ಗರಿಗೆದರಿದ ಮುಂಗಾರು ಕೃಷಿ ಚಟುವಟಿಕೆ
Team Udayavani, May 25, 2022, 1:43 PM IST
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆಯಿಂದ ತೋಟಗಾರಿಕೆ ಬೆಳೆಗಳಿಗೆಹಾನಿಯಾಗಿವೆ. ಈ ನಡುವೆ ನೀರಾವರಿ ಹಾಗೂಖುಷ್ಕಿ ಜಮೀನು ಹೊಂದಿರುವ ರೈತರು ಮುಂಗಾರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು, ಈ ಬಾರಿಯೂ ರಾಗಿ ಹೆಚ್ಚು ಬೆಳೆಯುವ ನಿರೀಕ್ಷೆಯಿದೆ.
ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಬಿದ್ದಿರುವುದರಿಂದ ಹಲವಾರು ಕೆರೆಗಳು ತುಂಬಿವೆ.ಸಣ್ಣ ಪುಟ್ಟ ಕೆರೆಗಳಿಗೆ ಸಮಾಧಾನಕರವಾಗಿ ನೀರುಬಂದಿವೆ. ನೀರಾವರಿ ಹೊಂದಿರುವ ರೈತರು ಮುಸುಕಿನಜೋಳ ಬಿತ್ತನೆ ಮಾಡುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಬಿತ್ತನೆ ಗುರಿ: ರಾಗಿ 13,793 ಹೆಕ್ಟೇರ್, ಮುಸುಕಿನಜೋಳ 7,270 ಹೆಕ್ಟೇರ್, ಭತ್ತ 22 ಹೆಕ್ಟೇರ್, ತೃಣಧಾನ್ಯ 12ಹೆಕ್ಟೇರ್, ಮೇವಿನಜೋಳ 1,220 ಹೆಕ್ಟೇರ್, ಪಾಪ್‌ಕಾರ್ನ್ 230 ಹೆಕ್ಟೇರ್ ಸೇರಿ ಏಕದಳ 22,547ಹೆಕ್ಟೇರ್‌ಗಳಾಗಿವೆ. ತೊಗರಿ 365 ಹೆಕ್ಟೇರ್, ಹುರುಳಿ170 ಹೆಕ್ಟೇರ್, ಅವರೆ 275 ಹೆಕ್ಟೇರ್, ಅಲಸಂದೆ 25ಹೆ. ಸೇರಿ ದ್ವಿದಳ ಧಾನ್ಯಗಳು ಒಟ್ಟು 835 ಹೆಕ್ಟೇರ್,ನೆಲಗಡಲೆ 110 ಹೆಕ್ಟೇರ್, ಎಳ್ಳು 5 ಹೆಕ್ಟೇರ್,ಹರಳು 75 ಹುಚ್ಚೆಳ್ಳು 20 ಹೆಕ್ಟೇರ್, ಸಾಸಿವೆ 50ಹೆಕ್ಟೇರ್, ಎಣ್ಣೆ ಕಾಳುಗಳು ಸೇರಿ 260 ಹೆಕ್ಟೇರ್ ಸೇರಿಎಲ್ಲ ಬೆಳೆಗಳನ್ನು 23,642 ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿಯನ್ನು ಹೊಂದಲಾಗಿದೆ.
ರಾಗಿ ಹೆಚ್ಚು, ಜೋಳ ಕಡಿಮೆ: ಕಳೆದ ಮುಂಗಾರಿನಲ್ಲಿ ರಾಗಿ 13,793 ಹೆಕ್ಟೇರ್, ಮುಸುಕಿನಜೋಳ 7,270ಹೆಕ್ಟೇರ್, ಗುರಿ ಹೊಂದಲಾಗಿ, ಗುರಿ ಮುಟ್ಟಲಾಗಿತ್ತು.ಈ ಬಾರಿ ರಾಗಿ 13,793 ಹೆಕ್ಟೇರ್, ಮುಸುಕಿನಜೋಳ7,270 ಹೆಕ್ಟೇರ್‌ಗಳ ಗುರಿ ಹೊಂದಿದ್ದು, ರಾಗಿ ಹೆಚ್ಚಾಗಿಬೆಳೆಯಲು ರೈತರು ಆಸಕ್ತಿ ತೋರುತ್ತಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸರ್ಕಾರದಿಂದಲೂರಾಗಿಗೆ ಲಾಭಾಂಶ ಬೆಲೆ ದೊರೆತು, ರೈತರು ಆಹಾರಮತ್ತು ನಾಗರಿಕ ಸರಬರಾಜು ಇಲಾಖೆಯ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿದ್ದರು. ಈಗ ಪಡಿತರ ಅಂಗಡಿಗಳಲ್ಲಿಯೂ ರಾಗಿ ವಿತರಣೆ ಮಾಡುತ್ತಿದ್ದು, ಸ್ಥಳೀಯವಾಗಿ ರಾಗಿ ಬಳಕೆ ಹೆಚ್ಚಾಗುತ್ತಿರುವುದು ಕಂಡು ಬಂದಿದೆ.
ರಾಗಿ ಖರೀದಿ ಮಿತಿ ಹೆಚ್ಚಳ ಮಾಡುವಂತೆ ಹಾಗೂ ದೊಡ್ಡ ಹಿಡುವಳಿ ರೈತರ ಬಳಿಯೂ ರಾಗಿ ಖರೀದಿ ಮಾಡುವಂತೆ ರೈತರು ಒತ್ತಾಯಿಸಿದ್ದರು. ಸರ್ಕಾರದಿಂದರಾಗಿ ಖರೀದಿ ನೋಂದಣಿ ಪ್ರಕ್ರಿಯೆ ನಿಲ್ಲಿಸಿ ಮತ್ತೆ ಖರೀದಿಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸೈನಿಕ ಹುಳು ಬಾಧೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ 3 ವರ್ಷಗಳಿಂದ ಜೋಳದ ಬೆಳೆಗೆ ಹೊಸ ರೀತಿಯ ನ್ಪೊಡಾಪ್ಟರಾ ಜಾತಿಗೆ ಸೇರಿದ ಸೈನಿಕಹುಳು ಬಾಧೆ ಕಾಣಿಸಿಕೊಂಡು ತಾಲೂಕಿನ ರೈತರುಹೆಚ್ಚಾಗಿ ರಾಗಿ ಬೆಳೆದಿದ್ದರು. ತಾಲೂಕಿನಲ್ಲಿ ನೀಲಗಿರಿಮರಗಳನ್ನು ಕಟಾವು ಮಾಡಿ ಆ ಪ್ರದೇಶಗಳಲ್ಲಿಹೆಚ್ಚಾಗಿ ರಾಗಿ ಬೆಳೆಯಲಾಗಿತ್ತು. ಇದರಿಂದ ಜೋಳಕ್ಕೂ ಸಹ ಬೆಲೆ ದೊರೆತಿತ್ತು. ಈಗಲೂ ರಾಗಿ ಹೆಚ್ಚಾಗಿ ಬೆಳೆಯಲು ರೈತರು ಆಸಕ್ತಿ ವಹಿಸುತ್ತಿದ್ದಾರೆ.
ಏಕ ಬೆಳೆ ಪದ್ಧತಿ ಮೇಲೆ ಅವಲಂಬಿತ: ತಾಲೂಕಿನಲ್ಲಿ ಈ ಹಿಂದೆ ಬೆಳೆಯುತ್ತಿದ್ದ ತೃಣ ಧಾನ್ಯಗಳ ಪ್ರಮಾಣ ಕಡಿಮೆಯಾಗಿದೆ. ಹೆಸರು, ಉದ್ದು, ಸೂರ್ಯಕಾಂತಿ,ಕಬ್ಬು ಇತರ ಧಾನ್ಯಗಳು ಪ್ರತಿವರ್ಷ ಮುಂಗಾರುಗುರಿಯ ಪಟ್ಟಿಯಿಂದಲೇ ಮರೆಯಾಗುತ್ತಿದ್ದು, ರೈತರು ಏಕ ಬೆಳೆ ಪದ್ಧತಿ ಮೇಲೆ ಅವಲಂಬಿತವಾಗುತ್ತಿರುವುದು ಕಂಡು ಬರುತ್ತಿದೆ.
ತಾಲೂಕಿನ ವಿವಿಧೆಡೆ ವಾಡಿಕೆಗಿಂತ ಅಧಿಕ ಮಳೆ : ಕೃಷಿ ಇಲಾಖೆ ಅಂಕಿ-ಅಂಶದಂತೆ ಜನವರಿಯಿಂದಮೇ ತಿಂಗಳ ಅಂತ್ಯಕ್ಕೆ ವಾಡಿಕೆ ಮಳೆ 134 ಮಿ.ಮೀ. ಆಗಬೇಕಿದ್ದು, 321 ಮಿ.ಮೀ. ಮಳೆ ಬಿದ್ದಿದೆ. ತಾಲೂಕಿನ ಐದು ಹೋಬಳಿಗಳ ಪೈಕಿಹೆಚ್ಚಿನ ಮಳೆ ಈ ಬಾರಿ ಮಧುರೆ ಹೋಬಳಿಯಲ್ಲಿ378 ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಕಸಬಾಹೋಬಳಿಯಲ್ಲಿ 327 ಮಿ.ಮೀ. ಮಳೆ ಬಿದ್ದಿದೆ.ದೊಡ್ಡಬೆಳವಂಗಲ 328 ಮಿ.ಮೀ. ಬಿದ್ದಿದೆ.ತೂಬಗೆರೆ ಹೋಬಳಿಯಲ್ಲಿ 299 ಮಿ.ಮೀ., ಸಾಸಲು ಹೋಬಳಿ 282 ಮಿ.ಮೀ. ಮಳೆ ಬಿದ್ದಿದೆ.
ಬಿತ್ತನೆ ಬೀಜ ದಾಸ್ತಾನು : ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿಅಗತ್ಯ ಇರುವ ಬಿತ್ತನೆ ಬೀಜ ದಾಸ್ತಾನುಮಾಡಲಾಗಿದೆ. ಕೃಷಿ ಇಲಾಖೆಯಿಂದ ತಾಲೂಕಿಗೆರಾಗಿ 718 ಕ್ವಿಂಟಲ್, ಮುಸುಕಿನ ಜೋಳ 400ಕ್ವಿಂಟಲ್‌ಗೆ ಬೇಡಿಕೆ ಸಲ್ಲಿಸಲಾಗಿದೆ. ಅಲಸಂದೆ11ಕ್ವಿಂಟಲ್, ತೊಗರಿ 24 ಕ್ವಿಂಟಲ್, ಹಾಗೂನೆಲಗಡಲೆ 50 ಕ್ವಿಂಟಲ್ ಒಟ್ಟು 1,200 ಕ್ವಿಂಟಲ್‌ಬೀಜಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.ಇನ್ನೂ ಹೆಚ್ಚಿನ ಪ್ರಸ್ತಾವನೆ ಬಂದರೆ ಪೂರೈಸುವಕ್ರಮ ಕೈಗೊಳ್ಳಲಾಗುವುದು. ಡಿಎಪಿ, ಎಂಒಪಿ,ಎನ್‌ಪಿಕೆಎಸ್, ಯೂರಿಯಾ, ಎಸ್‌ಎಸ್‌ಪಿರಸಗೊಬ್ಬರಗಳು 617 ಟನ್ ದಾಸ್ತಾನಿದೆ ಎಂದುತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಶೀಲಮ್ಮ ತಿಳಿಸಿದ್ದಾರೆ.
-ಡಿ. ಶ್ರೀಕಾಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.