ದೇಗುಲಗಳಿಂದ ಮನಸಿಗೆ ನೆಮ್ಮೆದಿ
Team Udayavani, Sep 6, 2020, 12:31 PM IST
ದೇವನಹಳ್ಳಿ: ಪತ್ರಿ ಗ್ರಾಮದಲ್ಲೂ ದೇವಾಲಯಗಳು ನಿರ್ಮಾಣವಾದರೆ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ದೊರೆಯುವುದು ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ. ಶಾಂತಕುಮಾರ್ ತಿಳಿಸಿದರು.
ತಾಲೂಕಿನ ಇಲತೊರೆ ಗ್ರಾಮದ ಶ್ರೀದೇವಿ ಭೂದೇವಿ ಸಮೇತ ಶ್ರೀ ಮುತ್ತುರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿ ಮಾತನಾಡಿದರು. ಇತಿಹಾಸ ಪ್ರಸಿದ್ಧ ದೇವಾಲಯಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲಾಗುತ್ತಿದೆ. ದೇವರಲ್ಲಿ ಕೇಳಿಕೊಳ್ಳುವುದೇನೆಂದರೆ ಕಷ್ಟಗಳನ್ನು ನಿರ್ಭಯವಾಗಿ ಎದುರಿಸುವ ಶಕ್ತಿ ನೀಡಲಿ. ಮಳೆ ತಂದು ರೈತರು ಸಂತೃಪ್ತಿ ಜೀವನ ನಡೆಸುವಂತೆ ಆಗಲಿ. ಆಧುನಿಕತೆ ಬೆಳೆಯುತ್ತಿರುವುದರಿಂದ ಪ್ರತಿ ನಿತ್ಯ ಮನುಷ್ಯ ಒಂದೆಲ್ಲಾ ಒಂದು ರೀತಿ ಜೀವನದಲ್ಲಿ ಒತ್ತಡದಿಂದ ಸಾಗಿಸುತ್ತಿದ್ದು ದಿನದಲ್ಲಿ ಒಂದು ಗಂಟೆಯಾದರೂ ದೇವರ ಧ್ಯಾನಕ್ಕೆ ಸಮಯ ಮೀಸಲು ಇಡಬೇಕು ಎಂದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ತಾಲೂಕಿನ ಇಲತೊರೆ ಗ್ರಾಮದ 30-40 ಇತಿಹಾಸವಿರುವ ಶ್ರೀ ಮುತ್ತುರಾಯ ಸ್ವಾಮಿ ದೇವಸ್ಥಾನಕ್ಕೆ ಸಮಾಜ ಸೇವಕ ಶಾಂತಕುಮಾರ್ ದೇವತಾ ಕಾರ್ಯಕ್ಕೆ ಧನ ಸಹಾಯ ಚೆಕ್ ನೀಡಿದ್ದು, ತಾಲೂಕಿನ ಅನೇಕ ದೇವಾಲಯಗಳಿಗೂ ಇವರ ಕೊಡುಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ದೇವಾಲಯಕ್ಕೆ ಇನ್ನು ಹೆಚ್ಚಿನ ಸಹಾಯ ಮಾಡ ಲಾಗುವುದು ಎಂದು ಹೇಳಿದರು.
ಬೆಂಗಳೂರು ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಜೋಗಳ್ಳಿ ಸೋಮಣ್ಣ, ಗ್ರಾಪಂ ಮಾಜಿ ಸದಸ್ಯರಾದ ಚನ್ನ ಕೇಶವ, ಲಕ್ಷ್ಮೀಕಾಂತ್, ಮುನಿಶಾಮಪ್ಪ, ಹರೀಶ್, ದ್ವಾರಕೀಶ್, ಮೂರ್ತಿ, ನಾಗೇಶ್, ವೆಂಕಟಸ್ವಾಮಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.