನು ಕಳೆದುಕೊಂಡಿದ್ದಾರೆ. ಅಂತರ್ಜಲ ಮಟ್ಟ ಕುಸಿತ ಸೇರಿದಂತೆ ಹಲವು ಕಾರಣಗಳಿಂದ ಮಾವಿನ ಮರದ ಸಂಖ್ಯೆಯಲ್ಲಿ ತಾಲೂಕಿನಲ್ಲಿ ಪ್ರಮಾಣ ಕಡಿಮೆಯಾಗಿದೆ. ಮಧ್ಯಮ ಪ್ರಮಾಣದಲ್ಲಿ ಮಾವು ಬೆಳೆಯುತ್ತಿರುವ ಬೆಳೆಗಾರರಿಗೆ ಮಾರುಕಟ್ಟೆ ಇಲ್ಲದ ಕಾರಣ ಬೆಂಗಳೂರು ನಗರಕ್ಕೆ ಹೋಗಬೇಕು.  ಮಾರುಕಟ್ಟೆಗೆ ಹೋಗಲು ಆರ್ಥಿಕ ಸಮಸ್ಯೆ ಇದೆ. ಜತೆಗೆ ಮಾವು ಸಂರಕ್ಷಣಾ ಘಟಕಗಳಿಲ್ಲ. ಮರಗಳನ್ನೇ ಬೇರೆ ಜಿಲ್ಲೆಯ ವ್ಯಾಪಾರಿಗಳಿಗೆ ಮುಂಗಡ ಹಣ ಪಡೆದು, ಗುತ್ತಿಗೆ ನೀಡುತ್ತಿದ್ದಾರೆ. ಇದರಿಂದ ರೈತರು ಲಾಭಲ್ಲದೆ, ಮಾವಿರುಕಟ್ಟೆ ವ್ಯವಸ್ಥೆ ಬಗ್ಗೆ ಚಿಂತೆ ಪಡುವಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಸರ್ಕಾರ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆ ನೀಡಿದರೆ ರೈತರು ಆರ್ಥಿಕವಾಗಿ ಮುಂದುವರಿಯಲು ಸಾಧ್ಯಆಗುತ್ತದೆ. ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದಿರುವುದರಿಂದ ಬೇರೆ ಕಡೆಯಿಂದ ಬಂದವರಿಗೆ ಮಾವಿನ ತೋಟ ಗುತ್ತಿಗೆ ನೀಡಿ, ಅವರು ನೀಡುವ ಹಣ ಪಡೆಯುವಂತೆ ಆಗಿದೆ. -ಹರೀಶ್‌, ರೈತ, ಕೊಯಿರ

-ಎಸ್‌. ಮಹೇಶ್‌

ಟಾಪ್ ನ್ಯೂಸ್

Viral: ಸೆ**ಕ್ಸ್ ಗಾಗಿ 65ರ ಮುದಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Why KKR Dropped IPL Champion Captain Iyer?: CEO Answers

IPL ಚಾಂಪಿಯನ್‌ ಕ್ಯಾಪ್ಟನ್‌ ಅಯ್ಯರ್‌ ನನ್ನು ಕೆಕೆಆರ್‌ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ

16-kadaba

Kadaba: ಶಸ್ತ್ರಚಿಕಿತ್ಸೆ ವೇಳೆ ಹೃದಯಾಘಾತ; ಯುವಕ ಸಾವು

Waqf Issue: BJP protest against the Congress government across the state on November 4

Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Viral: ಸೆ**ಕ್ಸ್ ಗಾಗಿ 65ರ ಮುದಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Why KKR Dropped IPL Champion Captain Iyer?: CEO Answers

IPL ಚಾಂಪಿಯನ್‌ ಕ್ಯಾಪ್ಟನ್‌ ಅಯ್ಯರ್‌ ನನ್ನು ಕೆಕೆಆರ್‌ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.