ನಾಪತ್ತೆಯಾಗಿದ್ದ ಎಮ್ಮೆಗಳು Facebook ಮೂಲಕ ಮರಳಿ ಹಟ್ಟಿಗೆ!
Team Udayavani, Nov 30, 2017, 4:07 PM IST
ಹೊಸಕೋಟೆ : ನೀವು ನಾಪತ್ತೆಯಾಗಿದ್ದ ವ್ಯಕ್ತಿಗಳು ಫೇಸ್‌ಬುಕ್ ಮೂಲಕ ಪತ್ತೆಯಾಗಿರುವ ಕೆಲ ಘಟನೆಗಳ ಬಗ್ಗೆ ಕೇಳಿರಬಹುದು. ಆದರೆ ಇಲ್ಲಿ ನಾಪತ್ತೆಯಾಗಿದ್ದ ಎಮ್ಮೆಗಳರಡು ಫೇಸ್ ಬುಕ್ ಮೂಲಕ ಮರಳಿ ಕೊಟ್ಟಿಗೆ ಸೇರಿವೆ.
ಈಸ್ತೂರು ಗ್ರಾಮದ ನಾರಾಯಣ ಸ್ವಾಮಿ ಎನ್ನುವವರ 2 ಎಮ್ಮೆಗಳು ಸೋಮವಾರ ಮೇಯಲು ಬಿಟ್ಟಲ್ಲಿಂದ ಕಾಣೆಯಾಗಿದ್ದವು. ಹಾಲು ಮಾರಿಕೊಂಡೇ ಜೀವನ ಮಾಡುತ್ತಿದ್ದ ನಾರಾಯಣ ಸ್ವಾಮಿ ಎಮ್ಮೆಗಳು ಕಾಣದಾದಾಗ ಕಂಗಾಲಾಗಿ ಸುತ್ತ ಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದರು.
ಈಸ್ತೂರು ಗ್ರಾಮದಿಂದ 10 ಕಿ.ಮೀ ದೂರದ ಊರಿಗೆ ಪ್ರಯಾಣಿಸಿದ್ದ ಎಮ್ಮೆಗಳನ್ನು ಅಲ್ಲಿನ ಮೋಹನ್ ಗೌಡ ಎನ್ನುವವರು ಕಟ್ಟಿ ಹಾಕಿ ಹುಲ್ಲು ನೀರು ನೀಡಿದ್ದರು. ಮಾಲೀಕರನ್ನು ಪತ್ತೆ ಹಚ್ಚುವ ಉದ್ದೇಶದಿಂದ ಈ ಎಮ್ಮೆಗಳು ಯಾರದ್ದು ನೋಡಿ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.
ಫೇಸ್‌ಬುಕ್ ಪೋಸ್ಟ್ ನೋಡಿದ ಈಸ್ತೂರಿನ ಯುವಕನೊಬ್ಬ ನಾರಾಯಣ ಸ್ವಾಮಿಗೆ ಅವರಿಗೆ ಮಾಹಿತಿ ನೀಡಿ ಎಮ್ಮೆಗಳು ಮತ್ತೆ ಕೊಟ್ಟಿಗೆ ಸೇರುವಂತೆ ಮಾಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.