ಹಾರೋಹಳ್ಳಿ ಕಸಾಯಿಖಾನೆ ವಿರೋಧಿ ಬೃಹತ್ ಪ್ರತಿಭಟನೆ : ಹೆದ್ದಾರಿ ತಡೆ
Team Udayavani, Mar 24, 2017, 11:48 AM IST
ಕನಕಪುರ: ತಾಲೂಕಿನ ಹಾರೋಹಳ್ಳಿಯ ಸಿದ್ಧಾಪುರದ ಬಳಿ ಬಿಬಿಎಂಪಿ ವತಿಯಿಂದ ಸರ್ಕಾರ ಸ್ಥಾಪನೆ ಮಾಡಲು ಹೊರಟಿರುವ ಕಸಾಯಿಖಾನೆ ವಿರುದ್ಧ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀಸ್ವಾಮೀಜಿ ನೇತೃತ್ವದಲ್ಲಿ ಹಾರೋಹಳ್ಳಿ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ಹಾಗೂ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಶುಕ್ರವಾರ ನಡೆಸಲಾಗುತ್ತಿದೆ.
ರಾಮಚಂದ್ರಪುರ ಮಠದ ಹಾರೋಹಳ್ಳಿ ಗೋಪರಿವಾರ ಹಾಗೂ ಕನಕಪುರ ಮೇಕೆದಾಟು ಹೋರಾಟ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆಸಲಾಗುತ್ತಿರುವ ಕಸಾಯಿಖಾನೆ ವಿರೋಧಿಸಿ ಉಪವಾಸ ಸತ್ಯಾಗ್ರಹದಲ್ಲಿ 300ಕ್ಕೂ ಹೆಚ್ಚು ಸಂತರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರು -ಮೈಸೂರು ಹೆದ್ದಾರಿ ತಡೆ
ಪ್ರತಿಭಟನಾ ನಿರತರು ಬೆಂಗಳೂರು -ಮೈಸೂರು ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸ್ವಾಮೀಜಿಗಳು, ರಾಜಕೀಯ ಮುಖಂಡರು ಭಾಗಿ
ತಾಲೂಕಿನ ಶಿವಶಂಕರ ಶಿವಾಚಾರ್ಯಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಚಂದ್ರಶೇಖರ ಶಿವಾ ಚಾರ್ಯ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಮೃತ್ಯಂಜಯಸ್ವಾಮೀಜಿ, ಶಿವಾನಂದ್ ಸ್ವಾಮೀಜಿ, ನಿಜಗುಣಸ್ವಾಮೀಜಿ, ಇಮ್ಮಡಿ ಸಿದ್ದಲಿಂಗಸ್ವಾಮೀಜಿ, ಜಗದೀಶ ಶಿವಾಚಾರ್ಯ ಸ್ವಾಮೀಜಿ, ಮಹಾಲಿಂಗಸ್ವಾಮೀಜಿ, ರುದ್ರ ಮುನಿ ಶಿವಾಚಾರ್ಯ, ಬಸವಪ್ರಭು, ಮಾಗಡಿ ತಾಲೂಕಿ ನಿಂದ ಬಸವಲಿಂಗಸ್ವಾಮೀಜಿ, ಮಲಯಮುನಿ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಇಮ್ಮಡಿ ಬಸವರಾಜ ಸ್ವಾಮೀಜಿ, ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಪುರುಷೋತ್ತಮ ಭಾರತೀ ಸ್ವಾಮೀಜಿ, ಹಿರಿಯ ಸ್ವಾತಂತ್ರ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ಎಚ್.ನರಸಿಂಹಯ್ಯ, ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಸುರೇಶ್ ಕುಮಾರ್, ಬಿಬಿಎಂಪಿ ವಿರೋಧಪಕ್ಷದ ನಾಯಕ ಪದ್ಮನಾಭರೆಡ್ಡಿ, ಮಾಜಿ ಕಾರ್ಪೊàರೆಟರ್ ಗೋವಿಂದರಾಜು , ಪ್ರಮಿಳಾ ನೇಸರ್ಗಿ, ಶ್ರೀರಾಮದಾಸ್, ಎನ್.ರವಿಕುಮಾರ್, ಗೋ ಪ್ರಕೋಷ್ಠ ರಾಜ್ಯ ಕಾರ್ಯದರ್ಶಿ ಸುಂದರರಾಜ ರೈ,ರವಿಸುಬ್ರಹ್ಮಣ್ಯ, ಮಾಜಿ ಉಪಸಭಾಪತಿ ಎಸ್. ಪುಟ್ಟಣ್ಣ ಇತರರು ಭಾಗವಹಿಸಿದ್ದಾರೆ.
ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಮಳವಳ್ಳಿ, ಮೈಸೂರು, ತುಮಕೂರು, ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 15ಸಾವಿರಕ್ಕೂ ಹೆಚ್ಚು ಗೋ ಪ್ರೇಮಿಗಳು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
ಹಾರೋಹಳ್ಳಿಯ ಅರುಣಾಚಲೇಶ್ವರ ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಮಲ್ಲಪ್ಪ ನೇತೃತ್ವದಲ್ಲಿ ವಕೀಲರಾದ ರಾಜು, ಮುರಳಿ, ಬಿ.ನಾಗರಾಜು, ದಲಿತ ಸೇನೆ ಅಶೋಕ್ ತುಂಗಣಿ, ಉಮೇಶ್, ಗಿರೀಶ್, ಈರೇಗೌಡ, ಕಡಸಿಕೊಪ್ಪ ಬಾಲಾಜಿ, ಭೀಮಯ್ಯ, ನಂಜರಾಜರಸು, ಡಾ.ಕೃಷ್ಣಮೂರ್ತಿ, ಸಂಪತ್ ಕುಮಾರ್ ಮತ್ತಿತರರು ಭಾಗವಹಿಸಿದ್ದಾರೆ.
ಬಿಗಿ ಭದ್ರತೆ
ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ಹಾರೋಹಳ್ಳಿ ಸರ್ಕಲ್ ಬಳಿ ಹಾರೋಹಳ್ಳಿ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಎಎಸ್‌ಪಿ ಸೇರಿದಂತೆ 5 ಸರ್ಕಲ್ ಇನ್ಸ್‌ಪೆಕ್ಟರ್, 15 ಸಬ್ ಇನ್ಸ್‌ಪೆಕ್ಟರ್, 25 ಎಎಸ್‌ಐ 150ಕ್ಕೂ ಹೆಚ್ಚು ಹೆಡ್ ಕಾನ್ಸ್‌ಸ್ಟೆಬಲ್ ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಸರ್ಕಲ್ ಇನ್ಸ್
ಪೆಕ್ಟರ್ ಬಿ.ಎನ್.ಶ್ರೀನಿವಾಸ್ ಮತ್ತು ಸಬ್ ಇನ್ಸ್ ಪೆಕ್ಟರ್ ಅನಂತರಾಮು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.